ಭವಿಷ್ಯ

ಈ ಗೆರೆಗಳು ನಿಮ್ ಭವಿಷ್ಯದ ಬಗ್ಗೆ ಏನ್ ಹೇಳುತ್ತೆ ಅಂತ ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೀಗೆ ಬರ್ದಿದೆ ನೋಡ್ಕೊಳ್ಳಿ !

ಈ ಗೆರೆಗಳು ನಿಮ್ ಭವಿಷ್ಯದ ಬಗ್ಗೆ ಏನ್ ಹೇಳುತ್ತೆ ಅಂತ ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೀಗೆ ಬರ್ದಿದೆ ನೋಡ್ಕೊಳ್ಳಿ !

ಹಸ್ತ ಸಾಮುದ್ರಿಕ ಶಾಸ್ತ್ರವು ಹಳೆಯ ಕಾಲದ ಜ್ಯೋತಿಷ್ಯ ಗ್ರಂಥಗಳಲ್ಲಿ ಒಂದು ನಮ್ಮ ಕೈ ರೇಖೆಗಳು , ಮೈ ಮೇಲಿನ ಮಚ್ಚೆಗಳು ಮುಖದ ಹಾವಭಾವಗಳನ್ನೂ ನೋಡಿ ಭವಿಷ್ಯವನ್ನು ನುಡಿಯುವ ಕಲೆ.

ಮಣಿಕಟ್ಟಿನ ರೇಖೆಗಳು ಆಯಸ್ಸು ನಿರ್ಧರಿಸುತ್ತೆ , ಅತಿ ಹೆಚ್ಚು ರೇಖೆಗಳಿದ್ದರೆ ಧೀರ್ಘಅಯುಷ್ಯವನ್ನು ಅನುಭವಿಸುತ್ತೀರಾ ಎಂದು
ಮೂರು ರೇಖೆಗಳು ಸಾಮಾನ್ಯ ಆದರೆ ನಾಲ್ಕನೇ ರೇಖೆ ಇದ್ದಾರೆ ಇನ್ನು ಬಹಳ ವರ್ಷಗಳ ಕಾಲ ಬದುಕುತ್ತಾರೆ ಎಂದರ್ಥ.

ಮೊದಲನೇ ಮಣಿಕಟ್ಟಿನ ರೇಖೆ

ಮೊದಲನೇ ರೇಖೆಯು ದಟ್ಟವಾಗಿ ಇದ್ದು ಎಲ್ಲೂ ಮುರಿಯದೆ ಇದ್ದರೆ ಆರೋಗ್ಯದಲ್ಲಿ ಬಹಳ ಅದೃಷ್ಟವಂತರು ಎಂದು , ಈ ರೇಖೆ ಏನಾದರು ಅಲ್ಲಲ್ಲಿ ಬಹಳ ಮುರಿದಿದ್ದರೆ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಹೆಚ್ಚಿರುವ ಸಾಧ್ಯತೆ ಇರಬಹುದು , ಅಂತವರು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

ಮೊದಲನೇ ರೇಖೆಯು ಮುರಿದು ಮೇಲಕ್ಕೆ ಹೋದರೆ ಸ್ತ್ರೀಯರಲ್ಲಿ ಗರ್ಭಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು
ಮೊದಲನೇ ರೇಖೆಯು ಮುರಿದು ಮೇಲಕ್ಕೆ ಹೋದರೆ ಗಂಡಸರಲ್ಲಿ ಸಹ ಮೂತ್ರಕ್ಕೆ ಸಂಬಂಧಿಸಿದ ಅಥವಾ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಆದರೂ ಸಹ ನಿಮ್ಮ ರಾಶಿ ಫಲ ಹಾಗು ನಕ್ಷತ್ರ ಫಲದ ಮೇಲೆ ಇದರ ಪರಿಣಾಮ ನಿರ್ಧಾರವಾಗುತ್ತದೆ.

 

ಎರಡನೇ ಮಣಿಕಟ್ಟಿನ ರೇಖೆ

ಎರಡನೇ ರೇಖೆಯು ದಟ್ಟವಾಗಿ ಇದ್ದು ಎಲ್ಲೂ ಮುರಿಯದೆ ಇದ್ದರೆ ಅಭ್ಯುದಯ, ಸಂಪತ್ತು, ಮತ್ತು ಸಂತೋಷದ ಸೂಚಕವಾಗಿದೆ , ರೇಖೆಗಳು ಮದ್ಯೆ ಮುರಿದು , ಅಂತರವಿದ್ದರೆ ಸಂತೋಷ ಆಗು ಸಂಪತ್ತಿನ ನಡುವೆ ಎಣಗಾಡಬೇಕಾಗುವ ಪರಿಸ್ಥಿತಿ ಎದುರಾಗಬಹುದು .

ಮೂರನೇ ಮಣಿಕಟ್ಟಿನ ರೇಖೆ

ಎರಡನೇ ರೇಖೆಯು ದಟ್ಟವಾಗಿ ಇದ್ದು ಎಲ್ಲೂ ಮುರಿಯದೆ ಇದ್ದರೆ ವೃತಿಯಲ್ಲಿ ಯಶಸ್ಸು ಮತ್ತು ಖ್ಯಾತಿ ಸಂಪಾದನೆ ಮಾಡಬಹುದು ಒಂದು ವೇಳೆ ರೇಖೆಗಳು ಮದ್ಯೆ ಮುರಿದು , ಅಂತರವಿದ್ದರೆ ನಿಮ್ಮ ಬಳಿ ಅವಕಾಶಗಳ ಕೊರತೆ ಇರಬಹುದು.

ನಾಲ್ಕನೇ ಮಣಿಕಟ್ಟಿನ ರೇಖೆ

ಇದು ಬಹಳ ವಿರಳ ಮೂರನೇ ರೇಖೆಗೆ ಇನ್ನು ಹೆಚ್ಚಿನ ಶಕ್ತಿ ನೀಡುವಲ್ಲಿ ನಾಲ್ಕನೇ ಮಣಿಕಟ್ಟಿನ ರೇಖೆ ಸಫಲವಾಗುತ್ತದೆ ,
ನಿರ್ಧಿಷ್ಟ ಗುರಿ ನೀವು ಹೊಂದಿರುತ್ತೀರಾ , ಇದನ್ನು ದೀರ್ಘಅಯುಷ್ಯದ ರೇಖೆ ಎಂದು ಸಹ ಹೇಳಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top