ಮನೋರಂಜನೆ

ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ರಾಜಕುಮಾರ್ ನಿರ್ದೇಶಕ ಸಂತೋಷ್.

ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ರಾಜಕುಮಾರ್ ನಿರ್ದೇಶಕ ಸಂತೋಷ್.

 

 

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಬಹಳ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ರಕ್ಷಿತ್- ರಶ್ಮಿಕಾ, ಚಿರು -ಮೇಘನಾ, ಸೇರಿದಂತೆ ಕೆಲವು ಯುವ ಸ್ಟಾರ್ ಜೋಡಿಗಳು ಮದುವೆಯ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಿರುವ ವಿಷಯ ನಿಮಗೆಲ್ಲರಿಗೂ ಗೊತ್ತೇ ಇದೆ ಈಗ ಆ ಸಾಲಿಗೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರೊಬ್ಬರು ಸೇರಿಕೊಳ್ಳುತ್ತಿದ್ದಾರೆ.. ಮುಂದೆ ಓದಿ

ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ಮೂಲಕ ಕಮಾಲ್ ಸೃಷ್ಟಿ ಮಾಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸದ್ಯ ತಮ್ಮ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್ 26ರಂದು ತಮ್ಮ ಫ್ಯಾಮಿಲಿಗೆ ಕ್ಲೋಸ್ ಆಗಿರುವ ಶ್ರೀನಿವಾಸ್ ಹತ್ವಾರ್ ಎಂಬುವವರ ಮಗಳಾದ ಸುರಭಿ ಹತ್ವಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂತೋಷ್ ಫೆಬ್ರವರಿ 20ಕ್ಕೆ ಬೆಂಗಳೂರಿನಲ್ಲಿ ಹಸಮಣೆಯೇರುತ್ತಿದ್ದಾರೆ.

 

 

ಬಿ.ಇ ಮಾಡಿ ನಂತರ ಎಂ.ಟೆಕ್ ಪದವಿ ಪಡೆದಿರುವ ಸುರಭಿ, ಶ್ರೀನಿವಾಸ್ ಹತ್ವಾರ್ ಮತ್ತು ಭಾವನಾ ಹತ್ವಾರ್ ದಂಪತಿಯ ಏಕೈಕ ಪುತ್ರಿ.. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಎಂಬುವವರನ್ನು ಸಂತೋಷ್ ಆನಂದರಾಮ್ ಕೈಯಿಡಿಯಲಿದ್ದಾರೆ. ಮದುವೆಗೆ ಎರಡು ಕುಟುಂಬದ ಆಪ್ತರು ಮತ್ತು ಚಿತ್ರರಂಗದ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top