ಮನೋರಂಜನೆ

ಈ ಚೆಲುವೆಯ ಹೆಸರನ್ನು ಯಾವೆಲ್ಲಾ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಗೊತ್ತಾ?

ಈ ಚೆಲುವೆಯ ಹೆಸರನ್ನು ಯಾವೆಲ್ಲಾ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಗೊತ್ತಾ?

 

 

ಸೋಷಿಯಲ್ ಮೀಡಿಯಾ ಎಂಬುದು ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದೆ.. ಈಗ ಸೋಷಿಯಲ್ ಮೀಡಿಯಾ ಮೂಲಕ ಎಷ್ಟರ ಮಟ್ಟಿಗೆ ಫೇಮಸ್ ಆಗಬಹುದು ಎಂದರೆ ಒಂದೇ ದಿನ ಲಕ್ಷಂತಾರ ಅಭಿಮಾನಿಗಳನ್ನು ಹುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಏಕಾಏಕಿ ಪ್ರಸಿದ್ಧಿಯನ್ನ ಪಡಿಯಬೋದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಮಲೆಯಾಳಂ ನಟಿ ಪ್ರಿಯ ವಾರಿಕರ್. ಸದ್ಯ ಇಂಟರ್ನೆಟ್ ಮೂಲೆ ಮೂಲೆಯಲ್ಲೂ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಿಯಾ ವಾರಿಯರ್ ಅವರದ್ದೇ ಹವಾ!

ಎರಡು ದಿನಗಳಿಂದ ಇಡೀ ದೇಶದ ಸೋಷಿಯಲ್ ಮೀಡಿಯವನ್ನೇ ಆವರಿಸಿಕೊಂಡಿರುವ ಚೆಲುವೆಯೊಬ್ಬಳು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾಳೆ. ಒಂದೇ ಒಂದು ಸಣ್ಣ ವೀಡಿಯೊ ಮೂಲಕ ಪಡ್ಡೆ ಹುಡುಗರ ಹೊಸ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಈಕೆ ತೋರಿಸಿದ ಮನಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸನ್ನೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಹಾಡಿನಲ್ಲಿನ ಕೇವಲ ಮೂವತ್ತು ಸೆಕೆಂಡಿನ ವಿಡಿಯೋ ದೇಶದಾದ್ಯಂತ ಹಿಂದೆಂದೂ ಮಾಡಿರಿ ರೀತಿಯಲ್ಲಿ ಜಾದು ಮಾಡಿದೆ.

 

 

ಕೇವಲ 20 ಸೆಕೆಂಡಿನ ವೀಡಿಯೊ ಮೂಲಕವೇ ಸೂಪರ್ ಸ್ಟಾರ್ ಆಗಿ ಹೋಗಿರುವ ಈಕೆಯ ಜನಪ್ರಿಯತೆಯನ್ನು ಕೆಲವು ಸೋಷಿಯಲ್ ಮೀಡಿಯಾ ಮಂದಿ ಮಿಸ್ ಯೂಸ್ ಮಾಡಿಕೊಟ್ಟಿದ್ದಾರೆ. ಫೇಸ್ ಬುಕ್, ಇನ್ಟಾಗ್ರಾಮ್, ಸೇರಿದಂತೆ ಇತರ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಿಯಾ ವಾರಿಯರ್ ಅವರ ಹೆಸರಿನಲ್ಲಿ ಸಾಕಷ್ಟು ಫೇಕ್ ಅಕೌಂಟ್’ಗಳು ಪತ್ತೆಯಾಗಿವೆ. ಈ ರೀತಿ ಹೆಚ್ಚು ಫೇಕ್ ಅಕೌಂಟ್’ಗಳು ಇರುವುದು ಪ್ರಿಯಾ ಅಭಿಮಾನಿಗಳಿಗೆ ಆಕೆಯ ನಿಜವಾದ ಅಕೌಂಟ್ ಯಾವುದು ಅಂತ ತಿಳಿಯಲು ಕಷ್ಟವಾಗುತ್ತಿದೆ.

 


ಫೇಕ್ ಅಕೌಂಟ್ ಗಳಿಂದ ನಟಿ ಪ್ರಿಯಾ ವಾರಿಯರ್ ಹೆಸರಿನಲ್ಲಿ 80ಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಖಾತೆಗಳಿದ್ದರೆ 40ಕ್ಕೂ ಹೆಚ್ಚು ಫೆಸ್ಭುಕ್ ಪೇಜ್ 50 ಕ್ಕೂ ಹೆಚ್ಚು ಪ್ರೊಫೈಲ್’ಗಳು ಮತ್ತು 20ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ತೆರೆಯಲ್ಪಟ್ಟಿವೆ. ಈ ರೀತಿಯ ಫೇಕ್ ಅಕೌಂಟ್’ಗಳ ಹಾವಳಿಯನ್ನ ಗಮನಿಸಿದ ಪ್ರಿಯಾ ಸ್ವತಃ ತನ್ನ ನಿಜವಾದ ಫೇಸ್ಬುಕ್ ಅಕೌಂಟ್ ನಲ್ಲಿ ಲೈವ್ ಬಂದು “ಫೇಸ್ಬುಕ್ ನಲ್ಲಿ ನನ್ನ ಹೆಸರಿನಲ್ಲಿ ಹಲವಾರು ಫೇಕ್ ಅಕೌಂಟ್ ಗಳು ಕ್ರೀಟ್ ಆಗಿವೆ ಆದರೆ ಇದೇ ನನ್ನ ನಿಜವಾದ ಫೇಸ್ಬುಕ್ ಅಕೌಂಟ್ ಗೊಂದಲ ಆಗಬೇಡಿ ಈ ಪೇಜ್ ಅನ್ನು ಮಾತ್ರ ಫಾಲೋ ಮಾಡಿ” ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸದ್ಯ ಪ್ರಿಯಾ ಅವರ ರಿಯಲ್ ಫೇಸ್ ಬುಕ್ ಅಕೌಂಟ್ ಅನ್ನು 1ಲಕ್ಷದ 50ಸಾವಿರ ಜನರು ಲೈಕ್ ಮಾಡಿದ್ದುಇನ್ಟಾಗ್ರಾಮ್ ಖಾತೆಯಲ್ಲಿ 1.8 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. ಈಗ ಅವರ
ಎರಡೂ ಸೋಷಿಯಲ್ ಮೀಡಿಯಾ ಖಾತೆಗಳಿಗೆ ವೆರಿಫೈಡ್ ಬ್ಯಾಡ್ಜ್ ಕೂಡ ಸಿಕ್ಕಿದೆ. ಬ್ಲೂ ಟಿಕ್ ಸಿಕ್ಕಿರುವುದರಿಂದ ಇನ್ನು ಪ್ರಿಯಾ ಅವರ ನಿಜವಾದ ಅಕೌಂಟ್ ಗಳನ್ನ ಪತ್ತೆಹಚ್ಚಲು ಯಾವುದೇ ರೀತಿಯ ಗೊಂದಲವುಂಟಾಗುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top