ಸಿನಿಮಾ

ಒಂದು ಕಾಲದಲ್ಲಿ ಪಡ್ಡೆಗಳ ನಿದ್ಧೆ ಕೆಡಿಸಿದ ನಟಿ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ ಗೊತ್ತೆ ?

 

 

ದಕ್ಷಿಣ ಭಾರತ ಕಂಡ ಅದ್ಬುತ ಕಲಾವಿದೆ ಮತ್ತು ಡ್ಯಾನ್ಸರ್ ಡಿಸ್ಕೋ ಶಾಂತಿ .ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ತಾರೆ ಈ ಡಿಸ್ಕೋ ಶಾಂತಿ .ಇವರು ಅಧಿಕವಾಗಿ ಡಿಸ್ಕೋ ಡಾನ್ಸ್ ಮಾಡುತ್ತಿದ್ದರಿಂದ ಇವರಿಗೆ ಡಿಸ್ಕೋ ಶಾಂತಿ ಎಂಬ ಹೆಸರು ಬಂತು , ಆ ಕಾಲದಲ್ಲಿ ಇವರಿಗೆ ಇದ್ದ ಬೇಡಿಕೆ ನಾವು ಊಹಿಸಲು ಆಗುವುದಿಲ್ಲ .
ಇವರು ಹುಟ್ಟಿದು ಆಗಸ್ಟ್ 28 1965 ,ತಮಿಳು ನಾಡಿನಲ್ಲಿ .ಇವರ ತಂದೆ ಸಿ. ಎಲ್. ಆನಂದನ್.ಇವರ ಬಾಲ್ಯದ ತುಂಟಾಟಗಳನ್ನೂ ನೆನೆದು ಅವರೇ ನಗುತ್ತಾರೆ ,ಅವರ ಅಣ್ಣನ ಜೊತೆ ಸೇರಿ ಮನೆಯಲ್ಲಿ ದುಡ್ಡನ್ನು ಕದಿಯುತ್ತಿದ್ದದು ಅವರಿಗೆ ಇನ್ನು ನೆನಪಿನಲ್ಲಿ ಇದೆ .

 

 

1985 ರಲ್ಲಿ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ,ಮೊದಲಿಗೆ ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದ ಇವರು ನಟಿಯಾಗಿ 2 ಚಿತ್ರಗಳಲ್ಲಿ ನಟಿಸಿದರು ಆದರೆ ಆ ಚಿತ್ರಗಳು ಅಷ್ಟು ಅವರಿಗೆ ಅದೃಷ್ಟ ತಂದುಕೊಡುವುದಿಲ್ಲ ,ನಂತರ ವಿಧಿ ಇಲ್ಲದೆ ಬಂದ ಐಟಂ ಡ್ಯಾನ್ಸರ್ ಪಾತ್ರವನ್ನು ಮಾಡಬೇಕಾಯಿತು ನಂತರ ಅವರ ಪ್ರತಿಭೆಯ ಫಲ 1985 ರಿಂದ 1996 ರವರಿಗೂ ಬಲು ಬೇಡಿಕೆಯಲ್ಲಿ ಇರುತ್ತಾರೆ ,ಇವರು ಕನ್ನಡ ಸೇರಿದಂತೆ ತೆಲುಗು ,ತಮಿಳು ,ಮಲಯಾಲಂ,ಹಿಂದೂ ಮತ್ತು ಒರಿಯಾ ಚಿತ್ರಗಳಲ್ಲಿ ನಟಿಸಿ ಮತ್ತು ಕುಣಿದು ಜನರ ಚಪಾಳೆ ಗಿಟ್ಟಿಸಿಕೊಂಡವರು .900 ಕ್ಕೂ ಅಧಿಕ ಭಾಷೆಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದು.

ಶಾಂತಿಯವರು ಮಾಡಿರುವ ಕನ್ನಡ ಸಿನಿಮಾಗಳು ಸತ್ಕಾರ ,ಹುಲಿ ಹೆಬ್ಬುಲಿ,ಜಯಸಿಂಹ ,ಆಸೆ ,ಕುರುಕ್ಷೇತ್ರ ,ಸಂಗ್ರಾಮ,ಅಂತಿಮ ಘಟ್ಟ,ಶಕ್ತಿ,ಗುಡುಗು ಸಿಡಿಲು,ತಾಯಿ ಕರುಳು ,ಅಂಜದ ಗಂಡು ಮತ್ತು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ .

 

 

1992 ರಲ್ಲಿ ಶ್ರೀಹರಿ ಎಂಬ ತೆಲುಗು ನಟನನ್ನು ಅವರ ಮನೆಯವರ ಒಪ್ಪಿಗೆಯ ಮೇರೆ ಒಂದು ಜ್ಯೋತಿಷ್ಯ ದೋಷದ ಕಾರಣ ಯಾರಿಗೂ ಗೊತ್ತಾಗದಂತೆ ಪ್ರೇಮ ವಿವಾಹವಾಗುತ್ತಾರೆ .

1996 ರಲ್ಲಿ ಮತ್ತೆ ಎಲ್ಲರ ಸಮುಖದಲ್ಲಿ ಮದುವೆಯಾಗುತ್ತಾರೆ ,ಆ ಕ್ಷಣದಿಂದ ಅವರ ಹೆಸರು ಡಿಸ್ಕೋ ಶಾಂತಿ ಯಿಂದ ಶಾಂತಿಶ್ರೀ ಹರಿ ಯಾಗುತ್ತದೆ ನಂತರ ಶಾಂತಿಯವರು ಸಿನಿಮಾ ಚಿತ್ರರಂಗಕ್ಕೆ ಬೈ ಹೇಳುತ್ತಾರೆ.

 

ಮದುವೆ ಆದಮೇಲೆ 2 ಗಂಡು ಮಕ್ಕಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಶಾಂತಿ ಆ ಹೆಣ್ಣು ಮಗುವಿನ ಹೆಸರು ಅಕ್ಷರ ಆದರೆ ಆ ಹೆಣ್ಣುಮಗು ಹೆಚ್ಚು ಕಾಲ ಬದುಕುವುದಿಲ್ಲ ,ನಂತರ ಮಗಳ ನೆನಪಿಗೆ ಅಕ್ಷರ ಫೌಂಡೇಶನ್ ಶುರು ಮಾಡುತ್ತಾರೆ ಅದರ ಮೂಲಕ ಅನೇಕ ಹಳ್ಳಿಗಳಿಗೆ ನೀರು ಮತ್ತು ಬಡ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಾರೆ ಮತ್ತು ಈ ದಂಪತಿಗಳು 4 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ.

 

 

 

 

ಇವರ ಸಂತೋಷದ ಬದುಕಿಗೆ ಬಿರುಗಾಳಿ ಒಂದು ಬಡಿಯುತ್ತದೆ ಅದೇ ಶ್ರೀಹರಿಯವರು ಮರಣ ,2013 ರಲ್ಲಿ ಆರೋಗ್ಯ ಸಮಸ್ಯೆಯಿಂದ ಶ್ರೀಹರಿ ಇಹಲೋಕ ತ್ಯಜಿಸುತ್ತಾರೆ .
ಶ್ರೀಹರಿಯವರನ್ನು ಕಳೆದುಕೊಂಡ ದುಃಖದಿಂದ ಇನ್ನು ಹೊರಬರಲು ಶಾಂತಿಯವರು ಪ್ರಯತ್ನ ಮಾಡುತ್ತಿದ್ದಾರೆ.ಶ್ರೀಹರಿಯವರು ಬದುಕಿದ ಕಾಲದಲ್ಲಿ ಚಿತ್ರರಂಗದವರು ,ಸಂಬಧಿಕರು ಇವರ ಕುಟುಂಬದ ಮೇಲೆ ತೋರುತಿದ ಪ್ರೀತಿ ,ವಿಶ್ವಾಸ ಈಗ ಮಾಯವಾಗಿದೆ .

 

 

ಅತಿ ಹೆಚ್ಚು ತಮ್ಮ ಚೆನ್ನೈ ಮನೆಯಲ್ಲಿ ಕಾಲ ಕಳೆಯುವ ಶಾಂತಿಯವರು ಅವರ ಮಕ್ಕಳ ಜೊತೆ ಸುಖ ಜೀವನ ನಡೆಸಲಿ ಎಂದು ನಾವು ಆಶಿಸೋಣ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top