ಅರೋಗ್ಯ

ಕಿವಿ ಗುಗ್ಗೆ ತಗೆದು, ಗುಗ್ಗೆ ಕಡ್ಡಿ ಆಚೆ ಬಿಸಾಡೋಕೆ ಮುಂಚೆ ನಿಮ್ ಗುಗ್ಗೆ ಒಂದ್ಸರಿ ನೋಡ್ಕೊಳ್ಳಿ ಇದೆ ನಿಮ್ ಆರೋಗ್ಯ ಹೇಳ್ಬಹುದು

ಕಿವಿ ಗುಗ್ಗೆ ತಗೆದು, ಗುಗ್ಗೆ ಕಡ್ಡಿ ಆಚೆ ಬಿಸಾಡೋಕೆ ಮುಂಚೆ ನಿಮ್ ಗುಗ್ಗೆ ಒಂದ್ಸರಿ ನೋಡ್ಕೊಳ್ಳಿ ಇದೆ ನಿಮ್ ಆರೋಗ್ಯ ಹೇಳ್ಬಹುದು!

ಕಿವಿ ಗುಗ್ಗೆ ಮೇಣದ ರೀತಿಯ ವಸ್ತು ಕಿವಿ ಕಾಲುವೆ ಹೊರಗಿನ ಭಾಗದ ಚರ್ಮದಲ್ಲಿ ವಿಶೇಷ ಗ್ರಂಥಿಗಳು ಸ್ರವಿಸುವ ಒಂದು ಸಂಪೂರ್ಣವಾಗಿ ಸ್ವಾಭಾವಿಕ ಮೇಣದ ರೀತಿಯ ಪದಾರ್ಥ ,
ನೀರು , ಸಣ್ಣ ಕಸ ಮತ್ತು ಧೂಳಿನ ಕಣಗಳು ಕಿವಿಯ ಒಳಗೆ ಪ್ರವೇಶ ಮಾಡದಂತೆ ತಡೆಯುವ ನೈಸರ್ಗಿಕ ಕ್ರಿಯೆ.

ಲಾಲಾರಸ ಮಾದರಿಯಿಂದ ರಕ್ತಹೀನತೆ ಪತ್ತೆ ಹಚ್ಚಲು ಸಹಾಯಕ ಅಂತೆಯೇ ಮಲ ಪರೀಕ್ಷೆ ಕ್ಯಾನ್ಸರ್ನ ವಿವಿಧ ಬಗೆಗಳನ್ನು ಕಂಡು ಹಿಡಿಯಲು , ಮೂತ್ರಕೋಶ, ಮೂತ್ರಪಿಂಡ ಮತ್ತು ಪ್ರಾಸ್ಟೇಟ್ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಹಾಯಕ.

ಇದರ ಹೆಸರೇ ಸೂಚಿಸುವಂತೆ, ಕಿವಿ ಗುಗ್ಗೆ ಒಂದು ಹಳದಿ ಮೇಣದಂಥ ಸ್ರವಿಸುವಿಕೆ ಸಿರುಮೆನ್ (ಸುಹ್-ರೂ-ಮುನ್) ಬಾಹ್ಯ ಕಿವಿ ಕಾಲುವೆ ಮತ್ತು ಚರ್ಮದ ಕೆಳಗಿರುವ ಗ್ರಂಥಿಗಳು ಉತ್ಪತ್ತಿ ಮಾಡುತ್ತದೆ.

ಇದು ಕಿವಿಯ ಶುಷ್ಕತೆ ಮತ್ತು ಕಿವಿಯ ತುರಿಕೆ ಬರದಂತೆ ಕಿವಿ ಚರ್ಮವನ್ನು ರಕ್ಷಿಸುತ್ತದೆ.
ಹೊರಗಿನ ಅತಿಯಾದ ಶಬ್ದ ತಗ್ಗಿಸಿ ಕಿವಿಯ ಡ್ರಮ್ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ನಿಮ್ಮ ಕಿವಿ ಗುಗ್ಗೆ ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ?

1.ಶುಷ್ಕ ಅಥವಾ ಜಿಗುಟಾದ ಗುಗ್ಗೆ

ಇದು ಸಾಧಾರಣವಾದ ಗುಗ್ಗೆ ಯಾವುದೇ ತೊಂದರೆ ಇಲ್ಲ.

2. ಗುಗ್ಗೆ ಇಲ್ಲದಿರುವುದು

ಕೆರಟಿಟಿಸ್ ಒಬ್ಟ್ಯುರೇನ್ಸ್( keratitis obturans) ಎಂದು ಈ ಸಮಸ್ಯೆಗೆ ಕರೆಯುತ್ತಾರೆ , ಒಳಕಿವಿ ಗ್ರಂಥಿಗಳು ಸ್ರವಿಸಲು ನಿಶಕ್ತವಾಗಿರುವ ಸ್ಥಿತಿ ಇದು , ಶುಷ್ಕತೆ ಮತ್ತು ಕಿವಿಯ ತುರಿಕೆ ಬರುವ ಸಾಧ್ಯತೆ ಹೆಚ್ಚು .

 


3. ಸೋರುವ ಗುಗ್ಗೆ

ಕಿವಿಯ ನಾಳದ ಶುದ್ಧೀಕರಣ ಮೂಲಕ ಕೆಲವು ಕಶ್ಮಲಗಳನ್ನೂ ಹೊರಗೆ ಹಾಕುತ್ತದೆ ,ಅಸಹಜ ಚರ್ಮದ ಬೆಳವಣಿಗೆ “ಕೊಲೆಸ್ಟೆಆಟೋಮಾ”(cholesteatoma.) ಎಂದು ಈ ಸ್ಥಿತಿಗೆ ಕರೆಯುತ್ತಾರೆ.

4. ಪುಡಿಯ ರೀತಿಯ ಗುಗ್ಗೆ

ಗ್ರಂಥಿಗಳ್ಲಲಿ ಗುಗ್ಗೆ ಬೆಳೆದಂತೆ ತೇವಾಂಶ ಕಳೆದುಕೊಳ್ಳುತ್ತದೆ ಇದು ಸಹಜ ಕ್ರಿಯೆಯೇ ಹೆದರುವ ಅಗತ್ಯವಿಲ್ಲ .
ಆದ್ದರಿಂದ ಕಣಗಳ ರೀತಿಯ ಗುಗ್ಗೆ ಕಾಣಸಿಗುತ್ತೆ.

 

5. ವಾಸನೆಯುಕ್ತ ಗುಗ್ಗೆ

ಕಿವಿಯ ಮಧ್ಯ ಭಾಗದಲ್ಲಿ ಹಾನಿ ಅಥವಾ ಸೋಂಕು ಉಂಟಾಗಿ ವಾಸನೆಯುಕ್ತ ಗುಗ್ಗೆ ಬರುತ್ತದೆ.
ಜ್ವರ, ಕಿವಿನೋವು, ಆಯಾಸ, ಕಿವಿಯ ಉರಿಯೂತ ಮತ್ತು ಕಿವುಡುತನ ಸಹ ಈ ರೋಗದ ಕೆಲವು ಇತರ ಲಕ್ಷಣಗಳು.

6. ಹಸಿರು ಮತ್ತು ನೀರಿನಂಶದಗುಗ್ಗೆ

ಅತಿಯಾಗಿ ಬೆವರುತ್ತಿದ್ದಾಗ ಬೆವರು ಕಿವಿಯ ಗುಗ್ಗೆ ಜೊತೆ ಸೇರಿ ಹಸಿರು ಪದಾರ್ಥ ಉಂಟಾಗುತ್ತದೆ ಅಥವಾ ಕಿವಿ ಸೋಂಕು ಉಂಟಾಗಿರುವ ಲಕ್ಷಣವಾಗಿರಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top