ಸಿನಿಮಾ

ಕಡೆಗೂ ಉಳಿಯಲಿಲ್ಲ ಸುದೀಪ್ ಅಭಿಮಾನಿ!

ಕಿಚ್ಚ ಸುದೀಪ್ ರವರಿಗೆ ಅಭಿಮಾನಿಗಳ ಕೊರತೆಯೇನಿಲ್ಲ ,ಕಿಚ್ಚನ ಅಭಿಮಾನಿ ಬಳಗವೇ ಬಹಳ ದೊಡ್ಡದಾಗಿದೆ ಹೀಗಿರುವಾಗ ವಿನುತಾ ಎಂಬ ಸುದೀಪ್ ಅವರ ಅಭಿಮಾನಿ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದು ಕ್ಯಾನ್ಸರ್ ಖಾಯಿಲೆಯು ನಾಲ್ಕನೇ ಹಂತ ತಲುಪಿದ್ದು , ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದರು .

 

 

ಡಾಕ್ಟರ್ ಗಳು ಇವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಕೈಚೆಲ್ಲಿದ್ದರು  , ತಮ್ಮ ಆಸೆಯಂತೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಬೇಕೆಂದು ಕೇಳಿಕೊಂಡಿದ್ದರು  ವಿನುತಾ

 

 

ಈ ಆಸೆಗೆ ಸ್ಪಂದಿಸಿದ ಕಿಚ್ಚ ಸುದೀಪ್ ಸೇನಾ ಸಮಿತಿ ವಿನುತಾ ಅವರ ಆಸೆಯಂತೆ ಕಿಚ್ಚ ಸುದೀಪ್ ರವರಿಗೆ ವಿಷಯ ಮುಟ್ಟಿಸಿ ವಿನುತಾ ಅವರನ್ನು ಭೇಟಿ ಮಾಡಿಸಿದ್ದರು  .

 

 

ವಿನುತಾ ಕಿಚ್ಚ ಸುದೀಪ್ ಅವರ ಅಭಿಮಾನಿ ಹಾಗೆಯೇ ಕುಶಾಲ ನಗರದ ನಿವಾಸಿ ಇದೀಗ ಕೆಲವೇ ದಿನಗಳ ಹಿಂದೆ ವಿನುತಾ ಕೊನೆಯುಸಿರು ಎಳೆದಿದ್ದಾರೆ .

ಈ ವಿಷಯವನ್ನು ತಿಳಿದ ಕಿಚ್ಚ ಸುದೀಪ್ “ತುಂಬಾ ದುಃಖವಾಗುತ್ತಿದೆ , ನನ್ನ ತಂಗಿ ಕೊನೆಯುಸಿರೆಳೆದ್ದಿದ್ದಾರೆ , ಅವರ ಆತ್ಮಕ್ಕೆ ಶಾಂತಿ ಸಿಗಲಿ , ಈ ಚಿತ್ರವನ್ನು ನಾನು ಜೋಪಾನವಾಗಿ ಕಾಪಾಡಿಕೊಳ್ಳುತ್ತೇನೆ ‘ ಎಂದು ಟ್ವೀಟ್ ಮಾಡಿದ್ದಾರೆ.

 

 

ತೆರೆಯ ಮೇಲಿನ ನಾಯಕನ ಗುಣಕ್ಕಿಂತ ತೆರೆಯ ಹಿಂದಿನ ಕಿಚ್ಚ ರವರ ಈ ಹೀರೋ ಗುಣದಿಂದ ಮತ್ತಷ್ಟು ಹತ್ತಿರ ಆಗ್ತಾರೆ ಕಿಚ್ಚ ಸುದೀಪ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top