ಮಾಹಿತಿ

ಸಾಯೋದ್ರೊಳಗೆ ಒಮ್ಮೆ ನೋಡು… ಶೌಚದ ಬಂಡೀ , ಪ್ಲಶ್ ಮಾಡದೆ ಸ್ಟಾಕ್‍ನೊಂದಿಗೆ ಹೋಗುವಾಗ ದಾರಿ ಸುಲಭವಾಗಿ ಸಿಗುತ್ತೆ

ಸಾಯೋದ್ರೊಳಗೆ ಒಮ್ಮೆ ನೋಡು… ಶೌಚದ ಬಂಡೀ , ಪ್ಲಶ್ ಮಾಡದೆ ಸ್ಟಾಕ್‍ನೊಂದಿಗೆ ಹೋಗುವಾಗ ದಾರಿ ಸುಲಭವಾಗಿ ಸಿಗುತ್ತೆ

ಶೌಚಬಂಡಿ

ಈ ವೆಹಿಕಲ್‍ನ ಮತ್ತೊಂದು ‘ಅಡ್ವಾಂಟೇಜ್’ ಏನೆಂದು ಗೊತ್ತಾ?

‘ಅಪಘಾತಕ್ಕೆ ಅವಸರವೇ ಕಾರಣ’ ಈ ಘೋಷವಾಖ್ಯವನ್ನು ಕನ್ನಡಿಗರು ಅರ್ಥ ಮಾಡಿಕೊಂಡಿರುವ ರೀತಿಗೂ ಇವನ ತಿಳಿವಳಿಕೆಗೂ ವ್ಯತ್ಯಾಸವಿರಬೇಕು! ಹೀಗಾಗಿಯೇ ಈ ಶೌಚಬಂಡಿ ತಯಾರಿಸಿರಬೇಕು?

ಗಂಟೆಗೆ 55 ಮೈಲಿ ವೇಗದಲ್ಲಿ ಚಲಿಸುತ್ತಾ ‘ಅವಸರ’ತೀರಿಸಿಕೊಳ್ಳಬಹುದಂತೆ. ‘ಅಂತೆ’ ಏನು ಬಂತು…ಲಕ್ಷಣವಾಗಿ ತನ್ನ ಅವಸರವನ್ನು ತೀರಿಸಿಕೊಂಡಿದ್ದಾನೆ!

 

 

ಹಾಗೆಂದು ಈ ಬಂಡಿ ‘ಅವಸರದ’ ನಿರ್ಧಾರವಲ್ಲ-3 ತಿಂಗಳ ಪರಿಶ್ರಮಹಾಕಿದ್ದಾನೆ.

140 ಸಿ.ಸಿಯ ಬೈಕ್ ಎಂಜಿನ್ ಕಳಚಿದ್ದಾನೆ. ಗಟ್ಟಿ ತಗಡು, ಟೂವೀಲರ್ ಹ್ಯಾಂಡಲ್, ಬ್ರೇಕ್…ಎಲ್ಲವನ್ನೂ ಜೋಡಿಸಿ, ಟಾಯ್ಲೆಟ್‍ವೆಹಿಕಲ್ ನಿರ್ಮಿಸಿದ್ದಾನೆ. ಗಾಡಿ ಚಲಾಯಿಸುತ್ತಲೇ ‘1-2’ ಸರಾಗವಾಗಿ ಮಾಡಿ- ಬೇಕೆಂದ ಜಾಗದಲ್ಲಿ ಒಗೆದು ಬರಬಹುದು.

 

 

2011ರಲ್ಲಿ ಇಟಲಿಯ ‘ಅವಸರಬಾಧಿತ’ ನೊಬ್ಬ ಗಂಟೆಗೆ 42. 25 ಮೈಲಿಗಳ ವೇಗದಲ್ಲಿ ಚಲಿಸುವ ವೆಹಿಕಲ್ ನಿರ್ಮಿಸಿದ್ದ. ಆ ದಾಖಲೆ ಇವನ ಟಾಯ್ಲೆಟ್ ವೆಹಿಕಲ್‍ನಿಂದಾಗಿ ‘ಫ್ಲಶ್’ ಆಗಿದೆ.

ನಮ್ಮಲ್ಲಿ ಅವಿಷ್ಕಾರಗೊಂಡಿದ್ದರೇೀ… ‘ಉಗಿಬಂಡಿ’ ಎಂದು ಉಗಿದಾಡುತ್ತಿದ್ದೆವು. ಆದರೆ ಬ್ರಿಟನ್‍ನ ಸ್ಟಾಂಫೋರ್ಡ್‍ನ ಕಾಲಿನ್‍ಫರ್ಜೆ ನಿರ್ಮಾಣದ ಶೌಚ ಬಂಡಿಗೆ ಮೆಚ್ಚುಗೆ ಹರಿದು ಬಂದಿದೆ.

ಈ ವೆಹಿಕಲ್‍ನ ಮತ್ತೊಂದು ‘ಅಡ್ವಾಂಟೇಜ್’ ಏನೆಂದು ಗೊತ್ತಾ?

 

 

ಇದನ್ನು ಚಲಾಯಿಸುತ್ತಿರುವಾಗ ಯಾರೂ ‘ಡ್ರಾಪ್’ ಪ್ಲೀಸ್ ಎಂದು ಕೋರುವುದಿಲ್ಲ. ಅಷ್ಟೇ ಅಲ್ಲ, ಪ್ಲಶ್ ಮಾಡದೆ ಸ್ಟಾಕ್‍ನೊಂದಿಗೆ ತೆರಳುತ್ತಿದ್ದಾಗ ಸುಲಭವಾಗಿ ದಾರಿಕೂಡ ಕೊಡುತ್ತಾರೆ. ಇನ್ನು ಅವಸರ ತೀರಿಸಿಕೊಳ್ಳುತ್ತಿರುವಾಗ ಕಣ್ಣು ಕೂಡ ಮುಚ್ಚಿಕೊಂಡು ಹಾದಿ ಬಿಡುತ್ತಾರೆ. ಹೇಗಿದೆ ಬಹು ಉಪಯೋಗಿ ಟಾಯ್ಲೆಟ್ ವೆಹಿಕಲ್?!

ಹೊಸ ಹಾಡು…

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ……ಸಾಯೋದ್ರೊಳಗೆ ಒಮ್ಮೆ ನೋಡು… ಶೌಚದ ಬಂಡೀ….!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top