ದೇವರು

ಮಹಾಶಿವರಾತ್ರಿಗೆ ಮಂಜುನಾಥ ಭಕ್ತರಿಗೆ 10 ಹೊಸ ನಿಯಮಗಳನ್ನು ಜಾರಿಗೊಳಿಸಿದ ಧರ್ಮಸ್ಥಳದ ಆಡಳಿತ ಮಂಡಳಿ

ಮಹಾಶಿವರಾತ್ರಿಗೆ ಮಂಜುನಾಥ ಭಕ್ತರಿಗೆ 10 ಹೊಸ ನಿಯಮಗಳನ್ನು ಜಾರಿಗೊಳಿಸಿದ ಧರ್ಮಸ್ಥಳದ ಆಡಳಿತ ಮಂಡಳಿ

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಆದರೆ ಕೆಲವು ವರ್ಷಗಳಿಂದ ಸಾಕಷ್ಟು ಭಕ್ತರು ಬೇಕಾಬಿಟ್ಟಿಯಾಗಿ ತಮ್ಮ ಮನಸ್ಸಿಗೆ ಬಂದಂತೆ ದೇವಸ್ಥಾನದ ಆವರಣದಲ್ಲಿ ನೆಡೆದುಕೊಳ್ಳುತ್ತಿರುವುದನ್ನು ಗಮನಿಸಿರುವ ಆಡಳಿತ ಮಂಡಳಿ. ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ.

Image result for ಧರ್ಮಸ್ಥಳ

ಫೆಬ್ರವರಿ 7 ರಂದು ದೇಗುಲದ ಅಧಿಕೃತ ಫೇಸ್ ಬುಕ್ ಅಕೌಂಟಿನ ಮೂಲಕ ಭಕ್ತಾದಿಗಳಲ್ಲಿ ದೇವಾಲಯ ಮನವಿ ಮಾಡಿದ್ದು, ಪ್ರಮುಖವಾಗಿ ಪಾದಯಾತ್ರೆಯ ಮೂಲಕ ಧರ್ಮಸ್ಥಳ ದೇಗುಲಕ್ಕೆ ಬರುವ ಯಾತ್ರಾರ್ಥಿಗಳು ಈ ಪ್ರಕಟಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Related image

ಧರ್ಮಸ್ಥಳದ ಮಹತ್ವದ ಪ್ರಕಟಣೆ

 

  1. ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುವಾಗ ಕಪ್ಪುಬಣ್ಣದ ವಸ್ತ್ರ ಹೊರತು ಪಡಿಸಿ ಬೇರೆ ಬಣ್ಣದ ವಸ್ತ್ರ ಧರಿಸುವುದು ಮತ್ತು ಸಾಲಾಗಿ ಬರುವುದು.
  2. ಅಸಭ್ಯ ಉಡುಪನ್ನು ಧರಿಸಿಕೊಂಡು ಬರಬಾರದು. ( ಸೀರೆ, ಚೂಡಿದಾರ್ ಧರಿಸಿಕೊಂಡು ಹೋಗುವುದು ಸೂಕ್ತ)
  3. ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
  4. ಊಟ, ತಿಂಡಿ ಮಿತವಾಗಿ ಬಳಸುವುದು.
  5. ತಂಗುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಸ್ವಯಂಸ್ಪೂರ್ತಿಯಿಂದ ಸ್ಥಳವನ್ನು ಸ್ವಚ್ಚ ಮಾಡಿರಿ.
  6. ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ /ತೋಳಿನಲ್ಲಿ/ ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.
  7. ದೃಢ ಸಂಕಲ್ಪದೊಂದಿಗೆ ಪಾದಯಾತ್ರೆ ಮಾಡಬೇಕು.
  8. ಪಾದಯಾತ್ರೆಯಲ್ಲಿ ಬರುವಾಗ ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.
  9. ಧೂಮಪಾನ ಮಾಡಬಾರದು.
  10. ಪ್ಲಾಸ್ಟಿಕ್ ವಸ್ತುಗಳನ್ನು ಮಿತವಾಗಿ ಬಳಸಿ ಮತ್ತು ಎಲ್ಲೆಂದರಲ್ಲಿ ಬಿಸಾಡಬಾರದು. ಇದರ ಜೊತೆಗೆ ನೇತ್ರಾವತಿ ಪುಣ್ಯಸ್ನಾನಕ್ಕೆ ತೆರಳುವವರು ಅಲ್ಲಿ ಮೈಕ್ ನಲ್ಲಿ ಹೇಳುವ ಪ್ರಕಟಣೆಗಳನ್ನು ಚಾಚೂತಪ್ಪದೆ ಪಾಲಿಸಲು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಮನವಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top