ಕ್ರೀಡೆ

ಜಾಂಟಿ ರೋಡ್ಸ್ ಮಾದರಿಯಲ್ಲೇ ರನೌಟ್‌ ಮಾಡಿದ ಕನ್ನಡಿಗ: ವಿಡಿಯೋ ವೈರಲ್

ಜಾಂಟಿ ರೋಡ್ಸ್ ಮಾದರಿಯಲ್ಲೇ ರನೌಟ್‌ ಮಾಡಿದ ಕನ್ನಡಿಗ: ವಿಡಿಯೋ ವೈರಲ್

 

 

ಕಳೆದ ಭಾನುವಾರ ಕೋಲ್ಕೊತಾದ ಜಾಧವ್‌ಪುರ್‌ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಸೂಪರ್‌ ಲೀಗ್‌ ಹಂತದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಸೂಪರ್ ಓವರ್ನಲ್ಲಿ ಸೋಲು ಕಂಡಿರುವ ಸುದ್ದಿ ನೀವೆಲ್ಲರೂ ಓದಿರುತ್ತೀರಿ. ಅದೇ ಪಂದ್ಯದಲ್ಲಿ ಕನ್ನಡಿಗನಾದ ವಿನಯ್ ಕುಮಾರ್ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ವವಿಖ್ಯಾತ ಫೀಲ್ಡರ್‌ ಜಾಂಟಿ ರೋಡ್ಸ್‌ ಸ್ಟೈಲ್‌ನಲ್ಲೇ ರನೌಟ್ ಮಾಡಿ ಮಿಂಚಿದ್ದು ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

 

 

ವಿನಯ್ ಕುಮಾರ್ ರನೌಟ್ ವಿಡಿಯೋವನ್ನು ಇಲ್ಲಿ ನೋಡಿ.

 

 

1992ರ ವಿಶ್ವಕಪ್‌ನಲ್ಲಿ ಪಾಕ್‌ ಆಟಗಾರ ಇಂಜಿಮಾಮ್‌ ಉಲ್‌ ಹಕ್‌ರನ್ನು ಚೆಂಡನ್ನು ಕೈನಲ್ಲಿ ಹಿಡಿದುಕೊಂಡು ಓಡುತ್ತಾ ಸ್ಟಂಪ್‌ನತ್ತ ಜಿಗಿದು ಜಾಂಟಿ ರೋಡ್ಸ್‌ ರನ್‌ಔಟ್‌ ಮಾಡಿದ್ದರು. ಈಗ ಅದೇ ರೀತಿಯಲ್ಲಿ ವಿನಯ್ ಕುಮಾರ್ ಅವ್ರು ಕೂಡ ರನೌಟ್ ಮಾಡಿದ್ದು ಈ ವಿಷಯವನ್ನು ಜಾಂಟಿ ರೋಡ್ಸ್ ಗೆ “1992ರ ವಿಶ್ವಕಪ್‌ನಲ್ಲಿ ನೀವು ರನ್‌ಔಟ್‌ ಮಾಡಿದ ವಿಡಿಯೋವನ್ನು ಅನ್ನು ಹಲವು ಬಾರಿ ವೀಕ್ಷಿಸಿದ ನಂತರ ನಾನು ಈ ತರಹದ ರನೌಟ್‌ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ನಾನು ನಿಮ್ಮ ಹಾಗೆಯೇ ರನೌಟ್‌ ಮಾಡಿದ್ದೇನೆ. ಇದು ಹೇಗಿದೆ?” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್’ಗೆ ಉತ್ತರಿಸಿರುವ ಜಾಂಟಿ ರೋಡ್ಸ್ “1992ರ ವಿಶ್ವಕಪ್‌ ಸಂದರ್ಭದಲ್ಲಿ ನನ್ನನ್ನು ನೋಡುವಷ್ಟು ನೀವು ದೊಡ್ಡವರಾಗಿದ್ದಿರಿ ಎಂದು ನನಗನ್ನಿಸುತ್ತಿಲ್ಲ” ಎಂದು ವಿನಯ್ ಕುಮಾರ್ ಕಾಲೆಳೆದಿದ್ದಾರೆ. ಐಪಿಎಲ್‌ನಲ್ಲಿ ವಿನಯ್‌ ಕುಮಾರ್‌ ಮುಂಬಯಿ ಇಂಡಿಯನ್ಸ್‌ ಪರ ಆಡಿದ್ದಾಗ ಜಾಂಟಿ ರೋಡ್ಸ್‌ ತಂಡದ ತರಬೇತುದಾರರಾಗಿದ್ದರು ಈ ಸಲುಗೆಯಿಂದ ಇವರಿಬ್ಬರ ನಡುವೆ ಟ್ವಿಟರ್‌ನಲ್ಲಿ ಸಂಭಾಷಣೆ ನಡೆದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top