ಕಿರುತೆರೆ

ಕೊನೆ ಘಳಿಗೆಯಲ್ಲಿ ಚಂದನ್ ಶೆಟ್ಟಿಗೆ ನೆನಪಿನ ಕಾಣಿಕೆ ನೀಡಿದ ನಿವೇದಿತಾ ಗೌಡ.

ಕೊನೆ ಗಳಿಗೆಯಲ್ಲಿ ಚಂದನ್ ಶೆಟ್ಟಿಗೆ ನೆನಪಿನ ಕಾಣಿಕೆ ನೀಡಿದ ನಿವೇದಿತಾ ಗೌಡ.

 

 

ಬಿಗ್ ಬಾಸ್ ಸೀಸನ್ 5 ಕೊನೆ ಹಂತ ತಲುಪಿದ್ದು ನೆನ್ನೆಗೆ ಬಿಗ್ ಬಾಸ್ ಮನೆಮಂದಿಯ ದೊಡ್ಮನೆ ವಾಸ ಮುಕ್ತಯಾಗಿದೆ. ಇಂದು ಮತ್ತು ನಾಳೆ ಗ್ರಾಂಡ್ ಫಿನಾಲೆ ನಡೆಯಲಿದ್ದು ವಿನ್ನರ್ ಯಾರಾಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ 13 ಮಂದಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದು 5 ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಬಿಗ್‌ಬಾಸ್ ಆದೇಶ, ಟಾಸ್ಕ್‌ನ ನಿಯಮಗಳನ್ನು ಪಾಲಿಸುತ್ತಲೇ ಕೊನೆಯ ಹಂತ ತಲುಪಿರುವ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಫಿನಾಲೆ ಸ್ಪರ್ಧಿಗಳಾಗಿದ್ದು ಐದೂ ಜನರಲ್ಲೂ ಕಾಂಪಿಟೇಷನ್ ತುಂಬಾ ಜೋರಾಗಿದೆ.. ಮೊದಲಿನಿಂದಲೂ ಬಿಗ್’ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಜೊತೆ ಅನೋನ್ಯವಾಗಿರುವ ನಿವೇದಿತಾ ಗೌಡ ಚಂದನ್ ಗೆ ನೆನಪಿನ ಉಡುಗೊರೆಯೊಂದನ್ನು ನೀಡಿದ್ದಾರೆ.

 

 

ಬಿಗ್‌ಬಾಸ್‌ ಮನೆಯಲ್ಲಿರುವ ಹಾಗೂ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಚಂದನ್ ಶೆಟ್ಟಿಯವರು ನಿವೇದಿತಾ ಗೌಡರನ್ನು ಹೊಗಳಿದರು. ಬಿಗ್‌ಬಾಸ್ ಮನೆಯಲ್ಲಿ ತಮಗೆ ಎಲ್ಲರೂ ಸ್ನೇಹಿತರಾಗಿಯೇ ಇದ್ದರೂ ಅತೀ ಹೆಚ್ಚು ಕ್ಲೋಸ್ ಆಗಿದ್ದು ನಿವೇದಿತಾ ಅವರೇ ಜಾಸ್ತಿ ಎಂದು ಹೇಳಿದರು.. ಇದು ಮುಕ್ತಾಯವಾದ ಮೇಲೆ ಗಾರ್ಡ್‌ನ್ ಏರಿಯಾದಲ್ಲಿ ಚಂದನ್’ಗೆ ತಮ್ಮ ಕೈ ಬೆರಳಿನಲ್ಲಿದ್ದ ರಿಂಗ್‌ನ್ನು ಆಕೆಯ ನೆನಪಿಗಾಗಿ ಇಟ್ಟುಕೊಳ್ಳುವಂತೆ ಹೇಳಿ ನೀಡಿದಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top