ಮನೋರಂಜನೆ

ಗೂಗಲ್ ಸರ್ಚಿಂಗ್’ನಲ್ಲಿ ಖಾನ್, ಮೋದಿ, ಸನ್ನಿಯರನ್ನೇ ಹಿಂದಿಕ್ಕೆ ನಂ.1 ಸ್ಥಾನಕ್ಕೇರಿದ ಮಲೆಯಾಳಿ ಚೆಲುವೆ! 

ಗೂಗಲ್ ಸರ್ಚಿಂಗ್’ನಲ್ಲಿ ಖಾನ್, ಮೋದಿ, ಸನ್ನಿಯರನ್ನೇ ಹಿಂದಿಕ್ಕೆ ನಂ.1 ಸ್ಥಾನಕ್ಕೇರಿದ ಮಲೆಯಾಳಿ ಚೆಲುವೆ! 

 

 

ಅದೃಷ್ಟ ಬರಲ್ಲ ಒಂದ್ವೇಳೆ ಬಂದ್ರೆ ಒದ್ಕೊಂಡ್ ಬರುತ್ತೆ ಅಂತ ಒಂದ್ ಮಾತಿದೆ ಬಹುಷಃ ಆ ಮಾತು ಈ ಚೆಂದುಳ್ಳಿ ಚೆಲುವೆಗೆ ಅನ್ವಯಿಸುತ್ತದೆ. ಸೋಷಿಯಲ್ ಮೀಡಿಯಾ ಎಂಬುದು ಎಲ್ಲ ಕ್ಷೇತ್ರಗಳನ್ನೂ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಈಗ ಸೋಷಿಯಲ್ ಮೀಡಿಯಾ ಮೂಲಕ ರಾತ್ರೋ ರಾತ್ರಿ ಲಕ್ಷಂತಾರ ಅಭಿಮಾನಿಗಳನ್ನು ಹುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಏಕಾಏಕಿ ಜನಪ್ರಿಯತೆಯನ್ನ ಪಡಿಯಬೋದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಮಲೆಯಾಳಂ ಯುವ ನಟಿ ಪ್ರಕಾಶ್ ವಾರಿಕರ್.

 

 

ಎರಡು ದಿನಗಳಿಂದ ಇಡೀ ದೇಶದ ಸೋಷಿಯಲ್ ಮೀಡಿಯವನ್ನೇ ಆವರಿಸಿಕೊಂಡಿರುವ ಚೆಲುವೆಯೊಬ್ಬಳು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾಳೆ. ಒಂದೇ ಒಂದು ಸಣ್ಣ ವೀಡಿಯೊ ಮೂಲಕ ಪಡ್ಡೆ ಹುಡುಗರ ಹೊಸ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಈಕೆ ತೋರಿಸಿದ ಮನಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸನ್ನೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಹಾಡಿನಲ್ಲಿನ ಕೇವಲ ಮೂವತ್ತು ಸೆಕೆಂಡಿನ ವಿಡಿಯೋ ದೇಶದಾದ್ಯಂತ ಹಿಂದೆಂದೂ ಮಾಡಿರಿ ರೀತಿಯಲ್ಲಿ ಜಾದು ಮಾಡಿದೆ.

 

 

ಈಕೆಯ ಹವಾ ಎಷ್ಟರ ಮಟ್ಟಿಗೆ ಇದೇ ಎಂದರೆ ಗೂಗಲ್ ಸರ್ಚಿಂಗ್’ನಲ್ಲಿ ಕೇವಲ 20ಸೆಕೆಂಡ್ ವಿಡಿಯೋ ಮೂಲಕ ಎರಡೇ ದಿನದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಸ್ಟಾರ್ ನಂತರದ ಸಲ್ಮಾನ್, ಶಾರುಖ್ ಮಾತ್ರವಲ್ಲದೆ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚಿಂಗ್ ಆಗುತ್ತಿದ್ದ ಮಾದಕ ನಟಿ ಸನ್ನಿ ಲಿಯೋನ್’ರನ್ನೇ ಮೀರಿಸಿದ್ದು ಈಗ ಗೂಗಲ್ ಟ್ರೆಂಡ್ಸ್‌ನಲ್ಲಿ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಸೇರಿ ಭಾರತದ ಎಲ್ಲಾ ಹಾಟ್ ತಾರೆಯಾರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಇದುವರೆಗೆ ಗೂಗಲ್ ಸರ್ಚಿಂಗ್ ನಲ್ಲಿ ಯಾವ ಸೆಲೆಬ್ರೆಟಿಯಿಂದಲೂ ಮೀರಿಸಲು ಸಾಧ್ಯವಾಗದ ಬಾಲಿವುಡ್ ನಟಿ ಸನ್ನಿ ಲಿಯೋನ್‌ರನ್ನು ಪ್ರಿಯಾ ಪಕ್ಕಕ್ಕೆ ಸರಿಸಿರುವುದು ವಿಶೇಷ.

ಒಟ್ಟಿನಲ್ಲಿ ಕಣ್ಣಲ್ಲೇ ಬಿಟ್ಟ ಹೂ ಬಣಕ್ಕೆ ಇಡೀ ಭಾರತ ಸೇರಿದಂತೆ ಹೊರ ರಾಷ್ಟಗಳಲ್ಲೂ ಸುದ್ದಿಯಾಗುತ್ತಿರುವ ಹದಿನೆಂಟರ ಯುವತಿಯ ಅದೃಷ್ಟ ಮೆಚ್ಚಲೇಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top