fbpx
ಮನೋರಂಜನೆ

“ಕಿಚ್ಚ ಸುದೀಪ್ ರಾಜಕೀಯಕ್ಕೆ ಬರೋದಿಲ್ಲ” ಕುಮಾರಸ್ವಾಮಿ ಸ್ಪಷ್ಟನೆ.

“ಕಿಚ್ಚ ಸುದೀಪ್ ರಾಜಕೀಯಕ್ಕೆ ಬರೋದಿಲ್ಲ” ಕುಮಾರಸ್ವಾಮಿ ಸ್ಪಷ್ಟನೆ.

 

 

ವಿಧಾನಸಭಾ ಚುನಾವಣೆಯ ಬಿಸಿಗಾಳಿ ರಾಜ್ಯಾದಂತ ಜೋರಾಗಿಯೇ ಬೀಸಲಾರಂಭಿಸಿದೆ. ಆದರೆ ಇದರ ಎಫೆಕ್ಟೆಂಬುದು ಈ ಸಲ ರಾಜಕಾರಣಿಗಳ ವಲಯಕ್ಕಿಂತಲೂ ಸಿನಿಮಾ ರಂಗದಲ್ಲಿಯೇ ತೀವ್ರವಾಗಿರುವಂತಿದೆ. ಯಾಕೆಂದರೆ, ಆ ವಲಯದಲ್ಲಿ ನಡೆಯುತ್ತಿರೋ ಚುನಾವಣಾ ರೇಸಿನ ರಂಗಿನಾಟ, ಹತ್ತಿರವಿದ್ದುಕೊಂಡೇ ಮಾಡುತ್ತಿರೋ ಮಸಲತ್ತು, ಯಾರದ್ದೋ ಗಮನ ಸೆಳೆಯುವ ಕಸರತ್ತು, ಮತ್ಯಾರನ್ನೋ ಓವರ್‌ಟೇಕ್ ಮಾಡಿ ಟಿಕೆಟು ಪಡೆಯೋ ಚಾಲಾಕಿತನಗಳ ಸುದ್ದಿ ನಿಜಕ್ಕೂ ಇಂಟರೆಸ್ಟಿಂಗ್.

 

 

ಅದೇ ರೀತಿ ಕಳೆದ ಕೆಲವು ದಿನಗಳಿಂದ ರಾಜಕೀಳಯ ವಲಯದಲ್ಲಿ ಗಿರಕಿ ಹೊಡೆಯುತ್ತಿರುವ ಹೆಸರೆಂದರೆ ಅದು ಕಿಚ್ಚ ಸುದೀಪ್. ಕಳೆದ ತಿಂಗಳು ಸುದೀಪ್, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಂಬಧಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು ಆಗ ಸಿಎಂ ಸಿದ್ದು ಕಿಚ್ಚನಿಗೆ ಪಕ್ಷಕ್ಕೆ ಸೇರಿಕೊಳ್ಳುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಅದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬದ ದಿನದಂದು ಸ್ವತಃ ಸುದೀಪ್ರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಮತ್ತೊಂದು ಕಡೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಸುದೀಪ್ ಅವರಿಗೆ ಆಪ್ತರಾಗಿದ್ದು ಕಿಚ್ಚನ ಸಂಪರ್ಕಕ್ಕೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಎಲ್ಲೆಡೆ ಕೇಳಿಬರುತ್ತಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜಕೀಯದ ತಲೆನೋವೇ ಬೇಡ ಸುದೀಪ್ ಎಂದು ನಿರ್ಧರಿಸಿದ್ದಾರೆ ಮತ್ತು ಆದಷ್ಟು ಚುನಾವಣೆ ವಿಷಯದಿಂದಲೇ ದೂರವಿರಲು ತೀರ್ಮಾನಿಸಿದ್ದಾರೆ ಎಂದು ಕಿಚ್ಚ ಆಪ್ತ ಮೂಲಗಳು ತಿಳಿಸಿವೆ.

 

 

ಇದರ ಬೆನ್ನಲ್ಲೇ ಈ ಕುರಿತು ಬೀದರ್ ನಲ್ಲಿ ಇಂದು ಮಾಧ್ಯಮದವರ ಪ್ರಶ್ನೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ “ಸುದೀಪ್ ಅವರು ಚಿತ್ರರಂಗದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಅನೇಕ ಸಾಧನೆಗಳನ್ನು ಮಾಡಬೇಕೆಂಬ ಭಾವನೆಗಳನ್ನು ಇಟ್ಟುಕೊಂಡಿರುವಂತಹ ವ್ಯಕ್ತಿ. ಸದ್ಯಕ್ಕೆ ಅವರು ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಇರಾದೆಯನ್ನು ಹೊಂದಿಲ್ಲ. ಇಷ್ಟು ದಿನ ಸುದೀಪ್ ಅವರು ನಮ್ಮ ಪಕ್ಷಕ್ಕೆ(JDS) ಸೇರುತ್ತಾರೆ ಎಂದು ಕೆಲವರು ಗುಲ್ಲೆಬ್ಬಿಸಿದ್ದರು. ಆದರೆ ಅದು ಸುಳ್ಳು ಅವ್ರು ನಮ್ಮ ಪಕ್ಷಕ್ಕೆ ಸೇರಿಕೊಳ್ಳುತ್ತಿಲ್ಲ, ನಾನು ಅವರನ್ನು ಭೇಟಿಯಾಗಿದ್ದಾಗ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಒತ್ತಡ ಹೇರಿಲ್ಲ. ಆದರೆ ಜನತೆಯಲ್ಲಿ ತಿಳುವಳಿಕೆ ಮೂಡಿಸಿ ಎಂದು ಮನವಿ ಮಾಡಿಕೊಂಡಿದ್ದೇನೆ ಅಷ್ಟೇ ” ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top