ಕಿರುತೆರೆ

ಬಿಗ್ ಬಾಸ್ ಸೀಸನ್ 5 ಮುಗಿಯುವ ಮುಂಚೆಯೇ ಆರನೇ ಸೀಸನ್’ಗೆ ಮುಹೂರ್ತ ಫಿಕ್ಸ್?

ಬಿಗ್ ಬಾಸ್ ಸೀಸನ್ 5 ಮುಗಿಯುವ ಮುಂಚೆಯೇ ಆರನೇ ಸೀಸನ್’ಗೆ ಮುಹೂರ್ತ ಫಿಕ್ಸ್?

 

 

ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಅಬ್ಬರ ಯಾವ ಮಟ್ಟಿಗೆ ಇದೆ ಅಂದ್ರೆ ಈ ಆವೃತ್ತಿಯ ಷೋ ಮುಗಿಯುವ ಮುನ್ನವೇ ಮುಂದಿನ ಸೀಸನ್ ಡೇಟ್ಸ್ ಫಿಕ್ಸ್ ಆಗುತ್ತಿದೆ. ಈ ಸಂಭಂದ ಬಿಗ್ ಬಾಸ್ ಟೀಮ್ ಆಗಲೇ ಗ್ರೌಂಡ್ ವರ್ಕ್’ಗಳನ್ನ ಸ್ಟಾರ್ಟ್ ಮಾಡ್ಕೊಂಡಿದೆ ಎಂಬ ಮಾತು ಕೇಳಿಬರುತ್ತಿವೆ. ಮುಂದಿನ ಸೀಸನ್ ಅನ್ನು ಬೇಗ ನಡೆಸಲು ಕಾರ್ಯಕ್ರಮದ ಆಯೋಜಕರು ಉದ್ದೇಶಿಸಿದ್ದಾರಂತೆ!

ಬಿಗ್ ಬಾಸ್ ಸೀಸನ್ 5 ಸ್ವಲ್ಪ ಲೇಟಾಗಿ ಬಂದಿತ್ತು ಆದರೆ ಸೀಸನ್ 6 ಹಾಗಾಗೋದಿಲ್ಲವಂತೆ.. ಬಿಗ್ ಬಾಸ್ ಸೀಸನ್ 6 ಆದಷ್ಟು ಬೇಗ ಅಂದರೆ 2018ರ ಸೆಪ್ಟೆಂಬರ್’ನಲ್ಲೇ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮಕ್ಕೆ ಅತಿದೊಡ್ಡ ಪ್ರೇಕ್ಷಕರ ಬಳಗ ಇರುವುದರಿಂದ ತುಂಬಾ ತಡವಾಗಿ ಆರಂಭಿಸಿದರೆ ವೀಕ್ಷಕರಿಗೆ ನಿರಾಸೆಯುಂಟಾಗುತ್ತದೆ ಹಾಗಾಗಿ ವೀಕ್ಷಕರ ಒತ್ತಾಯದ ಮೇರೆಗೆ ಸೆಪ್ಟೆಂಬರ್ ನಲ್ಲೆ ಸೀಸನ್ 6 ಬರ್ತಿದೆ. ಈ ಸಂಭಂದ ಈಗಾಗಲೇ ಕೆಳ ಮಟ್ಟದ ಕೆಲಸಗಳು ಕೂಡ ಪ್ರಾರಂಭವಾಗಿವೆ.

 

 

ಇನ್ನು ಬಿಗ್ ಬಾಸ್ ಸೀಸನ್ 5 ಕೊನೆಯ ಹಂತ ತಲುಪಿದ್ದು ಜಯರಾಮ್ ಕಾರ್ತಿಕ್,ಶ್ರುತಿ, ಚಂದನ್,ದಿವಾಕರ್ ಮತ್ತು ನಿವೇದಿತಾ ಗೌಡ ಅವರು ಫಿನಾಲೆಯ ಸ್ಪರ್ಧಿಗಳಾಗಿ ಉಳಿದಿದ್ದು. ಇದೇ ಭಾನುವಾರ ಬಿಗ್ ಬಾಸ್ ವಿನ್ನರ್ ಯಾರು ಮತ್ತು ರನ್ನರ್ ಅಪ್ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. SatishRaj

    May 23, 2018 at 9:33 pm

    ಅದೇ ಹಳೆಯ ಸುದ್ದಿಗಳನ್ನು ಓದಿ,ಟಿ.ವಿ ವಾಹಿನಿಗಳಲ್ಲಿ ಹೇಳಿದನ್ನೇ ಹೇಳಿ,ತಿರುಚಿ ಮತ್ತೆ ಮತ್ತೆ ಅದನ್ನೇ ಕೂಗುವ ವಾಹಿನಿಗಳಿಂದ ರಿಲೀಪ್ ಸಿಗೋದು ನಿಮ್ಮ ಲೇಖನಗಳನ್ನು ಓದಿದ ಮೇಲೆ ….. ನಾನು ಸಧ್ಯ ಸುದ್ದಿ ತಾಣವನ್ನು ಪ್ರಾರಂಭಿಸಿದ್ದು ಅದು ನಿಮ್ಮ ತಾಣವನ್ನು ನೋಡಿ ಸ್ಪೂರ್ತಿ ಪಡೆದು. ಧನ್ಯವಾದಗಳು. itskannada

Leave a Reply

Your email address will not be published. Required fields are marked *

To Top