ದೇವರು

ಈ ನೈಸರ್ಗಿಕ ಶಿವ ಲಿಂಗ ಪ್ರತಿ ವರ್ಷವೂ ಎತ್ತರಕ್ಕೆ ಬೆಳೆಯುತ್ತಾ ತನ್ನ ವಿಸ್ಮಯಗಳಿಂದ ಎಲ್ಲರಿಗು ಆಶ್ಚರ್ಯ ಉಂಟುಮಾಡಿದೆ

ಪ್ರತಿ ವರ್ಷವೂ ಎತ್ತರಕ್ಕೆ ಬೆಳೆಯುತ್ತಾ ವಿಸ್ಮಯವನ್ನು ಉಂಟು ಮಾಡುವ ಈ ನೈಸರ್ಗಿಕ ಶಿವ ಲಿಂಗದ ಬಗ್ಗೆ ನಿಮಗೆ ಗೊತ್ತೇ

 

ಈ ಶಿವಲಿಂಗವು ಪ್ರತಿ ವರ್ಷ ಎಂಟು ಇಂಚಿನಷ್ಟು ಎತ್ತರಕ್ಕೆ ಬೆಳೆಯುತ್ತಿದೆ .ನೈಸರ್ಗಿಕವಾದ ಕಲ್ಲು ಬಂಡೆಯಿಂದ ಆದ ಈ ಶಿವಲಿಂಗವು ಪ್ರತಿ ವರ್ಷದಿಂದ ವರ್ಷಕ್ಕೆ ಎತ್ತರಕ್ಕೆ ಹಾಗೂ ಅಗಲಕ್ಕೆ ಬೆಳೆಯುತ್ತಿದೆ ಎಂಬುದನ್ನು ಇಲ್ಲಿನ ಸ್ಥಳೀಯರು ನಂಬುತ್ತಾರೆ.

 

ಹಾಗಾದರೆ ಈ ಶಿವಲಿಂಗ ಇರುವುದಾದರೂ ಎಲ್ಲಿ

 

 

ಈ ಶಿವಲಿಂಗವಿರುವ ಸ್ಥಳ ಛತ್ತೀಸ್ ಗಡದ ಗರಿಯ ಬಂದ ಜಿಲ್ಲೆಯ ಒಂದು ಕಾಡು ದಟ್ಟವಾದ ಕಾಡಿನಲ್ಲಿ ಈ ಭೂತೇಶ್ವರ ಲಿಂಗವು ಪ್ರಖ್ಯಾತಿ ಪಡೆದಿದೆ ತನ್ನ ನೈಸರ್ಗಿಕ ರೂಪವನ್ನು ಈಗಲೂ ಹಾಗೆಯೇ ಉಳಿಸಿಕೊಂಡಿದೆ ಪ್ರತಿ ವರ್ಷ ಎತ್ತರಕ್ಕೆ ಬೆಳೆದು ತನ್ನ ವಿಸ್ಮಯದಿಂದ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

 

ದೇವಾಲಯದ ಇತಿಹಾಸ

 

ಶೋಭಾ ಸಿಂಹ ಎಂಬ ಹೆಸರಿನ ವ್ಯಕ್ತಿಯೊಬ್ಬ ಪಾರಂ ಗಾಂವ್ ಸ್ಥಳದಲ್ಲಿ ವಾಸವಿರುತ್ತಾನೆ ಒಮ್ಮೆ ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ದೊಡ್ಡದಾದ ಕಲ್ಲಿನ ಆಕೃತಿಯೊಂದು ಕಣ್ಣಿಗೆ ಕಾಣುತ್ತದೆ.

 

 

ಅಲ್ಲಿಯೇ ವ್ಯವಸಾಯ ಮಾಡುತ್ತಿದ್ದ ಶೋಭಾ ಸಿಂಹನಿಗೆ ಯಾವಾಗಲೂ ಎತ್ತು ಹಾಗೂ ಹುಲಿ ಶಬ್ದ ಮಾಡುವ ಹಾಗೆ ಅನಿಸುತ್ತಿರುತ್ತದೆ ಆದರೆ ಸುತ್ತಮುತ್ತಲೂ ಎಲ್ಲೂ ನೋಡಿದರೂ ಎತ್ತು ಅಥವಾ ಹುಲಿ ಕಾಣಿಸುವುದಿಲ್ಲ

ಈ ವಿಷಯವನ್ನು ತಿಳಿದ ಗ್ರಾಮಸ್ಥರು ಸುತ್ತಮುತ್ತಲೂ ಎತ್ತು ಹಾಗೂ ಹುಲಿಗೆ ಹುಡುಕಾಟ ನಡೆಸುತ್ತಾರೆ ಆದರೆ ಎಲ್ಲಿ ಹುಡುಕಿದರೂ ಹುಲಿ ಅಥವಾ ಎತ್ತಿನ ಯಾವುದೇ ಸುಳಿವು ಸಿಗುವುದಿಲ್ಲ

ನಂತರ ಅವರಿಗೆ ತಿಳಿಯುವ ವಿಷಯವೇನೆಂದರೆ ಆ ಶಬ್ದ ಈ ಬಂಡೆ ಯಿಂದಲೇ ಬರುತ್ತಿದೆ ಎನ್ನುವುದು ಹೀಗೆ ಗ್ರಾಮಸ್ಥರಲ್ಲಿ ಆ ಬಂಡೆಯ ಮೇಲೆ ವಿಶಿಷ್ಟ ನಂಬಿಕೆ ಉಂಟಾಗಿ ಮುಂದೆ ಪೂಜೆ ಮಾಡಲು ಶುರು ಮಾಡುತ್ತಾರೆ ಆ ಬಂಡೆಯನ್ನು ಪೂಜೆ ಮಾಡಲು ಶುರು ಮಾಡಿದಾಗಿನಿಂದ ಹದಿನೆಂಟು ಅಡಿ ಎತ್ತರಕ್ಕೆ ಬೆಳೆದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top