ಸಿನಿಮಾ

3 ಪೆಗ್ ಸಾಂಗ್ ಅಸಲಿ ವಾರಸುದಾರ ಇಂದು ಪ್ರತ್ಯಕ್ಷ , ಚಂದನ್ ಶೆಟ್ಟಿ ಬಗ್ಗೆ ಹೀಗಂದ್ರು ನೋಡಿ ವಿಥ್ ವಿಡಿಯೋ

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ಹೊರಬಂದ ಚಂದನ್ ಶೆಟ್ಟಿ ವಿರುದ್ಧ ಘೋರ ಆರೋಪವೊಂದು ಬಂದಿದೆ.

 

ಚಂದನ್ ಶೆಟ್ಟಿ ತುಂಬಾ ಪ್ರತಿಭಾವಂತ ಹಾಗು ತುಂಬಾ ಕಷ್ಟ ಪಟ್ಟು ಮೇಲೆ ಬೆಳೆದಿರುವಂತಹ ವ್ಯಕ್ತಿ. ತಾನೇ ಲಿರಿಕ್ ಬರೆದು ಮ್ಯೂಸಿಕ್ ಕೊಟ್ಟು ತಯಾರಾದ ಆ ಸಾಂಗ್’ಗಳನ್ನ ಒಂದೊಂದಾಗಿ ಕಲಾ ಕಾಲಕ್ಕೆ ಯೂಟ್ಯೂಬಲ್ಲಿ ಹರಿ ಬಿಟ್ಟು ಹಂತ ಹಂತವಾಗಿ ಯಶಸ್ಸು ಕಂಡ ಬಹುಮುಖ ಪ್ರತಿಭೆ ಚಂದನ್. ಚಂದನ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು ‘ತ್ರೀ ಪೆಗ್’ ಪಾರ್ಟಿ ಸಾಗ್ ಎಂಬ ಹಾಡು. ಈ ಹಾಡು ಸ್ಯಾಂಡಲ್ ವುಡ್ ಅಂಗಳದಲ್ಲಿ ಯಾವ ಸ್ಟಾರ್ ನಟನ ಹಾಡು ಮಾಡದಷ್ಟು ಸೌಂಡ್ ಮಾಡಿತ್ತು. ಯೂಟ್ಯೂಬಲ್ಲಿ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದ ಈ ಹಾಡು ದೇಶ ವಿದೇಶಗಳಲ್ಲೂ ಕೂಡ ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡಿನಿಂದ ಚಂದನ್ ಕೂಡ ಒಂದು ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.

 

 

 

ಕದ್ದು 3 ಪೆಗ್ ಸಾಂಗ್ ಮಾಡುದ್ರಾ ಚಂದನ್ ಶೆಟ್ಟಿ? ನೋಡಿ ಇಲ್ಲಿದೆ ಪ್ರೂಫ್!

 

ಅರ್ಜುನ್ ಸರ್ಜಾ ಅವರ ಸಂಬಂಧಿಯಾಗಿರುವ ಸಂಗೀತ ನಿರ್ದೇಶಕ ವಿಜೇತ್ ಅವರು ಈಗ ಗಂಭೀರ ಆರೋಪವೊಂದನ್ನು ಮಾಡುತ್ತಿದ್ದಾರೆ

2009 -2010 ರಲ್ಲಿ ತ್ರಿ ಪೆಗ್ ಹಾಡನ್ನು ಮಾಡಿದ್ದರಂತೆ ವಿಜೇತ್ ಆ ಸಮಯದಲ್ಲಿ ವಿಜೇತ್ ಅವರಿಗೆ ಹಾಡಲು ಬರುತ್ತಿರಲಿಲ್ಲವಂತೆ

ಆಗ ಕೇವಲ ಮ್ಯೂಸಿಕ್ ಅನ್ನು ಮಾಡಿ ಇಟ್ಟಿದ್ದರಂತೆ ವಿಜೇತ್ ಆಗಷ್ಟೇ ತಮ್ಮ ಊರನ್ನು ಬಿಟ್ಟು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರೂ ಇದೇ ಸಮಯದಲ್ಲಿ ಸಕಲೇಶ್ವರ ಚಂದನ್ ಶೆಟ್ಟಿ ಬೆಂಗಳೂರಿಗೆ ಬಂದು ನೆಲೆಸಿದ್ದರು ಇಬ್ಬರೂ ವರ್ಷಗಳ ಕಾಲ ಗೆಳೆಯರಾಗಿದ್ದರು.

 

 

2012 ರಲ್ಲಿ ಒಂದು ದಿನ ಗೆಳೆಯ ಸೂರಜ್ ಮನೆಯಲ್ಲಿ ಭೇಟಿಯಾದರೂ ಚಂದನ್ ಶೆಟ್ಟಿ ಹಾಗೂ ವಿಜೇತ್ ಚಂದನ್ ಶೆಟ್ಟಿ ಯಾವ ಯಾವ ರೀತಿಯ ಮ್ಯೂಸಿಕ್ನ ಮಾಡಿದ್ದೀರಾ ತೋರಿಸಿ ಎಂದು ಕೇಳಿದಾಗ ವಿಜೇತ್ ತಾವು ಮಾಡಿದ್ದ ತ್ರಿ ಪೆಗ್ ಮ್ಯೂಸಿಕ್ ಚಂದನ್ ಶೆಟ್ಟಿಯವರಿಗೆ ಕೇಳಿಸಿದರಂತೆ ಹೀಗೆ ತ್ರಿ ಪೆಗ್ ಹಾಡನ್ನು ಕೇಳಿದ ಚಂದನ್ ಶೆಟ್ಟಿ ಅಲ್ಲಿಯೇ ಹಾಡಿಗೆ ಲಿರಿಕ್ಸ್ (ಸಾಹಿತ್ಯ ) ಬರೆಯಲು ಶುರು ಮಾಡಿದರಂತೆ ನಂತರ ‘ಮೂರೇ ಮೂರು ಪೆಗ್ಗಿಗೆ’ ಎಂಬ ಸಾಲನ್ನು ಬರೆದು ಅಲ್ಲಿಯ ಹಾಡನ್ನು ರೆಕಾರ್ಡ್ ಕೂಡ ಮಾಡಿದ್ದರಂತೆ .

ಆ ಸಮಯದಲ್ಲಿ ಒಂದು ಸರಿಯಾದ ಟೀಂ ಇರಲಿಲ್ಲವಂತೆ ಕ್ಯಾಮೆರಾಮನ್, ಎಡಿಟಿಂಗ್ ರೆಕಾರ್ಡಿಂಗ್ ಇವುಗಳ ಯಾವುದೇ ಜ್ಞಾನ ಇಬ್ಬರಿಗೂ ಇರಲಿಲ್ಲವಂತೆ ಇದಾದ ನಂತರ ಸುಮಾರು ಐದು ವರ್ಷಗಳಾದ ಮೇಲೆ ಒಂದು ಸರಿಯಾದ ಟೀಮ್ ಮಾಡಿಕೊಂಡರಂತೆ ಇದರಲ್ಲಿ ಕ್ಯಾಮೆರಾಮನ್ ವಿಎಫ್ಎಕ್ಸ್ ಎಡಿಟಿಂಗ್ ತಂತ್ರಜ್ಞರು ಎಲ್ಲರೂ ಇದ್ದರಂತೆ ಈ ಸಮಯದಲ್ಲಿ ಹಣ ಹೂಡುವವರು ಇಲ್ಲದ ಕಾರಣ ಹಣ ಹೂಡುವವರನ್ನು ಹುಡುಕಿದಂತೆ ಆಗ ಮೂಡಿದ್ದೇ ‘ಹಾಳಾಗೋದೇ ‘ ಎಂಬ ರಾಪ್ ಸಾಂಗ್ .

 

 

ಇದಾದ ಬಳಿಕ ಐದು ವರ್ಷಗಳ ಮುಂಚೆ ತ್ರಿ ಪೆಗ್ ಹಾಡನ್ನು ಅರ್ಧ ರೆಕಾರ್ಡ್ ಮಾಡಿ ಹಾಗೆ ಇಟ್ಟಿದ್ದರು ಇದನ್ನು ಪೂರ್ತಿ ಮಾಡೋಣ ಎಂಬ ಆಸೆಯಿಂದ ಕನ್ನಡದಲ್ಲಿ ಒಂದು ಕ್ಲಬ್ ಸಾಂಗ್ ಕೂಡ ಇಲ್ಲ ಈ ಹಾಡನ್ನು ಮಾಡಿದರೆ ಚೆನ್ನಾಗಿರುತ್ತದೆ ಎಂದು ವಿಜೇತ್ ಚಂದನ್ ಶೆಟ್ಟಿಯವರಿಗೆ ಕೇಳಿಕೊಂಡರು.

ಚಂದನ್ ಶೆಟ್ಟಿ ಬಗ್ಗೆ ಹೀಗಂದ್ರು ವಿಜೇತ್ ನೋಡಿ ವಿಥ್ ವಿಡಿಯೋ

 

2016 ರಲ್ಲಿ ತ್ರಿ ಪೆಗ್ ಹಾಡು ಬಿಡುಗಡೆಯಾಯ್ತು ಇದಾದ ನಂತರ ಒಮ್ಮೆ ಪತ್ರಕರ್ತರನ್ನು ಕರೆದು ಸಭೆ ನಡೆಸಿದ್ದರು ಇಷ್ಟು ಮಾತ್ರ ವಿಜೇತ್ ಅವರಿಗೆ ಗೊತ್ತಿತ್ತು

ಈ ಹಾಡು ಸಕ್ಸಸ್ ಕಂಡ ನಂತರ ಮತ್ತೊಮ್ಮೆ ಪತ್ರಕರ್ತರನ್ನು ಕರೆದು ಸಭೆ ನಡೆಸಿದ್ದರು ಇದರ ಬಗ್ಗೆ ಅವರಿಗೆ ಅರಿವಿರಲಿಲ್ಲ

ಹೊಸ ಕನ್ನಡ ರ್ಯಾಪ್ ಪ್ರತಿಭೆಗಳಿಗೆ ಅವಕಾಶ ನೀಡುವ ಹಾಗೂ ರ್ಯಾಪ್ ಹಾಡುಗಳನ್ನು ಮತ್ತೊಂದು ವಿಶಿಷ್ಟ ಮೈಲಿಗೆ ತೆಗೆದುಕೊಂಡು ಹೋಗುವ ಉದ್ದೇಶವನ್ನು ಹೊಂದಿದ್ದಾರೆ, ನನ್ನ ಹಾಡು ಇನ್ನೊಬ್ಬರು ಮಾಡಿದ್ದಾರೆ ಎಂದು ಹೇಳಿಕೊಳ್ಳುವಾಗ ಬೇಜಾರಾಗುತ್ತದೆ ಆದರೂ ಯೋಚನೆ ಮಾಡುವುದಿಲ್ಲ ಮುಂದೆ ಆಗುವ ಕೆಲಸಗಳನ್ನು ನೋಡುತ್ತೇನೆ ಎನ್ನುತ್ತಾರೆ ವಿಜೇತ್

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top