fbpx
ರಾಜಕೀಯ

ಮೋದಿ ವಿರುದ್ಧ ರಣಕಹಳೆ ಊದಿದ ವಾಟಾಳ್ ನಾಗರಾಜ.. ಜನವರಿ 27ಕ್ಕೆ ಕರ್ನಾಟಕ ಬಂದ್

ಮೋದಿ ವಿರುದ್ಧ ರಣಕಹಳೆ ಊದಿದ ವಾಟಾಳ್ ನಾಗರಾಜ..
ಜನವರಿ 27ಕ್ಕೆ ಕರ್ನಾಟಕ ಬಂದ್

ನವೆಂಬರ್ 1 ರಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹುಬ್ಬಳಿ ಹಾಗು ಬೆಂಗಳೂರಿನ ವಿಜಯನಗರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಆಗಮಿಸಿದ್ದರು. ಈಗ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭವನ್ನುದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ನಿರ್ಧರಿಸಿರುವ BJP ಪ್ರಧಾನಿ ಮೋದಿಯರನ್ನು ಆಹ್ವಾನಿಸಿದ್ದಾರೆ.

 

 

ಸಮಾರೋಪ ಸಮಾರಂಭ ನಡೆಯುವ ಮುನ್ನ ದಿನವಾದ ಜನೆವರಿ 27 ರಂದು ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿವೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಕರ್ನಾಟಕ ಬಂದ್ ದಿನವೇ ಬೃಹತ್ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ವಾಟಾಳ್ ನಾಗರಾಜ್ ಹೇಳಿದರು. ಮಹದಾಯಿ ವಿಚಾರವಾಗಿ ಸಮಸ್ಯೆ ಬಗೆ ಹರಿಸುವುದಾಗಿ ವಾಗ್ದಾನ ಮಾಡಿದ್ದ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಅಹೋರಾತ್ರಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು.

 

 

ಜನೆವರಿ 27 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೂ ಪ್ರತಿಭಟನೆ ನದಿಯಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದು. ಪ್ರತಿಭಟನೆಗೆ ಎಲ್ಲರು ಬೆಂಬಲ ಸೂಚಿಸಿ ಎಂದು ಮನವಿ ಮಾಡಿದ್ದಾರೆ. ಕನ್ನಡಿಗರ ಶಕ್ತಿಯನ್ನು ಮೋದಿಯವರಿಗೆ ಮುಟ್ಟಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ. ಕನ್ನಡವೂ ಚಿತ್ರರಂಗವೂ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

 

 

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯ ಮೂಲವಾಗಲಿರುವ ಮಹದಾಯಿ, ಕಳಸಾ- ಬಂಡೂರಿ ನದಿ ಜೋಡಣೆ ನೆರೆಯ ಗೋವಾ ತೆಗೆದಿರುವ ಖ್ಯಾತೆ ಬಗೆಹರಿದು ನಮ್ಮ ಜನರಿಗೆ ಸಿಗಲಿ ಎಂದು ಆಶಿಸೋಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top