ದೇವರು

ದೇವರ ದೇವಾ ರಾಮನು ಹೀಗೆ ಸತ್ತನು ಇತಿಹಾಸದ ಕಥೆಗಳಲ್ಲಿ ಇದರ ಬಗ್ಗೆ ಏನು ಹೇಳ್ತಾರೆ ಬನ್ನಿ ತಿಳಿಯೋಣ

ದೇವರ ದೇವಾ ರಾಮನು ಹೀಗೆ ಸತ್ತನು ಇತಿಹಾಸದ ಕಥೆಗಳಲ್ಲಿ ಇದರ ಬಗ್ಗೆ ಏನು ಹೇಳ್ತಾರೆ ಬನ್ನಿ ತಿಳಿಯೋಣ

ನಮ್ಮ ಹಿಂದೂ ಧರ್ಮದಲ್ಲಿ ರಾಮಾಯಣವನ್ನು ಅತಿ ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಆದ್ದರಿಂದ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಎಲ್ಲ ವಿಷಯಗಳು ಸಹ ಸತ್ಯವೆಂದು ನಂಬಲಾಗಿದೆ. ಭಗವಂತನಾದ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ರಾಕ್ಷಸನಾದ ರಾವಣನ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಮತ್ತು ಇನ್ನೂ ಅನೇಕ ಪುಸ್ತಕಗಳಲ್ಲಿ ಬರೆಯಲಾಗಿದೆ ಇವೆಲ್ಲವೂ ಸತ್ಯ ಎಂದು ಸಹ ಭಾವಿಸಲಾಗಿದೆ.ಇದರ ಜೊತೆಗೆ ಇನ್ನೂ ಕೆಲವು ಕುತೂಹಲಕಾರಿ ಘಟನೆಗಳು ಇವೆ. ಅವು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾಗಿವೆ.ಅವುಗಳ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ತಿಳಿದಿಲ್ಲ. ಅವು ಸ್ವಲ್ಪ ಆಶ್ಚರ್ಯ ಹುಟ್ಟಿಸುವಂತಹ ಸಂಗತಿಗಳು ಸಹ ಆಗಿವೆ.

 

ರಾಮನು ಹೀಗೆ ಸತ್ತನು ಎಂಬ ಕುತೂಹಲಕಾರಿ ವಿಷಯಕ್ಕೆ ಉತ್ತರ ಹೀಗಿದೆ

ರಾಮನು ಈ ಭೂಮಿಯ ಮೇಲೆಯೇ ಜಲ ಸಮಾಧಿಯಾಗಿ ಸರಯೂ ನದಿಯ ಬಳಿ ಸಾಯುತ್ತಾನೆ ಎಂದು ನಂಬಲಾಗಿದೆ. ಸೀತೆಯ ಮುಗ್ಧತೆಯನ್ನು ಪರೀಕ್ಷಿಸಲು ಇನ್ನೊಂದು ಪರೀಕ್ಷೆಯನ್ನು ನಡೆಸಲು ಮುಂದಾದಾಗ ಸೀತೆಯೂ ಕಾಡಿನಲ್ಲಿ ಇರುವಾಗ ಅವಳ ತಾಯಿಯಾದ ಭೂದೇವಿಯನ್ನು ಮರಳಿ ತನ್ನ ಬಳ್ಳಿ ಮರಳಿ ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತಾಳೆ. ಭೂದೇವಿಯು ಭೂಮಿಯನ್ನು ಎರಡು ಭಾಗವನ್ನಾಗಿ ಮಾಡಿ ಸೀತೆಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಲು ಬರುತ್ತಾಳೆ .

 

 

ಆಗ ಸೀತೆಯ ಮಗನಾದ ಕುಷನು ತನ್ನ ಅಮ್ಮನ ಕೈಗಳನ್ನು ಹಿಡಿದು ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ ಆದ್ದರಿಂದ ಕುಷನು ಸಹ ಚಿಂತಾಕ್ರಾಂತ ನಾಗುತ್ತಾನೆ.ತಾಯಿಯನ್ನು ಕಳೆದುಕೊಂಡ ಕುಶನು ಅವರ ತಾಯಿಯಾದ ಸೀತೆಯನ್ನೇ ಹಿಂಬಾಲಿಸುತ್ತಾನೆ. ಇದನ್ನೆಲ್ಲ ಕಣ್ಣಾರೆ ಕಂಡ ಶ್ರೀರಾಮನು ತನ್ನ ಪ್ರೀತಿ ಪಾತ್ರಳಾದ ಸೀತೆಯನ್ನು ಕಳೆದುಕೊಂಡ ದುಃಖದಲ್ಲಿ ಅವನು ತನ್ನ ಮನುಷ್ಯ ಜೀವನವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾನೆ.ಆದ್ದರಿಂದಲೇ ಶ್ರೀರಾಮನು ಭಗವಂತನಾದ ಶ್ರೀ ವಿಷ್ಣುವನ್ನು ಸೇರಲು ಸರಯೂ ನದಿಯ ಬಳಿ ಹೋಗಿ ಜಲಸಮಾಧಿ ಯಾಗುತ್ತಾನೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top