ಕ್ರೈಂ ಸ್ಟೋರಿ

7ರ ಬಾಲಕಿ ಮೇಲೆ ರೇಪ್ ಮಾಡಿದ ಪೊಲೀಸ್. ಪೊಲೀಸ್ ನನ್ನೇ ಥಳಿಸಿ ಪೊಲೀಸ್ ಠಾಣಿಗೆ ಒಪ್ಪಿಸಿದ ಸಾರ್ವಜನಿಕರು.

7ರ ಬಾಲಕಿ ಮೇಲೆ ರೇಪ್ ಮಾಡಿದ ಪೊಲೀಸ್.
ಪೊಲೀಸ್ ನನ್ನೇ ಥಳಿಸಿ ಪೊಲೀಸ್ ಠಾಣಿಗೆ ಒಪ್ಪಿಸಿದ ಸಾರ್ವಜನಿಕರು.

ಉತ್ತರ ಪ್ರದೇಶದ ನೋಯ್ಡಾದಲ್ಲಿ 7 ವರ್ಷ ವಯಸ್ಸಿನ ಪುಟ್ಟ ಹುಡುಗಿಯ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.

ನೋಯ್ಡಾದಲ್ಲಿರುವ ಬುದ್ಧ ನಗರದ ತೆರಿಗೆ ಆಫೀಸ್ ಹತ್ತಿರ ಪೊಲೀಸ್ ಪೇದೆಯನ್ನು ಕೆಲಸಕ್ಕಾಗಿ ನಿಯೋಜಿಸಿದ್ದ ಸಮಯದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿ ಪೇದೆಯನ್ನು ಸುಭಾಷ್ ಸಿಂಗ್ (45) ಗುರುತಿಸಲಾಗಿದೆ.

 

 

ಸೂರಜಪುರ್ ಬಳಿ ಪುಟ್ಟ ಹುಡುಗಿಯನ್ನ 10 ರೂ ತೋರಿಸಿ ತನ್ನ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಪುಟ್ಟ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು ಅಲ್ಲಿನ ಸಾರ್ವಜನಿಕರು ಬಾಲಕಿಯನ್ನು ಕೂಡಲೇ ರಕ್ಷಿಸಿದ್ದಾರೆ. ಆದರೆ ಪೊಲೀಸ್ ಪೇದೆಯನ್ನು ಹಿಡಿಯುವುದರಲ್ಲಿ ವಿಫಲರಾಗಿದ್ದಾರೆ.

 

 

ಮಾರನೇ ದಿನ ಮುಂಜಾನೆ ಸುಮಾರು 4 ಗಂಟೆಯ ಸಮಯಕ್ಕೆ ಪೊಲೀಸ್ ಪೇದೆ ತನ್ನ ಮನೆಗೆ ಹಿಂತಿರುಗಿದ್ದಾನೆ, ಅವನನ್ನು ನೋಡಿದ ಅಲ್ಲಿನ ಜನರು ಆತನನ್ನು ಹಿಡಿದುಕೊಂಡು, ಸರಿಯಾಗಿ ಥಳಿಸಿ ಪೊಲೀಸ್ ನನ್ನೇ ಪೊಲೀಸ್ ಠಾಣಿಗೆ ಒಪ್ಪಿಸಲಾಗಿದೆ.

ಆ ಪುಟ್ಟ ಬಾಲಕಿಯ ತಾಯಿಯು ಆರೋಪಿ ಪೇದೆಯ ಮೇಲೆ ದೂರು ನೀಡಿದ್ದು, ಸೂರಜ್‍ಪುರ ಪೊಲೀಸ್ ಠಾಣೆ ಅಧಿಕಾರಿ ಅಖಿಲೇಶ್ ಪ್ರಧಾನ್ ಹೇಳುವ ಪ್ರಕಾರ ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ನೋಯ್ಡಾದ ಮೆಡಿಕಲ್ ಆಸ್ಪತ್ರಗೆ ಪುಟ್ಟ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top