fbpx
ರಾಜಕೀಯ

ಪಾಲೇಕರ್ ವಿರುದ್ಧ ಸಿಡಿದೆದ್ದ ಕನ್ನಡಿಗ ರಾಜಕೀಯ ನಾಯಕರು.

ಪಾಲೇಕರ್ ವಿರುದ್ಧ ಸಿಡಿದೆದ್ದ ಕನ್ನಡಿಗ ರಾಜಕೀಯ ನಾಯಕರು.

 

ಕಳಸಾ-ಬಂಡೂರಿ ನಾಲೆ ನಿರ್ಮಾಣದ ಕಣಕುಂಬಿ ಪ್ರದೇಶಕ್ಕೆ ಭೇಟಿ ಮಾಡಿ ಪರಿಶೀಲಿಸಿದ್ದ ಗೋವಾ ನೀರಾವರಿ ಸಚಿವ ಪಾಲೇಕರ್ ಅವರು “ಕರ್ನಾಟಕದ ಹರಾಮಿಗಳು ಏನು ಬೇಕಾದ್ರೂ ಮಾಡುತ್ತಾರೆ, ಅವರು ನಮ್ಮನ್ನು ಏನ್ ಬೇಕಾದ್ರೂ ಮಾಡ್ತಾರೆ ಹೀಗಾಗಿ ನಾನು ನಮ್ಮ ರಾಜ್ಯದ ಪೋಲೀಸರ ಭದ್ರತೆಯೊಂದಿಗೆ ಕರ್ನಾಟಕಕ್ಕೆ ಬಂದಿದ್ದೆ. ಕನ್ನಡಿಗರು ಹರಾಮಿಗಳು”’ ಎಂದು ಕನ್ನಡಿಗರನ್ನು ಜರಿದಿದ್ದರು.

ಪಾಲೇಕರ್ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಒಕ್ಕೂಟ ವ್ಯವಸ್ಥೆಯ ವಿರುದ್ಧ ಇರುವ ಹೇಳಿಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

 

ಕನ್ನಡಿಗರ ಬಗ್ಗೆ ಪಾಲೇಕರ್ ಆಡಿದ ನಿಂದನೀಯ ಮಾತುಗಳು ಖಂಡನಿಯ, ಆದರೂ ಗೋವಾದ ಜನರ ಬಗ್ಗೆ ನಮಗೆ ಯಾವತ್ತೂ ದ್ವೇಷವಿಲ್ಲ.
-ಮುಖ್ಯಮಂತ್ರಿ ಸಿದ್ದರಾಮಯ್ಯ

 

ಗೋವಾದ ಜನರನ್ನು ಮೆಚ್ಚಿಸಲು ಕನ್ನಡಿಗರ ಅವಹೇಳನ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಶೋಭೆ ತರುವದಿಲ್ಲ
-ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

 

ಪಾಲೇಕರ್ ಹೇಳಿಕೆ ಮೂರ್ಖತನದ್ದು ಒಕ್ಕೂಟ ವ್ಯವಸ್ಥೆಯ ವಿರುದ್ಧ ಇರುವ ಹೇಳಿಕೆ. ಸಂವಿಧಾಕ್ಕೆ ಅಪಚಾರ ಮಾಡಿದಂತೆ. ಅವರು ಕ್ಷಮೆಯಾಚಿಸಲಿ.
-ಈಶ್ವರಪ್ಪ ವಿಪಕ್ಷ ನಾಯಕ

 

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾವೆಲ್ಲ ಒಕ್ಕೊರಲಿನಿಂದ ಪಕ್ಷ ಭೇದ ಮರೆತು ಹೋರಾಡಬೇಕು, ಅಂದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಮಹದಾಯಿ ಹೋರಾಟ ಇನ್ನು ಉಗ್ರ ಸ್ವರೂಪ ದಲ್ಲ್ಲಿ ನಡೆಬೇಕಾದ ಅವಶ್ಯಕತೆ ಅಂದಾಗ ಮಾತ್ರ ನಮ್ಮ ರಾಜಕೀಯ ನಾಯಕರಿಗೆ ರೈತರ ಕೂಗು ಕೇಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top