ಅರೋಗ್ಯ

ಸಮೋಸ ಮತ್ತು ಬರ್ಗರ್ ನಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ. ಇಲ್ಲಿದೆ ವೈಜ್ಞಾನಿಕ ವರದಿ

ಸಮೋಸ ಮತ್ತು ಬರ್ಗರ್ ನಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ. ಇಲ್ಲಿದೆ ವೈಜ್ಞಾನಿಕ ವರದಿ

ಸಮೋಸ ಹಾಗು ಬರ್ಗರ್ ನಲ್ಲಿ ಯಾವುದು ಒಳ್ಳೆಯದು ಎಂಬುದನ್ನು ನಾವಿಲ್ಲಿ ನೋಡೋಣ. ರೆಸ್ಟಾರಂಟ್ ಗೆ ಹೋದಾಗ ಕೆಲವರು ಬರ್ಗರ್ ಆರ್ಡರ್ ಮಾಡುತ್ತಾರೆ ಆದರೆ ಸಮೋಸ ಆಫರ್ ಮಾಡಿದ್ರೆ ಸಮೋಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ ಇದು ಖಂಡಿತ ತಪ್ಪು ಇತ್ತೀಚಿನ ವೈಜ್ಞಾನಿಕ ವರದಿ ಪ್ರಕಾರ ಸಮೋಸವು ಬರ್ಗರ್ ಗಿಂತ ಉತ್ತಮ ಅನ್ನುತ್ತಿವೆ.

 

 

ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ರವರ ಇತ್ತೀಚಿನ ವರದಿ ಪ್ರಕಾರ ಬರ್ಗರ್ ಗಿಂತ ಸಮೋಸ ಉತ್ತಮ ಎಂದು ಹೊರಹೊಮ್ಮಿದೆ. ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಬರ್ಗರ್ ಗಿಂತ ಸಮೋಸ ಉತ್ತಮ ಏಕೆಂದರೆ ಸಾಮಾನ್ಯವಾಗಿ ಸಮೋಸ ತಯಾರು ಮಾಡುವಾಗ ಯಾವುದೇ ಕೃತಕ ಫ್ಲೇವರ್ , ರಾಸಾಯನಿಕ ಪದಾರ್ಥಗಳು, ರಾಸಾಯನಿಕ ಬಣ್ಣಗಳನ್ನು ಬಳಕೆ ಮಾಡುವುದಿಲ್ಲ. ಹಾಗೆಯೆ ಸಮೋಸ ತಾಜ ಅಗುರುತ್ತದೆ ಇದನ್ನು ಬಿಸಿ ಬಿಸಿಯಾಗಿ ಗರಿ ಗರಿ ಯಾಗಿ ತಿನ್ನುತ್ತೇವೆ. ಸಮೋಸದಲ್ಲಿ ಉತ್ತಮ ಕ್ಯಾಲೋರಿ ಶೇಖರಣೆ ಆಗಿರುತ್ತದೆ ಎಂದು ತಿಳಿದು ಬಂದಿದೆ.

 

ಇನ್ನೊಂದೆಡೆ ಬರ್ಗರ್ ನಲ್ಲಿ ಕೃತಕ ಫ್ಲವರ್, ಎಂಎಲ್ಸಿ ಪೈಯರ್, ಟೆಸ್ಟ್ ಇಂಪ್ರುವರ್ ಹಾಗೆ ಅನೇಕ ವಿಧವಾದ ರಾಸಾಯನಿಕ ಪಧಾರ್ಥಗಳನ್ನು ಹೊಂದಿರುತ್ತದೆ. ನಮ್ಮ ದೇಶಿ ಶೈಲಿಯ ಸಮೋಸ ಇದ್ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಎಂದು ತಿಳಿದು ಬಂದಿದೆ. ನಾವು ಆದಷ್ಟು ರಾಸಾಯನಿಕ ಇಲ್ಲದ ಪದಾರ್ಥಗಳನ್ನು ಸೇವನೆ ಮಾಡುವುದು ಅತಿ ಒಳ್ಳೆಯದು.

 

 

ಇದೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ನೀಡಿರುವ ಇನ್ನೊಂದು ವರದಿಯ ಪ್ರಕಾರ ನಾವು ಮಕ್ಕಳಿಗೆ ತಿನ್ನಿಸುವ ನೂಡಲ್ ಗಿಂತ ಅವಲಕ್ಕಿ, ಉಪ್ಪಿಟ್ಟು ಉತ್ತಮ. ನೂಡಲ್ ಅರೋಗ್ಯ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯದಲ್ಲ ಎಂಬುದು ವರದಿಯಾಗಿದೆ. ಅವಲಕ್ಕಿ, ಉಪ್ಪಿಟ್ಟು ನೈಸರ್ಗಿಕ ಪದಾರ್ಥವಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲದಿರುವುದರಿಂದ ಇದು ಅತಿ ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top