ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಜೀವನಕ್ಕೆ ಸ್ವಲ್ಪ ಸುಳ್ಳು ಹೇಳೋದು ಅವಶ್ಯಕ ಅಂತ ಅನ್ಕೊಂಡಿರ್ತಾರೆ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಜೀವನಕ್ಕೆ ಸ್ವಲ್ಪ ಸುಳ್ಳು ಹೇಳೋದು ಅವಶ್ಯಕ ಅಂತ ಅನ್ಕೊಂಡಿರ್ತಾರೆ

ಮನುಷ್ಯರು ಸದಾ ಸತ್ಯವಂತರಾಗಿರಲು ಸಾಧ್ಯವಿಲ್ಲ. ಕೆಲವೊಂದು ಸಂದರ್ಭದಲ್ಲಿ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಇನ್ನೊಬ್ಬರಿಗೆ ನಮ್ಮ ಸುಳ್ಳಿನಿಂದ ಖುಷಿ ಸಿಗುವಂತಿದ್ದರೆ, ಆ ರೀತಿಯ ಸುಳ್ಳನ್ನು ಹೇಳುವುದರಲ್ಲಿ ತಪ್ಪಿಲ್ಲ .ಇನ್ನೂ ಕೆಲವರು ಏನೇ ಸಂದರ್ಭ ಬಂದರೂ ಸತ್ಯವನ್ನು ಬಿಟ್ಟು ಕೊಡುವುದಿಲ್ಲ. ಒಂದು ವೇಳೆ ಸುಳ್ಳು ಹೇಳಿದರೂ ಒಂದಲ್ಲ ಒಂದು ದಿನ ಸತ್ಯವನ್ನು ಹೇಳುತ್ತಾರೆ. ಅಲ್ಲದೇ ತಾವು ಹೇಳಿದ ಸುಳ್ಳಿಗೆ ಪಶ್ಚಾತ್ತಾಪವನ್ನು ಪಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸುಳ್ಳು ಹೇಳಲು ಬರುವುದಿಲ್ಲ. ಒಂದೊಮ್ಮೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರೆ ಅದು ಇನ್ನೊಬ್ಬರಿಗೆ ಸಲೀಸಾಗಿ ತಿಳಿಯುತ್ತದೆ.
ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಮಾತುಗಳು ಅವರವರ ರಾಶಿಗಳ ಅನುಗುಣವಾಗಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ರೀತಿಯ ಸುಳ್ಳು ಹೇಳುತ್ತಾರೆ, ಅದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ.

ವೃಷಭ ರಾಶಿಯವರು ಬಹಳ ಸಲೀಸಾಗಿ ಸುಳ್ಳು ಹೇಳುತ್ತಾರೆ. ಇವರಿಗೆ ಸುಳ್ಳು ಹೇಳಲು ಯಾವುದೇ ಕಾರಣಗಳಿರುವುದಿಲ್ಲ. ಚಿಕ್ಕ ಚಿಕ್ಕ ವಿಚಾರಕ್ಕೂ ಇವರು ಸುಳ್ಳು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ . ಕೆಲವೊಮ್ಮೆ ಇವರು ಹೇಳುವ ಸುಳ್ಳು ಇತರರಿಗೆ ನೋವುಂಟು ಮಾಡುತ್ತದೆ.

ಮಿಥುನ ರಾಶಿ.

ಮಿಥುನ ರಾಶಿಯವರು ಬಹಳ ಚಾಲಾಕಿಗಳು ಬಹಳ ಸುಂದರವಾಗಿ ಸುಳ್ಳು ಹೇಳುವ ಕಲೆ ಇವರದ್ದಾಗಿರುತ್ತದೆ. ಕೆಲವೇ ಸಂದರ್ಭಗಳಲ್ಲಿ ಮಾತ್ರ ಇವರು ಸತ್ಯವನ್ನು ಹೇಳುತ್ತಾರೆ .ಇವರು ದ್ವಂದ್ವ ಪ್ರವೃತ್ತಿ ಉಳ್ಳವರಾಗಿದ್ದು, ಇದೇ ಇವರನ್ನು ಸುಳ್ಳು ಹೇಳಲು ಅನುವು ಮಾಡಿಕೊಡುತ್ತದೆ. ಇವರು ಸಮಯಕ್ಕೆ ತಕ್ಕಂತೆ ತಮಗೆ ಬೇಕಾದ ರೀತಿ ಸುಳ್ಳನ್ನು ಹೇಳಿಕೊಂಡು ಕಾಲ ಕಳೆಯುತ್ತಾರೆ .

 

ಕಟಕ ರಾಶಿ.

ಕಟಕ ರಾಶಿಯವರು ಎಲ್ಲ ಸಂದರ್ಭದಲ್ಲಿ ಸುಳ್ಳು ಹೇಳುವುದಿಲ್ಲ. ಅಗತ್ಯ ಬಿದ್ದಾಗ ಮಾತ್ರ ಸುಳ್ಳು ಹೇಳುತ್ತಾರೆ. ಇವರು ಮೃದು ಸ್ವಭಾವದವರಾಗಿರುತ್ತಾರೆ.ಇವರು ಸ್ವಭಾವತಃ ಒಳ್ಳೆಯವರಾಗಿದ್ದು, ಕೆಲವು ಸಂದರ್ಭದಲ್ಲಿ ಮಾತ್ರ ಸುಳ್ಳು ಹೇಳುತ್ತಾರೆ. ಹಾಗಂತ ಇವರ ಸ್ವಭಾವವೇ ಸುಳ್ಳು ಹೇಳುವುದಾಗಿರುವುದಿಲ್ಲ, ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಸುಳ್ಳು ಹೇಳುತ್ತಾರೆ .

 

 

 

 

 

ವೃಶ್ಚಿಕ ರಾಶಿ.

 


ವೃಶ್ಚಿಕ ರಾಶಿಯವರು ಅತಿ ಹೆಚ್ಚು ಸುಳ್ಳು ಹೇಳುವ ಪ್ರವೃತ್ತಿಯವರಾಗಿರುತ್ತಾರೆ. ನಿಜ ಹೇಳಿದರೆ ಇವರ ನಿಜ ಜೀವನಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಭಾವನೆ ಇವರಲ್ಲಿರುತ್ತದೆ. ಇದು ಕೇಳುಗರಿಗೆ ಸುಳ್ಳೆಂದು ಅನಿಸುವುದೇ ಇಲ್ಲ, ಇವರು ತೀಕ್ಷ್ಣವಾಗಿದ್ದು ಬೇರೆಯವರನ್ನು ನಿಯಂತ್ರಿಸುವುದು ಇವರಿಗೆ ಕಷ್ಟವಾಗುವುದಿಲ್ಲ, ತಾವೇ ಎಲ್ಲರಿಗೂ ಗುರುತಿಸಿಕೊಳ್ಳಬೇಕೆಂದು ಹವಣಿಸುತ್ತಿರುತ್ತಾರೆ. ಇವರು ಚಂಚಲ ವ್ಯಕ್ತಿಗಳಾಗಿದ್ದು , ಇದೇ ಕಾರಣಕ್ಕಾಗಿ ಸುಳ್ಳಿನ ಚಟಕ್ಕೆ ಬಿದ್ದಿರುತ್ತಾರೆ .

ಧನಸ್ಸು ರಾಶಿ .

ಧನಸ್ಸು ರಾಶಿಯವರು ಬಹಳ ಸುಂದರವಾಗಿ ಸುಳ್ಳುಗಳನ್ನು ಹೇಳುವ ವ್ಯಕ್ತಿಗಳಾಗಿರುತ್ತಾರೆ. ಸತ್ಯ ಹೇಳಿದರೆ ಕೆಟ್ಟದಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ವರ್ತಿಸುತ್ತಾರೆ. ಸುಳ್ಳನ್ನು ಅನೇಕ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ . ಎಲ್ಲರ ಮಾತಿನಂತೆ ಇವರು ಸುಳ್ಳು ಹೇಳಿ ಅದನ್ನೇ ಸತ್ಯ ಎಂಬಂತೆ ಬಿಂಬಿಸುತ್ತಾರೆ, ಇವರು ಸಂತೋಷ ಸ್ವಭಾವದವರಾಗಿದ್ದು, ಈ ಕ್ಷಣವನ್ನು ಆನಂದಿಸಲು ಬಯಸುತ್ತಾರೆ. ಸ್ವಲ್ಪವೂ ಸಂಕೋಚ ಇಲ್ಲದೆ ಸುಳ್ಳು ಹೇಳುವುದು ಇವರ ಪ್ರವೃತ್ತಿಯಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top