ಮನೋರಂಜನೆ

ಕಣ್ ಸನ್ನೆಯಲ್ಲೇ ಹುಡುಗಿಯರ ಮನಸ್ಸು ಗೆಲ್ಲುತ್ತಿದ್ದಾನೆ ನಟ ರೋಷನ್!

ಕಣ್ ಸನ್ನೆಯಲ್ಲೇ ಹುಡುಗಿಯರ ಮನಸ್ಸು ಗೆಲ್ಲುತ್ತಿದ್ದಾನೆ ನಟ ರೋಷನ್!

 

 

ಸೋಷಿಯಲ್ ಮೀಡಿಯಾ ಎಂಬುದು ಎಲ್ಲ ಕ್ಷೇತ್ರಗಳನ್ನೂ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಈಗ ಸೋಷಿಯಲ್ ಮೀಡಿಯಾ ಮೂಲಕ ರಾತ್ರೋ ರಾತ್ರಿ ಲಕ್ಷಂತಾರ ಅಭಿಮಾನಿಗಳನ್ನು ಹುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಏಕಾಏಕಿ ಪ್ರಸಿದ್ಧಿಯನ್ನ ಪಡಿಯಬೋದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಮಲೆಯಾಳಂ ಯುವ ನಟ ನಟಿಯರಾದ ರೋಷನ್ ಅದ್ಬುಲ್ ಮತ್ತು ಪ್ರಿಯ ವಾರಿಕರ್. ಸದ್ಯ ಇಂಟರ್ನೆಟ್ ಮೂಲೆ ಮೂಲೆಗಳಲ್ಲಿ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಿಯಾ ವಾರಿಯರ್ ಅವರದ್ದೇ ಹವಾ ಈಕೆಯ ನೆರಳಲ್ಲಿ ರೋಷನ್ ಕೂಡ ಸಾಕಷ್ಟು ಖ್ಯಾತಿಯನ್ನ ಗಳಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಇಡೀ ದೇಶದ ಸೋಷಿಯಲ್ ಮೀಡಿಯವನ್ನೇ ಆವರಿಸಿಕೊಂಡಿರುವ ಪ್ರಿಯಾ ವಾರಿಯರ್ ಒಂದೇ ಒಂದು ಸಣ್ಣ ವೀಡಿಯೊ ಮೂಲಕ ಪಡ್ಡೆ ಹುಡುಗರ ಹೊಸ ಕ್ರಶ್ ಎಂದೇ ಕರೆಸಿಕೊಳ್ಳುತ್ತಿದ್ದಾಳೆ. ಈ ಮಧ್ಯೆ ಈ ವಿಡಿಯೋದಲ್ಲಿ ಆಕೆಯ ಜೊತೆ ನಟಿಸಿರುವ ರೋಷನ್ ಕೂಡ ಮೆಚ್ಚುಗೆಗಳಿಸುತ್ತಿದ್ದಾನೆ. ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಹಾಡಿನಲ್ಲಿನ ಕೇವಲ ಮೂವತ್ತು ಸೆಕೆಂಡಿನ ವಿಡಿಯೋ ದೇಶದಾದ್ಯಂತ ಹಿಂದೆಂದೂ ಮಾಡಿರಿ ರೀತಿಯಲ್ಲಿ ಜಾದು ಮಾಡಿದೆ.

 

 

ಈ ಇಬ್ಬರು ತೋರಿಸಿದ ಮನಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸನ್ನೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಪ್ರಿಯಾ ವಾರಿಯರ್ ನೋಟಕ್ಕೆ ಹುಡುಗರು ಮರುಳಾಗಿದ್ದರೆ ಇತ್ತ ಹುಡುಗನ ಕಣ್ಣಿನ ಸಂಭಾಷಣೆ ಮತ್ತು ಆತನ ಎಕ್ಸಪ್ರೇಶನ್‌ಗೆ ಹುಡುಗಿಯರು ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹೇಗೆ ಪ್ರಿಯಾಳ ಕಣ್ಣೋಣ ವೈರಲ್ ಆಗಿತ್ತೋ ಅದೇ ರೀತಿ ರೋಷನ್ ಕಣ್ಣಿನ ಸನ್ನೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಹೆಚ್ಚಾಗಿ ಹುಡುಗಿಯರು ತಮ್ಮ ವಾಟ್ಸಪ್‌ ಸ್ಟೇಟಸ್‌, ಇನ್ಸ್ಟಾ ಸ್ಟೋರಿ, ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನಲ್ಲಿ ರೋಷನ್‌ ವಿಡಿಯೋ ತುಣುಕುಗಳನ್ನು ಹರಿಬಿಡುತ್ತಿದ್ದಾರೆ.

 

 

ಈ ಸಣ್ಣ ವಿಡಿಯೋದಿಂದಲೇ ಜನಪ್ರಿಯತೆ ಗಳಿಸಿರುವ ಈ ಜೋಡಿಗೆ ದೊಡ್ಡ ಮಟ್ಟದಲ್ಲೇ ಫಾಲೋಯರ್ಸ್ಗಳು ಹುಟ್ಟುಕೊಂಡಿದ್ದಾರೆ. ಅತ್ತ ಪ್ರಿಯ ವಾರಿಯರ್ ಗೆ ಕೇವಲ ಎರಡು ದಿನಗಳಲ್ಲೇ 25ಲಕ್ಷ ಹಿಂಬಾಲಕರು ಹುಟ್ಟಿಕೊಂಡಿದ್ದು ಅದೇ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಟ ರೋಷನ್’ಗೆ ಮಾತ್ರ ಕೇವಲ ಮೂರುವರೆ ಲಕ್ಷ ಫಾಲೋಯರ್ಸ್ ಹುಟ್ಟುಕೊಂಡಿದ್ದಾರೆ. ಈ ಎರಡು ದಿನದ ಅವಧಿಯಲ್ಲಿ ಹುಟ್ಟುಕೊಂಡಿರುವ ಫಾಲೋಯರ್ಸ್’ಗಳ ಸಂಖ್ಯೆಯ ಅಜಗಜಾಂತರವೇ ಈಗ ಎಲ್ಲೆಡೆ ಟ್ರೊಲ್ ಆಗುತ್ತಿದ್ದು, ಯಾತಕ್ಕೆ ಹುಡುಗಿಗೆ ಸಿಕ್ಕಿರುವ ಪ್ರಾಶಸ್ತ್ಯ ಹುಡುಗನಿಗೆ ಸಿಕ್ತಿಲ್ಲ, ಇದು ಸರಿಯಾ ಎಂಬೆಲ್ಲಾ ವ್ಯಂಗ್ಯ ಪ್ರಶ್ನೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಒಂದೇ ಹಾಡಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು ನಟಿಗೆ ನಟನನ್ನೂ ಮೀರಿಸಿ ಭಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ದೊರಕಿರುದನ್ನು ನೋಡಿದರೆ ನಮಗೆ ‘ಹೆಣ್ಣುಮಕ್ಳ್ಯೇ ಸ್ಟ್ರಾಂಗ್ ಗುರು’ ಎಂಬ ಹಾಡು ನೆನಪಿಗೆ ಬರದೇ ಇರೋದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top