fbpx
ರಾಜಕೀಯ

ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯ ಧನವನ್ನು (ಸಬ್ಸಿಡಿ) ಈ ವರ್ಷದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರ ಸಚಿವರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮಂಗಳವಾರ ತಿಳಿಸಿದ್ದಾರೆ.

 

 

ಈ ಹಣವನ್ನು ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುತ್ತೇವೆಂದು ತಿಳಿಸಿದ್ದಾರೆ.

ಈ ವರ್ಷದಲ್ಲಿ ಭಾರತದಿಂದ ಸುಮಾರು 1 ಲಕ್ಷ 75 ಸಾವಿರ ಮಂದಿ ಹಜ್ ಯಾತ್ರೆ ಮಾಡುತ್ತಿದ್ದಾರೆ ಇವರೆಲ್ಲರೂ ಸಬ್ಸಿಡಿ ಇಲ್ಲದೆ ಹಜ್ ಯಾತ್ರೆಗೆ ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

 

2012ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಸಬ್ಸಿಡಿ ಕೊಡುವುದನ್ನು ಹಿಂದೆ ತೆಗೆದುಕೊಳ್ಳಲಾಗಿದೆ. 2022ರ ವೇಳೆಗೆ ಸಬ್ಸಿಡಿ ಹಿಂತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ ಎಂದು ಮಾಹಿತಿಯನ್ನು ಅವರು ತಿಳಿಸಿದ್ದಾರೆ.

ಸಚಿವ ರೋಷನ್ ಬೇಗ್ ಸ್ವಾಗತ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ವಕ್ಫ್ ಖಾತೆಯ ಸಚಿವರಾಗಿರುವ ರೋಷನ್ ಬೇಗ್ ಹೇಳಿಕೆ ನೀಡಿದ್ದಾರೆ. ಹಜ್ ಪವಿತ್ರ ಯಾತ್ರೆಯಾಗಿದ್ದು, ಬೇರೆಯವರ ಸಹಾಯವನ್ನು ಪಡೆದು ನಾವು ಯಾತ್ರೆ ಹೋಗಬಾರದು ಎಂದು ಅವರು ತಿಳಿಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top