ಅರೋಗ್ಯ

ಚಪಾತಿ ಜೊತೆ ಏನು ಬೆರೆಸಿ ತಿಂದ್ರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ನಿಮಗೆ ಗೊತ್ತೇ

ಚಪಾತಿ ಜೊತೆ ಏನು ಬೆರೆಸಿ ತಿಂದ್ರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ನಿಮಗೆ ಗೊತ್ತೇ

ನಮ್ಮ ದಿನನಿತ್ಯದ ಆಹಾರ ಸೇವನೆ ಸರಿಯಾದ ರೀತಿಯಲ್ಲಿ ಇರದೇ ಇಲ್ಲದ ಪಕ್ಷದಲ್ಲಿ ನಮಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಾವು ದಿನಾಲೂ ಬೆಳಿಗ್ಗೆ, ಮಧ್ಯಾಹ್ನ ಹಾಗು ರಾತ್ರಿ ಹೊತ್ತಿನಲ್ಲಿ ಹೇಗೆ ಆಹಾರ ಸೇವನೆ ಮಾಡುತ್ತೇವೆ ಯಾವ ರೀತಿ ಸಮತೋಲನದ ಆಹಾರ ಸೇವನೆ ಮಾಡುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಅರೋಗ್ಯ ನಿರ್ಧಾರವಾಗುತ್ತದೆ.

 

 

ಅನಾಧಿಕಾಲದಿಂದ ನಮ್ಮ ಹಿರಿಯರು ವಿಜ್ಞಾನಿಗಳು, ತಜ್ಞರ ಸಲಹೆ ಇಲ್ಲದೆ ಸೂಕ್ತವಾದ ಆಹಾರವನ್ನು ಸೇವನೆ ಮಾಡುತ್ತಿದ್ದರು. ನಮಗೆ ಇಷ್ಟೆಲ್ಲಾ ಸೌಕರ್ಯ ಇದ್ದರು ನಾವು ಹೇಗೆ ಬೇಕಾದರೂ ಆಹಾರ ಸೇವನೆ ಮಾಡಿ ನಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.

 

 

ನಾವು ಚಪಾತಿಯನ್ನು ಹೇಗೆ ಸೇವನೆ ಮಾಡಬೇಕೆಂದು ಮಾಡಬೇಕೆಂದು ತಿಳಿದುಕೊಳ್ಳೋಣ. ಹಿಂದಿನ ಕಾಲದಿಂದ ನಮ್ಮ ಹಿರಿಯರು ಚಪಾತಿಯ ಜೊತೆಗೆ ತುಪ್ಪವನ್ನು ಸೇರಿಸಿ ಸೇವನೆ ಮಾಡುತ್ತಿದ್ದರು. ತುಪ್ಪದ ಪ್ರಮಾಣ ಇತಿ, ಮಿತಿ ಆಗಿದ್ದರೆ ಒಳ್ಳೆಯದು. ಇದು ಆರೋಗ್ಯಕ್ಕೆ ಉತ್ತಮ.

ಇನ್ನು ಹಣ್ಣುಗಳ ವಿಚಾರಕ್ಕೆ ಬಂದರೆ ಸೀಬೆ ಹಣ್ಣು, ಪಪ್ಪಾಯ ಮತ್ತು ಕಿವಿ ಹಣ್ಣನ್ನು ನಾವು ಒಟ್ಟಾಗಿ ಸೇವನೆ ಮಾಡುವುದರಿಂದ ಬಹಳ ಪ್ರಯೋಜನಗಳಿವೆ ಇದು ಪಚನ ಕ್ರಿಯೆಯನ್ನು ಇದು ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುತ್ತದೆ. ಮತ್ತು ನಮ್ಮ ತೂಕವನ್ನು ಕಡಿಮೆ ಮಾಡಲು ಪ್ರಯೋಜನ ವಾಗುತ್ತದೆ.

 

 

ಸಮತೋಲನ ಆಹಾರ ಸೇವನೆ ಮಾಡುವುದರಿಂದ ಅತಿಯಾದ ತೂಕ, ಗ್ಯಾಸ್ ಸಮಸ್ಯೆ ಅಜೀರ್ಣ ಸಮಸ್ಯೆ ಇಂತಹುಗಳನ್ನು ನಾವು ಸುಲಭವಾಗಿ ತಡೆಗಟ್ಟಬಗಹುದು. ಆಹಾರ ಸೇವನೆ ಮಾಡುವಾಗ ಯಾವ ಪದಾರ್ಥದ ಜೊತೆ ಯಾವ ಪದಾರ್ಥ ಬೆರೆಸಿ ತಿಂದರೆ ಏನು ಪ್ರಯೋಜನವಾಗುತ್ತದೆ ಎಂಬುದರ ಅರಿವು ನಮಗೆ ಇರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top