fbpx
ರಾಜಕೀಯ

ಸಚಿವ ರೋಷನ್‌ ಬೇಗ್‌ಗೆ ನೋಟೀಸ್ ಜಾರಿ. ಚುನಾವಣಾ ಹೊಸ್ತಿಲಲ್ಲೇ ಕಾಂಗೆಸ್ಸ್ ಗೆ ಬಿಗ್ ಶಾಕ್.

ಸಚಿವ ರೋಷನ್‌ ಬೇಗ್‌ಗೆ ನೋಟೀಸ್ ಜಾರಿ.
ಚುನಾವಣಾ ಹೊಸ್ತಿಲಲ್ಲೇ ಕಾಂಗೆಸ್ಸ್ ಗೆ ಬಿಗ್ ಶಾಕ್.

 

 

ಈ ಹಿಂದೆ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆಯ ಇಲಾಖೆಯವರು ದಾಳಿ ಮಾಡಿದ ಬೆನ್ನಲ್ಲೇ ರಾಜ್ಯ ಚುನಾವಣೆ ಸಮೀಪದಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ.

 

 

ಕರ್ನಾಟಕ ರಾಜ್ಯ ಹಜ್ ಮತ್ತು ನಗರಾಭಿವೃದ್ಧಿ ಸಚಿವರಾದ ರೋಷನ್ ಬೇಗ್ ಅವರಿಗೆ ಜಾರಿ ನಿರ್ದೇಶನಾಲಯದಿಂದ (ಇಡಿ)ನೋಟಿಸ್ ನೀಡಲಾಗಿದ್ದು, ಸಚಿವ ರೋಷನ್ ಬೇಗ್ ಅವರ ಮಾಲೀಕತ್ವದ ರುಮಾನ್ ಎಂಟರ್‌ಪ್ರೈಸಸ್‌ ದೇಶದಿಂದ ಹಣ ಸ್ವೀಕರಿಸದ ಹಿನ್ನಲೆಯಲ್ಲಿ ರೋಷನ್ ಬೇಗ್ ಅವರಿಗೆ, ಅವರ ಪುತ್ರ ರುಮಾನ್ ಬೇಗ್ , ಪುತ್ರಿ ಸಬಿಹಾ ಫಾತಿಮಾ ಮತ್ತು ಕಂಪನಿ ನಿರ್ದೇಶಕರಿಗೆ ನೋಟೀಸ್ ನೀಡಲಾಗಿದೆ. ದುಬೈನಿಂದ ಬಂದಿರುವ ಹಣದ ಬಗ್ಗೆ ಸಮರ್ಪಕ ಲೆಕ್ಕವನ್ನು ನೀಡದ ಕಾರಣ ಈ ನೋಟಿಸನ್ನು ನೀಡಲಾಗಿದೆ.

 

 

ಈ ಮಧ್ಯೆ ರೋಷನ್‌ ಬೇಗ್‌ ಅವರು ನಿನ್ನೆ ರಾತ್ರಿ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಇಡಿಯಿಂದ ಬಂದಿರುವ ನೋಟಿಸ್‌ ಬಗ್ಗೆ ಮಾತುಕತೆ ನಡೆಸಿರಬಹುದು ಎಂದು ತಿಳಿದಿಬಂದಿದೆ. ರೋಷನ್ ಬೇಗ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದಾಗ ಮುಖ್ಯಮತ್ರಿಗಳು ಯಾವುದೊ ಕಾರ್ಯಕ್ರಮ ನಿಮಿತ್ತ ಹೊರಗಡೆ ಹೊರಟಿದ್ದರು ಆ ಸಂಧರ್ಭದಲ್ಲಿ ರೋಷನ್ ಬೇಗ್ ಅವರು ಮುಖ್ಯಮಂತ್ರಿಗಳ ಕಾರಿನಲ್ಲೇ ಜೊತೆಗೆ ಸಾಗಿದರು.

ಚುನಾವಣೆ ಸಮೀಪಿಸುತ್ತಿರವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಘಟನೆ ಬಿಗ್ ಶಾಕ್ ನೀಡಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top