ಮನೋರಂಜನೆ

ರಕ್ಷಿತ್ ಶೆಟ್ಟಿಯ `777 ಚಾರ್ಲಿ’ ಚಿತ್ರಕ್ಕೆ ಹೀರೋ ಚೇಂಜ್: ಕಾರಣ ಏನು ಗೊತ್ತಾ?

ರಕ್ಷಿತ್ ಶೆಟ್ಟಿಯ `777 ಚಾರ್ಲಿ’ ಚಿತ್ರಕ್ಕೆ ಹೀರೋ ಚೇಂಜ್: ಕಾರಣ ಏನು ಗೊತ್ತಾ?

 

 

ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ ತಮ್ಮ ಚಿತ್ರ ನಿರ್ಮಾಣ ಸಂಸ್ಥೆ “ಪರಂವಾ ಸ್ಟುಡಿಯೋ’ ಮೂಲಕ ಅನೇಕ ಸಿನಿಮಾ ನಿರ್ಮಿಸುತ್ತಿದ್ದಾರೆಅವುಗಳಲ್ಲಿ ‘ 777 ಚಾರ್ಲಿ ಎಂಬ ಸಿನಿಮಾ ಕೂಡ ಒಂದು ಎಂಬ ವಿಷಯ ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ಆ ಚಿತ್ರದಲ್ಲಿ ಅರವಿಂದ್ ಅಯ್ಯರ್ ನಾಯಕರಾಗಿ ನಟಿಸಬೇಕಿತ್ತು ಆದರೆ ಈಗ ಚಿತ್ರಕ್ಕೆ ನಾಯಕನನ್ನು ಬದಲಾವಣೆ ಮಾಡಲು ರಕ್ಷಿತ್ ನಿರ್ಧರಿಸಿದ್ದಾರೆ.

ಈ ಮೊದಲು ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅರವಿಂದ್ ಅಯ್ಯರ್ 777 ಚಾರ್ಲಿ’ ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದರು, ಅಲ್ಲದೆ ಈ ಚಿತ್ರದ ಫೋಟೋಶೂಟ್ ಕೂಡ ಮುಗಿದಿತ್ತು.. ಆದರೆ ಚಿತ್ರದ ಶೂಟಿಂಗ್ ಮಾತ್ರ ಪ್ರಾರಂಭವಾಗಿರಲಿಲ್ಲ. ಈಗ ಚಿತ್ರತಂಡವು ಚಿತ್ರಕ್ಕೆ ಹೊಸ ನಾಯಕನನ್ನು ಹುಡುಕುವ ಕೆಲಸದಲ್ಲಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಚಿತ್ರಕ್ಕೆ ನಾಯಕನ ಬದಲಾವಣೆ ಮಾಡಲು ಕಾರಣ ಏನು ಅಂತೀರಾ? ಮುಂದೆ ಓದಿ.

 

 

777 ಚಾರ್ಲಿ ಚಿತ್ರಕ್ಕೆ ಹೀರೊ ಬದಲಾವಣೆ ಮಾಡಲು ಮುಖ್ಯ ಕಾರಣ ನಾಯಕನಾಗಿ ಆಯ್ಕೆಯಾಗಿದ್ದ ಅರವಿಂದ್ ಅಯ್ಯರ್ ಅವರ ಡೇಟ್ಸ್ ಸಮಸ್ಯೆ, ಹೌದು ಅರವಿಂದ್ ಅಯ್ಯರ್ ಅವರು ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ ಮತ್ತೊಂದು ಚಿತ್ರವಾದ ಭೀಮಸೇನ ನಳಮಹಾರಾಜ ಎಂಬ ಚಿತ್ರದಲ್ಲಿ ಕೂಡ ನಾಯಕನಾಗಿ ಅಭಿನಯಿಸುತ್ತಿರುವುದರಿಂದ ಏಕಕಾಲದಲ್ಲಿ ಎರಡೆರೆಡು ಚಿತ್ರಗಳಲ್ಲಿ ನಟಿಸುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ 777 ಚಾರ್ಲಿ ಚಿತ್ರಕ್ಕೆ ಹೊಸ ನಾಯಕನನ್ನು ಹುಡುಕಲಾಗುತ್ತಿದೆ

ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್‌ ರಾಜ್‌ ನಿರ್ದೇಶನದ ಮಾಡಲಿದ್ದಾರೆ.. ನಾಬಿನ್‌ ಪೋಲ್‌ ಸಂಗೀತ, ಮತ್ತು ಅರುಣ್‌ ಕಶ್ಯಪ್‌ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದಂತೆ ಕಲಾವಿದರ ಆಯ್ಕೆ ಇನ್ನು ನಡೆಯಬೇಕಿದ್ದು ಚಿತ್ರಕಥೆ ಫೈನಲ್ ಆದ ಬಳಿಕ ಮಡಿಕೇರಿ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದ ಕಥೆ ಒಂದು ನಾಯಿ ಹಾಗೂ ಹೀರೋ ಸುತ್ತ ಸುತ್ತುತ್ತದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top