ದೇವರು

ಜಿನರಾತ್ರಿ ಹಬ್ಬದ ಮಹತ್ವ, ಐತಿಹಾಸಿಕ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಿ

ಜಿನರಾತ್ರಿ ಹಬ್ಬದ ಮಹತ್ವ, ಐತಿಹಾಸಿಕ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಿ

ಜಿನರಾತ್ರಿ ಎಂದರೆ ಜೈನಧರ್ಮದ ಪ್ರಥಮ ತೀರ್ಥಂಕರರಾಗಿರುವ ಶ್ರೀ 1008 ಭಗವಾನ ಆದಿನಾಥರು ಮೋಕ್ಷಕ್ಕೆ ಹೋದ ದಿನ. ವೃಷಭಸ್ವಾಮಿ ಮೋಕ್ಷಕ್ಕೆ ಹೋದ ದಿನ ಜಿನರಾತ್ರಿ ಅಂದರೆ ಮಾಘ ಬಹುಳ ಚತುರ್ದಶಿ, ಆದಿನಾಥ ತೀರ್ಥಂಕರರು ಮೋಕ್ಷಕ್ಕೆ ಹೋದ ದಿನ ಕ್ರಿ.ಪೂ. 527ನೆಯ ಸಂವತ್ಸರದಲ್ಲಿ ನಾಲ್ಕನೆಯ ಕಾಲ ಮುಗಿದು, ಐದನೆಯ ಕಾಲವಾದ ದುಷಮ ಪ್ರಾರಂಭವಾಯಿತು. ಈಗದು ನಡೆಯುತ್ತಿದೆ. ಇನ್ನು ಸುಮಾರು ನಲವತ್ತು ಸಾವಿರ ವರ್ಷಗಳ ಅನಂತರ ಅತಿ ದುಷಮ ಕಾಲ ಬಂದು ಹಿಂಸೆ ಪರಾಕಾಷ್ಠತೆಗೇರಿ ಮಹಾ ಪ್ರಳಯವಾಗುವುದು.

 

 

ಜೈನಸಂಸ್ಕೃತಿಯಲ್ಲಿ ‘ಜಿನರಾತ್ರಿ’ ಎಂದರೆ ಮಂಗಲಕರವಾದ ರಾತ್ರಿ ಎಂದು ಅರ್ಥವಾಗಿದೆ. ಮಾಘ ಬಹುಳ ಚತುರ್ದಶಿಯ ದಿನಂದಂದು ಆದಿತೀರ್ಥಂಕರರಾದ ಭ. ವೃಷಭದೇವರು ಕೈಲಾಸ ಪರ್ವತದಲ್ಲಿ ಮೋಕ್ಷವನ್ನು ಪಡೆದರು. ಕೈಲಾಸಪರ್ವತಕ್ಕೆ ‘ಅಷ್ಟಪದ’ ಎಂದೂ ಕರೆಯಲಾಗುತ್ತದೆ. ಇದು ಜೈನರ ಪ್ರಥಮ ಸಿದ್ಧ ಕ್ಷೇತ್ರವಾಗಿದೆ. ಆ ದಿನ ಭರತೇಶ್ವರನು ವೈಭವದಿಂದ ಮೋಕ್ಷಕಲ್ಯಾಣ ಪೂಜೆಯನ್ನು ನೆರವೇರಿಸಿದರು. ಅಂದಿನಿಂದ ಈ ದಿನವನ್ನು ಜಿನರಾತ್ರಿಪರ್ವವಾಗಿ ಆಚರಿಸತಕ್ಕ ಸಂಪ್ರದಾಯವಿದೆ. ಹಲವಾರು ಭವಗಳ ಆತ್ಮವಿಕಾಸದ ಫಲವಾಗಿ ಮುಕ್ತಿಗೈದ ಭ. ವೃಷಭದೇವರನ್ನು ಅಭಿಷೇಕಪೂರ್ವಕ ಪೂಜೆ ಮಾಡಿ ಉಪವಾಸವಿದ್ದು, ವ್ರತಾದಿಗಳ ಯಥಾಶಕ್ತಿ ಆಚರಣೆ ಮಾಡುವ ರೂಢಿ ಜೈನಧರ್ಮದಲ್ಲಿದೆ.

 

 

ಜೈನ ಧರ್ಮದ ಮೂಲ ಆಚಾರ ವಿಚಾರವಾಗಲಿ ಇವತ್ತಿಗೂ ಸಹಿತ ಯಾವುದೇ ಬದಲಾವಣೆ ಕಂಡಿಲ್ಲ. ಬದುಕಿ ಹಾಗು ಬದುಕಲು ಬಿಡಿ ಎಂಬ ಧಾರ್ಮಿಕ ತತ್ವವನ್ನು ಜೈನ ಧರ್ಮದವರು ಒಳಗೂಡಿಸಿಕೊಂಡಿರುತ್ತಾರೆ. ತಾವೂ ಬದುಕಿ ಉಳಿದ ಸಕಲ ಜೀವಿಗಳಿಗೂ ಬದುಕುವ ಸಮಾನ ಅವಕಾಶ ನೀಡುವ ಜೈನ ಧರ್ಮವು ಶ್ರೇಷ್ಠ ಧರ್ಮವಾಗಿದೆ. ಶ್ರೀ 1008 ಭಗವಾನ್‌ ಮಹಾವೀರ ತೀರ್ಥಂಕರರು ಬೋಧಿಸಿದ ತತ್ವಗಳು ವಿಶ್ವಮಾನ್ಯವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top