ದೇವರು

ನಿಮಗೆ ಗೊತ್ತಾ ಯಾವ್ ಯಾವ್ ರುದ್ರಾಕ್ಷಿ ಹಾಕೊಂಡ್ರೆ ಯಾವ್ ಯಾವ್ ದೋಷ ಹೋಗುತ್ತೆ ಅಂತ ? ರುದ್ರಾಕ್ಷಿಲಿ 14 ವಿಧ ಅಂತ ?

ರುದ್ರಾಕ್ಷಿಯ ಬೇಧಗಳು ಮತ್ತು ಅದರ ಫಲಗಳು,ನಿಮಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ.

ತಾರಕಾಸುರ ಎಂಬ ಒಬ್ಬ ರಾಕ್ಷಸನ ಮಕ್ಕಳಾದ ತಾರಕ್ಷ, ಕಮಲಾಕ್ಷ, ವಿದ್ಯುನ್ಮಾಲಿ.ಈ ಮೂವರನ್ನು ತ್ರಿಪುರಾಸುರರು ಎಂದು ಕರೆಯುತ್ತಿದ್ದರು.
ಇವರು ತಾರಕಾಸುರನ ಮರಣದ ನಂತರ ದೇವತೆಗಳನ್ನು ಪೀಡಿಸಲು ಪ್ರಾರಂಭಿಸಿದರು ಆಗ ದೇವತೆಗಳು ಎಲ್ಲರೂ ಶಿವನಲ್ಲಿ ಮನವಿ ಮಾಡಿದರು ಆಗ ಶಿವನ ಕಣ್ಣಿನಿಂದ ನೀರಿನ ಹನಿಗಳು ಭೂಮಿಯ ಮೇಲೆ ಬಿದ್ದವು.
ಆ ಬಿದ್ಧ ಕಣ್ಣ ನೀರಿನ ಹನಿಗಳೇ ರುದ್ರಾಕ್ಷಿಯ ಗಿಡಗಳಾಗಿ ಹುಟ್ಟಿದವು ಎಂಬ ಪ್ರತೀತಿ ಇದೆ.

ರುದ್ರಾಕ್ಷಿಗಳ್ಳಲಿ ಒಂದರಿಂದ 16 ಮುಖವುಳ್ಳ ರುದ್ರಾಕ್ಷಿಗಳಿವೆ.

1)ಏಕ ಮುಖ ರುದ್ರಾಕ್ಷಿ:ರುದ್ರ ಸ್ವರೂಪ. ಇದು ಬ್ರಹ್ಮ ಹತ್ಯೆ ದೋಷ ಹೋಗಲಾಡಿಸುತ್ತದೆ.

2)ದ್ವಿಮುಖ ರುದ್ರಾಕ್ಷಿ:ಉಮಾಶಂಕರ ಸ್ವರೂಪ .ಇದು ಮಹಾ ಪಾಪಗಳನ್ನು ನಿವಾರಿಸುವುದು.

3)ತ್ರಿ ಮುಖ ರುದ್ರಾಕ್ಷಿ:ಅಗ್ನಿ ಸ್ವರೂಪ. ಸ್ತ್ರಿ ಹತ್ಯಾ ದೋಷ ನಿವಾರಿಸುವುದು.

4)ಚತುರ್ಮುಖ ರುದ್ರಾಕ್ಷಿ:ಬ್ರಹ್ಮ ಸ್ವರೂಪ. ನರ ಹತ್ಯಾ ದೋಷ ನಿವಾರಣೆಯಾಗುವುದು.

5)ಪಂಚ ಮುಖ ರುದ್ರಾಕ್ಷಿ:ಕಾಲಗ್ನಿ ಸ್ವರೂಪ. ಅನೇಕ ದೋಷ ನಿವಾರಣೆ.

6)ಷಣ್ಮುಖ ರುದ್ರಾಕ್ಷಿ:ಕುಮಾರಸ್ವಾಮಿ ಸ್ವರೂಪ.ಇದ್ದನ್ನು ಬಲಗಡೆಯ ಕೈಗೆ ಧರಿಸಿದರೆ ಬ್ರಹ್ಮ ಹತ್ಯಾ ದೋಷ ನಿವಾರಣೆ.

7)ಸಪ್ತ ಮುಖ ರುದ್ರಾಕ್ಷಿ:ಇದು ಮನ್ಮಥ ಸ್ವರೂಪ.ಬಂಗಾರ ಕದ್ದ ದೋಷ ನಿವಾರಣೆ.

8)ಆಷ್ಟ ಮುಖ ರುದ್ರಾಕ್ಷಿ:ವಿನಾಯಕ ಸ್ವರೂಪ.ಗುರು ಪತ್ನಿ ಸಂಗಮ ದೋಷ ನಿವಾರಣೆ.

9)ನವ ಮುಖ ರುದ್ರಾಕ್ಷಿ:ಭೈರವ ಸ್ವರೂಪ. ಬ್ರಹ್ಮ ಹತ್ಯಾದಿ ದೋಷ ನಿವಾರಣೆ.

10)ದಶ ಮುಖ ರುದ್ರಾಕ್ಷಿ:ಶ್ರೀ ಹರಿಯ ಸ್ವರೂಪ .ಸರ್ಪಾದಿ ದೋಷ ನಿವಾರಣೆ.

11)ಏಕ ದಶ ಮುಖ ರುದ್ರಾಕ್ಷಿ:ಇದು ಏಕಾದಶ ರುದ್ರ ಸ್ವರೂಪ. ಇದನ್ನು ದರಿಸುವುದರಿಂದ ಅಶ್ವಮೇಧ ಯಾಗದ ಫಲ ಮತ್ತು ಹತ್ತು ಸಾವಿರ ಗೋದಾನ ಮಾಡಿದ ಪುಣ್ಯ ಬರುತ್ತದೆ.

12)ದ್ವಾದಶ ಮುಖದ ರುದ್ರಾಕ್ಷಿ:ದ್ವಾದಶ ದಿತ್ಯಾತ್ಮಕವು,ವ್ಯಾಧಿಗಳು ಬರುವುದಿಲ್ಲ.

13)ತ್ರಯೋದಶ ಮುಖ ರುದ್ರಾಕ್ಷಿ:ಕುಮಾರಸ್ವಾಮಿ ಸ್ವರೂಪ.ಇದು ಸಿಗುವುದು ಕಷ್ಟ.ಸಿಕ್ಕರೆ ಸರ್ವ ಕಾಮ್ಯರ್ಥಗಳು ದೊರೆಯುತ್ತದೆ.

14)ಚತುರ್ದಶ ಮುಖ ರುದ್ರಾಕ್ಷಿ:ಪರಮೇಶ್ವರ ಸ್ವರೂಪ. ಇದು ಸಿಗುವುದು ಬಹಳ ವಿರಳ.

ರುದ್ರಾಕ್ಷಿಗಳನ್ನು ನೋಡಿದರೂ ಸಾಕು ಪುಣ್ಯ ಲಭಿಸುತ್ತದೆ,ಮುಟ್ಟಿದರೆ ಕೋಟಿಯಷ್ಟು, ಧರಿಸಿದರೆ ನೂರು ಕೋಟಿಯಷ್ಟು ಪುಣ್ಯವು ಲಭಿಸುತ್ತದೆ.

ರುದ್ರಾಕ್ಷಿಯಲ್ಲಿ ವಿವಿಧ ಬಗೆಯಿರುತ್ತವೆ

ನೆಲ್ಲಿಕಾಯಿ ಗಾತ್ರ ಇರುವುದು ಉತ್ತಮವಾದುದು.

ನೇರಳೆ ಹಣ್ಣಿನ ಗಾತ್ರ ಇರುವುದು ಮಧ್ಯಮವು.

ಕಡ್ಲೆಕಾಯಿ ಗಾತ್ರ ಇರುವುದು ಅಧಮ.

ರುದ್ರಾಕ್ಷಿಯಲ್ಲಿ ಶ್ವೇತ ವರ್ಣದ್ದು ಬ್ರಹ್ಮಜ್ಞಾನಿ ಜಾತಿ.

ರಕ್ತ ವರ್ಣದ್ದು ಕ್ಷತ್ರಿಯ ಜಾತಿ.

ಯಾವ ಜಾತಿ ರುದ್ರಾಕ್ಷಿ ಇರುವುದೋ ಅದೇ ಜಾತಿಯವರು ಧರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top