fbpx
ರಾಜಕೀಯ

ಮಾಲಾಶ್ರೀ ಹಾಗು ಸಾಧು ಕೋಕಿಲ ಕಾಂಗ್ರೆಸ್ ಸೇರಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ??

ಮಾಲಾಶ್ರೀ ಹಾಗು ಸಾಧು ಕೋಕಿಲ ಕಾಂಗ್ರೆಸ್ ಸೇರಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ??

 

2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ತಯ್ಯಾರಿ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಚಿತ್ರರಂಗದ ನಟ ನಟಿಯರಿಗೆ ಸಂಪರ್ಕ ಮಾಡುತ್ತಿದ್ದಾರೆ ನಟಿ ಮಾಲಾಶ್ರೀ ಹಾಗು ಹಾಸ್ಯನಟ ಸಾಧುಕೋಕಿಲ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ಮಾಧ್ಯಮಕ್ಕೆ ಮಾತನಾಡಿರುವ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮಾಲಾಶ್ರೀ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. ಕನಕಪುರದಲ್ಲಿ ನಡೆಯಲಿರುವ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಸಾಧುಕೋಕಿಲ ಹಾಗು ಮಾಲಾಶ್ರೀ ಭಾಗವಹಿಸಲಿದ್ದು ಇದೆ ಸಂಧರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ.

 

 

ಕಳೆದ ವಾರವಷ್ಟೇ ಸುದೀಪ್ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು. ಸುದೀಪ್ ಹಾಗು ಕುಮಾರಸ್ವಾಮಿ ಅವರು ರಾಜಕೀಯ ವಿಷಯವಾಗಿ ಚರ್ಚೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top