fbpx
ರಾಜಕೀಯ

‘ಪಾಡ್ ಟ್ಯಾಕ್ಸಿ’ ಟೆಂಡರ್ ಯಶಸ್ವಿಯಾಗಿ ಪಡೆದ ಸಚಿವ ಜಾರ್ಜ್ ಸಹಭಾಗಿತ್ವದ ಕಂಪನಿ

‘ಪಾಡ್ ಟ್ಯಾಕ್ಸಿ’ ಟೆಂಡರ್ ಯಶಸ್ವಿಯಾಗಿ ಪಡೆದ ಸಚಿವ ಜಾರ್ಜ್ ಸಹಭಾಗಿತ್ವದ ಕಂಪನಿ

 

ಬೆಂಗಳೂರಿನಲ್ಲಿ ವಾಹನ ದಟ್ಟಣೆ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದನ್ನು ಪರಿಹರಿಸಲು ಬಿಬಿಎಂಪಿ ಒಂದಲ್ಲ ಒಂದು ಯೋಜನೆ ಜಾರಿಗೆ ತರುತ್ತಲೇ ಇದೆ ಆದರೆ ಕೊಂಚ ಮಟ್ಟಿಗೆ ಟ್ರಾಫಿಕ್ ಕಡಿಮೆಯಾದರೂ ಇನ್ನು ಟ್ರಾಫಿಕ್ ಸಮಸ್ಯೆ ಹಾಗೆಯೆ ಇದೆ. ಈಗ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಮತ್ತೊಂದು ಯೋಜನೆ ಪರಿಚಯಿಸುತ್ತಿದೇ, ‘ಪಾಡ್‌ ಟ್ಯಾಕ್ಸಿ’ ಯೋಜನೆ ಅನುಷ್ಠಾನಕ್ಕೆ ಟೆಂಡರ್‌ ಆಹ್ವಾನಿಸಿದ್ದರು ಇದನ್ನು ಸಚಿವ ಕೆಜೆ ಜಾರ್ಜ್ ಅವರ ಎಂಬೆಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವಂತಹ ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈವೇಟ್ (ಎಸ್‍ಪಿಆರ್ ಟಿಎಸ್) ಲಿಮಿಟೆಡ್ ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

 

 

ಪಾಡ್‌ ಟ್ಯಾಕ್ಸಿ ಯೋಜನೆಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸಮಗ್ರ ವರದಿ ನೀಡಿದ ನಂತರ, ಈ ಯೋಜನೆಗೆ ಹಸಿರು ನಿಶಾನೆ ತೋರಲಾಗಿದೆ. ಯೋಜನೆ ಅನುಷ್ಠಾನಕ್ಕೂ ಮುಂಚೆ ಇದು ನಗರಕ್ಕೆ ಪೂರಕವೇ, ಇದರಿಂದ ಸಂಚಾರ ದಟ್ಟಣೆ ತಗ್ಗಿಸಲು ಸಾಧ್ಯವೇ ಎನ್ನುವುದನ್ನು ಸಮಗ್ರ ಅಧ್ಯಯನ ನಡೆಸಿ, ವರದಿ ನೀಡಲು ಐಐಎಸ್‌ಸಿ ವಿಜ್ಞಾನಿಗಳಿಗೆ ಮನವಿ ಮಾಡಲಾಗಿತ್ತು. ಸಮಗ್ರ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಸಕಾರಾತ್ಮಕ ವರದಿ ಕೊಟ್ಟಿದ್ದಾರೆ’ ಎಂದು ತಿಳಿದು ಬಂದಿದೆ. ಪ್ರತಿ ಕಿ.ಮೀ ಮಾರ್ಗಕ್ಕೆ ಸುಮಾರು 50 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. 2019 ರ ಅಂತ್ಯದೊಳಗೆ ಈ ಯೋಜನೆಯನ್ನು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ಸುಮಾರು 5 ರಿಂದ 6 ಜನರು ಪ್ರಯಾಣಿಸಬಹುದಾದ ಈ ಟ್ಯಾಕ್ಸಿಯಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಷಣಾರ್ಧದಲ್ಲಿ ತಲುಪಬಹುದಾಗಿದೆ. ಆಟೋ ದರಕ್ಕೆ ಹೋಲಿಸಿದರೆ ಈ ಟ್ಯಾಕ್ಸಿ ದರ ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಿಂದ ಲೀಲಾಪ್ಯಾಲೇಸ್, ಮಾರತ್ ಹಳ್ಳಿ, ಇಪಿಐಸಿ ಜಂಕ್ಷನ್ ಹಾಗೂ ಎಂ.ಜಿ.ರಸ್ತೆ ಮೆಟ್ರೋ ಸ್ಟೇಷನ್ ನಿಂದ ಕೋರಮಂಗಲ, ಜಯನಗರ 4ನೇ ಬ್ಲಾಕ್ ನಿಂದ ಜೆಪಿನಗರ 6ನೇ ಹಂತದ ಮಾರ್ಗಗಳಲ್ಲಿ ಪಾಡ್ ಟ್ಯಾಕ್ಸಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸದಾ ಕಾಲ ಟ್ರಾಫಿಕ್ ಜಾಮ್ ನಿಯಂತ್ರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಜಾರಿಗೆ ತರಲು ನಿರ್ಧರಿಸಿರು ಪಾಡ್ ಟ್ಯಾಕ್ಸಿ ಯೋಜನೆ ನಿಜಕ್ಕೂ ಬೆಂಗಳೂರು ನಗರಕ್ಕೆ ಅತ್ಯಗತ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top