fbpx
ರಾಜಕೀಯ

ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿಎಂ ಸಿದ್ದರಾಮಯ್ಯ

ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿಎಂ ಸಿದ್ದರಾಮಯ್ಯ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ನಾಯಕರು ಯುದ್ಧಕ್ಕೆ ನಿತ್ತಂತೆ ಹೇಳಿಕೆ ನೀಡುತ್ತಿದ್ದಾರೆ. ಪ್ರತಿದಿನವೂ ಹಲವಾರು ಹೇಳಿಕೆಗಳು ಮಾಧ್ಯಮದಲ್ಲಿ ಸುದ್ದಿಯಾಗುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.

ಚುನಾವಣೆ ಒಂದು ಯುದ್ಧವಿದ್ದಂತೆ. ನಾವು ಸರಿಯಾದ ಹಾದಿಯಲ್ಲಿ ನಡೆಯುತ್ತಿರುವ ‘ಪಾಂಡವರು’ ಮತ್ತು ಬಿಜೆಪಿ ಜನರು ತಪ್ಪು ಮಾರ್ಗದಲ್ಲಿ ನಡೆಯುತ್ತಿರುವ ಕೌರವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

 

 

ಕಾರ್ಯಕ್ರಮದ ಮುಗಿದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು ಗೋವಾ ರಾಜ್ಯದ ನೀರಾವರಿ ಸಚಿವರು ಕರ್ನಾಟಕದ ಬಗ್ಗೆ ಹೇಳಿರುವಂತಹ ಹೇಳಿಕೆ ತಮ್ಮ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. “ಆತನ ಭಾಷೆಯು ಆತನ ಸಂಸ್ಕೃತಿಯನ್ನು ತೋರಿಸುತ್ತಿದೆ, ಆತ ಸಚಿವ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯನಲ್ಲ’ ಎಂದು ಹೇಳಿದರು.

 

 

ಸದಾ ತನ್ನದೇ ಆದ ಶೈಲಿಯಲ್ಲೇ ಎದುರಾಳಿಗಳಿಗೆ ಟಾಂಗ ನೀಡುವ ಸಿದ್ದರಾಮಯ್ಯನವರು ಅಪ್ಪಟ ಕನ್ನಡದಲ್ಲಿ ಎದುರಾಳಿಗಳನ್ನು ಮಾತಿನಲ್ಲೇ ಸುಮ್ಮನೆ ಕುಳ್ಳಿಸಿ ಬಿಡುತ್ತಾರೆ.

 

 

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಉಗ್ರಗಾಮಿಗಳು’ ಎಂದು ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ ಕೆಲವೆಡೆ ಬಿಜೆಪಿ ಜೈಲ್ ಭರೋ ಚಳುವಳಿಯನ್ನು ನಡೆಸಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top