ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ಚಂದನ್’ಗೆ ಖುಲಾಯಿಸುತ್ತಿದೆ ಒಂದರ ಮೇಲೊಂದು ಅದೃಷ್ಟ!

ಬಿಗ್’ಬಾಸ್ ಮನೆಯಲ್ಲಿ ಚಂದನ್’ಗೆ ಖುಲಾಯಿಸುತ್ತಿದೆ ಒಂದರ ಮೇಲೊಂದು ಅದೃಷ್ಟ!

 

 

 

ಬಿಗ್’ಬಾಸ್ ಕನ್ನಡ ಸೀಸನ್ 5ನ ಕೊನೆ ಹಂತ ತಲುಪಿದ್ದು, ಇದೇ ಶನಿವಾರ- ಭಾನುವಾರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಈ ಭಾರಿಯ ಬಲಾಢ್ಯ ಸ್ಪರ್ದಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಚಂದನ್ ಶೆಟ್ಟಿ ಮನೆಯೊಳಗೇ ಮತ್ತು ಹೊರಗೆ ಎಲ್ಲರಿಗೂ ಸಕತ್ ಮನೋರಂಜನೆ ನೀಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..

 

 

ಬಿಗ್ ಬಾಸ್ ಮನೆಯಲ್ಲಿ ಚಂದನ್’ಗೆ ಅದೃಷ್ಟದ ಮೇಲೆ ಅದೃಷ್ಟ ಒಲಿದುಬರುತ್ತಿದೆ. ಒಂದು ಕಡೆ ಅವರು ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರೆ ಮತ್ತೊಂದು ಕಡೆ ಅವರ ಟಕಿಲಾ ಹಾಡು ಕನ್ನಡ ಸ್ಟಾರ್ ನಟರನ್ನೇ ಮೀರಿಸಿ ಅತಿ ಕಡಿಮೆ ಅವಧಿಯಲ್ಲೇ ದಾಖಲೆ ವೀಕ್ಷಣೆಯನ್ನು ಪಡೆದುಕೊಂಡಿದೆ.. ಚಂದನ್ ಬಿಗ್ ಬಾಸ್ ಮನೆಯೊಳಗೇ ಇರುವಾಗಲೇ ಅವರ ಟಾಕೀಲ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಆ ಹಾಡನ್ನು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚನ ಕೈನಿಂದ ರಿಲೀಸ್’ಗೊಳಿಸಿದ್ದು ಸಾಂಗ್ ಬೇಗ ವೈರಲ್ ಆಗುವಂತೆ ಮಾಡಿತ್ತು.

 

 

ನೆನ್ನೆ ಬಿಗ್ ಬಾಸ್ ಸದಸ್ಯರಿಗೆ ನನ್ನ ಹಾಡು ನನ್ನದು ಎಂಬ ವಿಶೇಷ ಚಟುವಟಿಕೆಯನ್ನು ನೀಡಲಾಗಿತ್ತು. ಅದರ ಪ್ರಕಾರ ಸ್ಪರ್ಧಿಗಳು ಬೆಳಿಗ್ಗೆ ಹೊತ್ತು ಹಾಕಲಾಗುವ ವೇಕ್ ಅಪ್ ಹಾಡುಗಳನ್ನು ಉಳಿದ ಮೂರು ದಿನಗಳಿಗೆ ತಮಗಿಷ್ಟ ಬಂದವುಗಳನ್ನು ಆಯ್ಕೆ ಮಾಡಿಕೊಂಡು ಬಿಗ್ ಬಾಸ್’ಗೆ ತಿಳಿಸಬೇಕಾಗಿತ್ತು. ಅದರಂತೆ ಚಂದನ್ ಶೆಟ್ಟಿ ತಮ್ಮ ಸೂಪರ್ ಹಿಟ್ ಟಕಿಲಾ ಹಾಡನ್ನು ಪ್ಲೇ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ಹಿಂದೆ ಹೊಸ ವರ್ಷದ ಸಮಯದಲ್ಲಿ ಈ ಹಾಡನ್ನು ಪ್ಲೇ ಮಾಡುವಂತೆ ಚಂದನ್ ಮನವಿ ಮಾಡಿಕೊಂಡಿದ್ದರು ಆದರೆ ಅವರ ಆಸೆ ಈಡೇರಿರಲಿಲ್ಲ, ಆದರೀಗ ಬಿಗ್ ಬಾಸ್ ಮನೆಯಲ್ಲಿ ಟಕಿಲಾ ಹಾಡನ್ನು ಕೇಳುವ ಅದೃಷ್ಟ ಖುಲಾಯಿಸಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top