ಮನೋರಂಜನೆ

ಪ್ರಥಮ್’ನ ಈ ಆಸೆಯನ್ನು ಈಡೇರಿಸಿದ್ರು ಪವರ್ ಸ್ಟಾರ್.

ಪ್ರಥಮ್’ನ ಈ ಆಸೆಯನ್ನು ಈಡೇರಿಸಿದ್ರು ಪವರ್ ಸ್ಟಾರ್.

 

 

ಸದಾ ಒಂದಿಲ್ಲೊಂದು ಗಿಮ್ಮಿಕ್ಕು, ಬಿಲ್ಡಪ್ಪುಗಳಿಂದಲೇ ಪ್ರಚಾರದಲ್ಲಿರುವ ಆಸಾಮಿ ಪ್ರಥಮ್ ಈಗ ಮತ್ತೊಂದು ವಿಷಯಕ್ಕೆ ಸುದ್ದಿಗೆ ಬಂದಿದ್ದಾರೆ, ಬಿಗ್ ಬಾಸ್ ಗೆದ್ದ ನಂತರ ವೇದಿಕೆಯಲ್ಲಿ ಸುದೀಪ್ ಬಳಿ ಹೊಸ 2000 ಮತ್ತು 500 ರೂಪಾಯಿಗಳನ್ನು ಕೇಳಿಪಡೆದುಕೊಂಡಿದ್ದ ಪ್ರಥಮ್ ಈಗ ಪುನೀತ್ ರಾಜಕುಮಾರ್ ಅವರ ಬಳಿ ಕೂಡ ಅಮೂಲ್ಯವಾದ ವಸ್ತುವೊಂದನ್ನು ಪಡೆದುಕೊಂಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಅಪ್ಪು ನಡೆಸಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಈವಾರ ಪ್ರಥಮ್ ಕುಟುಂಬಸ್ಥರು ಸ್ಪರ್ಧಿಗಳಾಗಿ ಬಂದಿದ್ದರು. ಪ್ರಥಮ್‌ ಫ್ಯಾಮಿಲಿ ಎದುರು ಪ್ರತಿಸ್ಪರ್ಧಿಯಾಗಿ ಬಿಗ್‌‌‌‌ಬಾಸ್‌‌‌-5ರ ಸಮೀರ್ ಆಚಾರ್ಯ ಕುಟುಂಬಸ್ಥರು ಬಂದಿದ್ದರು. ಚಟುವಟಿಕೆಗಳೆಲ್ಲಾ ಮುಗಿದ ನಂತರ ಕಾರ್ಯಕ್ರಮದ ಕೊನೆಯಲ್ಲಿ ಅಪ್ಪು ಬಳಿ ಏನನ್ನಾದರೂ ಪಡೆದುಕೊಳ್ಳಬೇಕು ಎಂದು ಮಸಲತ್ತು ಮಾಡಿದ ಪ್ರಥಮ್ ಅವರ ಬಳಿ ಹೋಗಿ ಅವರು ಧರಿಸಿದ್ದ ಬ್ಲೇಝರ್ ಕೊಡುವಂತೆ ಕೇಳಿಕೊಂಡರು.

 

 

ಬಿಗ್‌ಬಾಸ್‌‌‌ ವೇದಿಕೆಯಲ್ಲಿ ಸುದೀಪ್ ಸರ್ ಕೊಟ್ಟ ರೂ.2000 ಮತ್ತು ರೂ.500ನೋಟನ್ನು ಇನ್ನೂ ಹಾಗೇ ಜೋಪಾನವಾಗಿಟ್ಟುಕೊಂಡಿದ್ದೇನೆ ಈಗ ನೀವು ಕೊಡುವ ಬ್ಲೇಜರನ್ನ ನನ್ನ ಮದುವೆಗೆ ಧರಿಸುತ್ತೇನೆ ಎಂದು ತನ್ನ ಇಂದಿನ ಶೈಲಿಯಲ್ಲಿ ಹೇಳಿದರು. ಪ್ರಥಮ್ ನ ಈ ಆಸೆಯನ್ನು ಪುನೀತ್ ಈಡೇರಿಸಿ ತಾವು ಧರಿಸಿದ್ದ ಬ್ಲೇಝರ್ ಅನ್ನು ಖುಷಿಯಿಂದಲೇ ಪ್ರಥಮ್ ಗೆ ಉಡುಗೊರೆಯಾಗಿ ನೀಡಿದರು. ಪುನೀತ್ ಅವರ ಬ್ಲೇಜರ್ ಪಡೆದುಕೊಂಡ ಪ್ರಥಮ್ ಇದು ನನ್ನ ಕೋಟ್ ಅಲ್ಲ ಕನ್ನಡಿಗರ ಕೋಟು ಎಂದು ಡೈಲಾಗ್ ಹೊಡೆದರು.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top