ಅರೋಗ್ಯ

ಅಕ್ಕಿ ತೊಳೆಯೋ ನೀರಿನ ಅದ್ಭುತ ಉಪಯೋಗಗಳು ಗೊತ್ತಾದ್ರೆ ಇನ್ಮೇಲೆ ನೀವ್ಯಾರು ಅಕ್ಕಿ ನೀರು ಹೊರಗಡೆ ಚೆಲ್ಲೊಲ್ಲ !

ಅಕ್ಕಿ ತೊಳೆಯೋ ನೀರಿನ ಅದ್ಭುತ ಉಪಯೋಗಗಳು ಗೊತ್ತಾದ್ರೆ ಇನ್ಮೇಲೆ ನೀವ್ಯಾರು ಅಕ್ಕಿ ನೀರು ಹೊರಗಡೆ ಚೆಲ್ಲೊಲ್ಲ !

ಅಕ್ಕಿ ನೀರು ವಿಟಮಿನ್ಗಳು ಮತ್ತು ಖನಿಜಗಳಿಂದ ತುಂಬಿದೆ, ಇದು ಕೂದಲು ಮತ್ತು ಚರ್ಮ ಎರಡಕ್ಕೂ ಅದ್ಭುತವಾಗಿದೆ,
ಚೀನಾ, ಜಪಾನ್, ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಹಿಳೆಯರು ಶತಮಾನಗಳಿಂದಲೂ ಸ್ನಾನಕ್ಕೆ ಇದರ ಬಳಕೆ ಮಾಡುತ್ತಾ ಬಂದಿದ್ದಾರೆ.

ಅಕ್ಕಿ ತೊಳೆಯುವ ಮುಂಚೆ ಮೊದಲು ಅಕ್ಕಿಯಲ್ಲಿನ ಕಷ್ಮಲಗಳನ್ನು ಶುದ್ದಿ ಮಾಡಬೇಕು ನಂತರ ನೀರನ್ನು ಹಾಕಿ ಇಟ್ಟು ತೊಳೆದು ,
ನೀರನ್ನು ಒಂದು ಬಟ್ಟಲಿಗೆ ಸೋಸಿಕೊಳ್ಳಿ .

ಅಥವಾ ಇನ್ನು ಹೆಚ್ಚು ಉಪಯೋಗಕಾರಿಯಾಗಬೇಕೆಂದರೆ
ಮೊದಲು ಒಂದು ಕಾಲು ಕಪ್ ಅಕ್ಕಿಯನ್ನು ತೆಗೆದುಕೊಳ್ಳಿ ಅದಕ್ಕೆ ಎರಡು ಕಪ್ ನೀರು ಬೆರೆಸಿ ಅರ್ಧ ಗಂಟೆ ನೆನೆಸಿಡಿ
ಆನಂತರ ನೀರನ್ನು ಒಂದು ಬಟ್ಟಲಿಗೆ ಶೋಧಿಸಿಕೊಳ್ಳಿ .

ಬೇಕಾದರೆ ಈ ನೀರನ್ನು ಫ್ರಿಡ್ಜ್ನಲ್ಲಿ ಇಟ್ಟು ವಾರಗಳವರೆಗೂ ಬಳಕೆ ಮಾಡಬಹುದು .

ಚರ್ಮದ ಆರೋಗ್ಯಕ್ಕೆ :

ಮುಖದ ಕ್ಲೆನ್ಸರ್

ನಿಮ್ಮ ಮುಖವನ್ನು ಶುದ್ಧೀಕರಿಸಲು ಅಕ್ಕಿ ನೀರನ್ನು ಬಳಸುವುದು , ಹತ್ತಿಯನ್ನು ಅಕ್ಕಿ ನೀರಿನಲ್ಲಿ ಅದ್ದಿ ಚರ್ಮದ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಬೇಕು ,
ವಾರದಲ್ಲಿ 3 ಬಾರಿಯಂತೆ ಮೂರು ವಾರ ಈ ಕ್ರಿಯೆ ಮುಂದುವರಿಸಿದರೆ ಮೃದುವಾದ, ಬಿಗಿಯಾದ ,ಹೊಳಪಿನ ಚರ್ಮ ನಿಮ್ಮದಾಗಿಸಿಕೊಳ್ಳಬಹುದು.

ಮುಖದ ಟೋನರ್

ಮುಖದ ಮೇಲಿನ ರಂಧ್ರ ಕಡಿಮೆಯಾಗುತ್ತದೆ , ಚರ್ಮವನ್ನು ಬಿಗಿಗೊಳಿಸುವುದು , ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ರಕ್ತದ ಹರಿವನ್ನು ಪ್ರಚೋದಿಸುತ್ತದೆ, ಮತ್ತು ನಿಮ್ಮ ಚರ್ಮವನ್ನು ಮೃದುವಾದ ಮತ್ತು ಪ್ರಕಾಶಮಾನವಾಗಿರಿಸುತ್ತದೆ.

ಮೊಡವೆ ಚಿಕಿತ್ಸೆ

ಅಕ್ಕಿ ನೀರು ಮೊಡವೆ ಗುಣಪಡಿಸಲು ನೆರವಾಗುತ್ತದೆ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಚರ್ಮದ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸಮಾಡುತ್ತದೆ.

ಚರ್ಮದ ತುರಿಕೆ

ಅಟೋಪಿಕ್ ಡರ್ಮಟೈಟಿಸ್ ಹೊಂದಿರುವ ರೋಗಿಗಳು ಚರ್ಮದ ಉರಿಯೂತ ಮತ್ತು ಶುಷ್ಕ ಚರ್ಮ ತಡೆಯಲು ದಿನಕ್ಕೆ ಎರಡು ಬಾರಿ ಅಕ್ಕಿ ನೀರನ್ನು 15 ನಿಮಿಷ ಮುಖಕ್ಕೆ ಹಚ್ಚಿ ತೊಳೆದರೆ ಉತ್ತಮ , ಸೂರ್ಯ ಕಿರಣಗಳಿಂದ ಹಾನಿಯಾದ ಚರ್ಮವನ್ನು ಸಹ ರಕ್ಷಿಸಲು ಅಕ್ಕಿ ನೀರು ಉತ್ತಮ.

 

ತಲೆಕೂದಲ ಬೆಳವಣಿಗೆಗೆ :

ಸ್ನಾನದಲ್ಲಿ ಶಾಂಪೂ ಮಾಡಿದ ನಂತರ ಒಂದೆರಡು ಹನಿ ಬಾದಾಮಿ ಅಥವಾ ಲ್ಯಾವೆಂಡರ್ ಎಣ್ಣೆಗೆ ಅರ್ಧ ಕಪ್ಪು ಅಕ್ಕಿ ನೀರು ಬೆರೆಸಿ
ಬುಡಕ್ಕೆ ಚೆನ್ನಾಗಿ ಉಜ್ಜಬೇಕು ಇದು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ ಅಲ್ಲದೆ ನೈಸರಿಗಿಕವಾದ ಕಪ್ಪು ಕೂದಲು ಬೆಳೆಯಲು ಸಹಕಾರಿಯಾಗಿದೆ . ವಾರಕ್ಕೆ ಎರಡು ಬಾರಿ ಈ ಕ್ರಿಯೆ ಮುಂದುವರಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top