ಉಪ್ಪಯುತ್ತ ಮಾಹಿತಿ

 “ಡ್ರೆಸ್” ಹಾಕಿಕೊಳ್ಳುವಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ..! ಡ್ರೆಸ್ ಸೆನ್ಸ್ ಬಗ್ಗೆ  ನಿಮಗೋಂದಿಷ್ಟು ಮಾಹಿತಿ

 “ಡ್ರೆಸ್” ಹಾಕಿಕೊಳ್ಳುವಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ..! ಡ್ರೆಸ್ ಸೆನ್ಸ್ ಬಗ್ಗೆ  ನಿಮಗೋಂದಿಷ್ಟು ಮಾಹಿತಿ

ನಾವು ಹಾಕ್ಕೊಳ್ಳೋ ಬಟ್ಟೆ ನಮ್ಮ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು. ಡಿಗ್ನಿಫೈಡ್‌ ಲುಕ್‌ ಇಲ್ಲಾಂದ್ರೆ ಗೆಲ್ಲೋದು ಕಷ್ಟ. ಹಂಗಾದ್ರೆ ನಮ್ಮ ಡ್ರೆಸ್‌ ಹೇಗಿರ್ಬೇಕು? ಅದೇ ಮಾತು.. ಗಟ್ಟಿ ವ್ಯಕ್ತಿತ್ವವನ್ನ ತೋರಿಸೋ ಹಾಗಿರ್ಬೇಕು. ಕೆಲಸದ ವಾತಾವರಣಕ್ಕೆ ಸರಿಹೊಂದುವ ಹಾಗಿರ್ಬೇಕು. ಪ್ರತಿಯೊಂದು ಸ್ಟೈಲ್‌ನಲ್ಲೂ ನೀಟ್‌ನೆಸ್‌ ಎದ್ದುಕಾಣುವಂತಿರಬೇಕು. ಅದು ನಿಮ್ಮ ಕೆಲಸದ ರೀತಿ ಹೇಗಿರತ್ತೆ ಅನ್ನೋದನ್ನ ಕನ್ವೇ ಮಾಡತ್ತೆ. ಕೆಲಸ ಮಾಡೋ ವಾತಾವರಣದಲ್ಲಿ ಪ್ರಫ‌ುಲ್ಲತೆ ಇರ್ಬೇಕು, ಅದಕ್ಕೆ ನಿಮ್ಮ ಇಡೀ ಗೆಶ್ಚರ್‌ ಪ್ರಫುಲ್ಲವಾಗಿರಬೇಕು. ಡ್ರೆಸ್‌, ಮೇಕಪ್‌ನಲ್ಲಿ ಸಿಂಪಲ್ಲಾಗಿ ಚೆನ್ನಾಗಿ ಕಾಣೋದು ಮುಖ್ಯ. ಒಂದಿಷ್ಟು ಡ್ರೆಸ್ಸಿಂಗ್‌ ಟಿಪ್ಸ್‌ಗಳು ಇಲ್ಲಿವೆ.

 

1.ಕೋಟ್ ಧರಿಸುವವರು ಅದಕ್ಕಿರುವ ಮಧ್ಯದ ಬಟನನ್ನು ಮಾತ್ರ ಯಾವಾಗಲೂ ಹಾಕಿಕೊಳ್ಳಬೇಕು. ಯಾವುದೇ ಕಾರಣಕ್ಕು ತೆಗೆಯಬಾರದು. ಇನ್ನು ಮೇಲಿನ ಬಟನನ್ನು ನಿಮಗಿಷ್ಟ ಬಂದಂತೆ ಹಾಕಿಕೊಳ್ಳಬಹುದು. ನಿಮ್ಮ ಅನುಕೂಲಕ್ಕೆ, ಇಷ್ಟಕ್ಕೆ ತಕ್ಕಂತೆ ಮೇಲಿನ ಬಟನ್ ಬೇಕಿದ್ದರೆ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ತೆಗೆಯಬಹುದು. ಅದೇ ರೀತಿ ಕೆಳ ಭಾಗದಲ್ಲಿ ಇರುವ ಬಟನನ್ನು ಮಾತ್ರ ಯಾವುದೇ ಕಾರಣಕ್ಕೂ ಹಾಕಿಕೊಳ್ಳಬಾರದು. ಅದನ್ನು ಅದೇ ರೀತಿ ಬಿಟ್ಟುಬಿಡಬೇಕು. ಕೋಟನ್ನು ಹಾಕಿಕೊಳ್ಳುವವರು ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆ ಇದು.

Related image

 

2.ಷರ್ಟ್ ಅಥವಾ ಬ್ಲೌಸ್ ಹಾಕಿಕೊಳ್ಳುವವರು ಎರಡು ಬಟನ್‌ಗಿಂತಲೂ ಹೆಚ್ಚು ಬಟನ್‌ಗಳನ್ನು ತೆಗೆಯಬಾರದು. ತೆಗೆದರೆ ಕ್ಲೀವೇಜ್ ಕಾಣುತ್ತದೆ. ಅಸಹ್ಯವಾಗಿರುತ್ತದೆ.

3.ಕಿವಿಯೋಲೆ, ಬ್ರೇಸ್ ಲೆಟ್ ಅಥವಾ ನೆಕ್ಲೇಸ್, ಉಂಗುರ ಮ್ಯಾಚ್ ಆಗುವಂತೆ ಆಭರಣಗಳು ಇರಬೇಕು. ಆ ರೀತಿ ಅಲ್ಲದೆ ಇಯರ್ ರಿಂಗ್ಸ್, ನೆಕ್ಲೇಸ್, ಬ್ರೇಸ್ ಲೆಟ್, ಉಂಗುರ ಎಲ್ಲವೂ ಒಂದೇ ರೀತಿ ಇರುವಂತೆ ಧರಿಸಿದರೆ ಚೆನ್ನಾಗಿರಲ್ಲ. ಯಾವುದಾದರೂ ಎರಡು ಮಾತ್ರ ಮ್ಯಾಚ್ ಆಗುವಂತೆ ಧರಿಸಿದರೆ ಚೆನ್ನಾಗಿರುತ್ತದೆ.

4.ಟೈಯನ್ನು ತುಂಬಾ ಉದ್ದವಾಗಿ ಅಥವಾ ಗಿಡ್ಡವಾಗಿ ಧರಿಸಬಾರದು. ಅದು ಹೊಕ್ಕಳು ದಾಟಿ ಸೊಂಟದ ತನಕ ಸ್ವಲ್ಪ ಬಂದಂತೆ ಧರಿಸಿದರೆ ಸಾಕು.

5.ಮಿನಿ ಸ್ಕರ್ಟ್ ಅಥವಾ ಕ್ಲೀವೇಜ್ ಯಾವುದೋ ಒಂದು ತರಹ ಡ್ರೆಸ್ ಮಾತ್ರ ಹಾಕಿಕೊಳ್ಳಬೇಕು. ಎರಡು ಡಿಸೈನ್‌ಗಳನ್ನು ಬೆರೆಸಿ ಡ್ರೆಸ್ ಧರಿಸಿದರೆ ಚೆನ್ನಾಗಿರಲ್ಲ.

6.ಕೋಟ್ ಇಲ್ಲದೆ ಶರ್ಟ್ ಮಾತ್ರ ಧರಿಸುತ್ತಿದ್ದರೆ ಟೈ ಅಗತ್ಯವಿಲ್ಲ.

7.ಮಹಿಳಾ ಉದ್ಯೋಗಿಗಳು ಕಚೇರಿಯಲ್ಲಿ ಧರಿಸುವ ಡ್ರೆಸ್‌ಗಳಲ್ಲಿ ಶಾರ್ಟ್ ಕ್ಲೀವೇಜ್ ಕಾಲರ್ ಬೋನ್‌ನಿಂದ 4 ಇಂಚು ಒಳಗಡೆ ಇರಬೇಕು. 4 ಇಂಚು ಮೀರಿದರೆ ಚೆನ್ನಾಗಿರಲ್ಲ.

8.ಪುರುಷರು ಟಕ್ ಹಾಕಿಕೊಂಡರೆ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು.

9.ಮಹಿಳೆಯರು ಟಾಪ್, ಜೀನ್ಸ್ ಧರಿಸಿದರೆ ಟಾಪ್ ಕೆಳಗೆ ನಡು ಭಾಗ ಕಾಣಿಸಬಾರದು. ಆ ರೀತಿ ಕಾಣಿಸದಂತೆ ಬೇರೆ ಯಾವುದಾದರೂ ಟಾಪ್ ಧರಿಸಬೇಕು.

10.ಪುರುಷರು ಧರಿಸುವ ಬೆಲ್ಟ್, ಶೂಸ್ ಕಲರ್ ಒಂದೇ ರೀತಿ ಇದ್ದರೆ ಚೆನ್ನಾಗಿರುತ್ತದೆ.

11.ಬಟ್ಟೆಗಳಿಗೆ ಹಾಕಿರುವ ಟ್ಯಾಗ್‌ಗಳನ್ನು ಕಟ್ ಮಾಡಿಯೇ ಧರಿಸಬೇಕು.

12.ಮಹಿಳೆಯರು ಟಾಪ್, ಬಾಟಮ್ ಧರಿಸುವ ಬಟ್ಟೆಗಳು ಎರಡು ಬೇರೆಬೇರೆ ಕಲರ್ಸ್ ಆಗಿರಬಾರದು. ಒಂದೇ ಕಲರ್‌ನ ಎರಡು ಬೇರೆಬೇರೆ ಶೇಡ್ಸ್ ಅಥವಾ ಎರಡು ಬೇರೆಬೇರೆ ಸೈಜ್‌ಗಳಲ್ಲಿ ಇರುವ ಬಟ್ಟೆ ಧರಿಸಬೇಕು.

13.ಕುಳಿತುಕೊಂಡಾಗ ಸಾಕ್ಸ್ ಮೇಲಿಂದ ಕಾಲುಗಳು ಕಾಣಿಸಬಾರದು. ಲಾಂಗ್ ಸಾಕ್ಸ್ ಧರಿಸಬೇಕು.

14.ಆಫೀಸಿಗೆ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಹೋದರೆ ಅದು ಭುಜಗಳನ್ನು ಕವರ್ ಮಾಡಬೇಕು. ಸ್ಟ್ರಾಪ್ಸ್ ತರಹ ಇದ್ದರೆ ಚೆನ್ನಾಗಿರಲ್ಲ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top