ದೇವರು

ರಾಜಸ್ತಾನದ ಉದೈಪುರದಲ್ಲಿರುವ ಈ ಶನಿ ದೇವಾಲಯದ ಮಹಿಮೆಗಳನ್ನ ನೋಡಿ.

ರಾಜಸ್ತಾನದ ಉದೈಪುರದಲ್ಲಿರುವ ಈ ಶನಿ ದೇವಾಲಯದ ಮಹಿಮೆಗಳನ್ನ ನೋಡಿ.

ರಾಜಸ್ತಾನ ರಾಜ್ಯದ ಉದೈಪುರ್ ನಗರ ಭಾಗದಲ್ಲಿರುವ ಶನಿದೇವರ ದೇವಸ್ಥಾನವು ಅಪಾರ ವಿಶಿಷ್ಟತೆಗಳಿಂದ ಕೂಡಿದೆ. ಇದು ಅತ್ಯಂತ ಪುರಾತನವಾದ ಸಹಿ ದೇವಾಲಯವಾಗಿದೆ. ದೇಶದಲ್ಲೇ ಏಕೈಕ ಸೂರ್ಯನನ್ನು ನುಂಗಿದ ಶನಿ ದೇವರ ವಿಗ್ರಹ ಇರುವುದು ಇಲ್ಲಿ ಮಾತ್ರ. ಪುರಾತನ ಕಾಲಗಳಿಂದಲೂ ಈ ಕ್ಷೇತ್ರ ಪುಣ್ಯದ ಬೀಡಾಗಿದೆ.

 

 

ಇಲ್ಲಿ ಒಟ್ಟು 13 ಜನ ಅರ್ಚಕರಿದ್ದು ಪ್ರತಿ ಪ್ರತಿ ವರ್ಷಕ್ಕೆ ಒಮ್ಮೆ ಈ ದೇವಸ್ಥಾನದ ಅರ್ಚಕರು ಬದಲಾಗುತ್ತಾ ಇರುತ್ತಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಇನ್ನೊಂದು ವೈಶಿಷ್ಟತೆ ಎಂದರೆ ದೇವರ ಮುಖ್ಯ ಪ್ರತಿಮೆ ಮೇಲೆ ಎಣ್ಣೆಯನ್ನು ಅರ್ಪಣೆ ಮಾಡುವುದಿಲ್ಲ. ಎಣ್ಣೆಯನ್ನು ಇನ್ನೊಂದು  ದೇವರ ಪ್ರತಿಮೆ ಮೇಲೆ ಅರ್ಪಣೆ ಮಾಡಲಾಗುತ್ತದೆ.

 

ಶನಿ ದೇವರ ದೇವಸ್ಥಾನದ ಜೊತೆಗೆ ಶೆರಾವಲಿ ಮಾತಾ ರಾಣಿ, ಚಾಮುಂದ ಮಾತಾ ರಾಣಿ ಮತ್ತು ಭುರು ಜಿ ಮಣಿರಾಗಲಿ ಇಲ್ಲಿವೆ. ಪ್ರತಿ ಸಹನಿವಾರದ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಭಕ್ತರು ಇಲ್ಲಿ ಹೂಮಾಲೆಗಳನ್ನು ದೇವರಿಗೆ ಸಮರ್ಪಣೆಯನ್ನು ಮಾಡುತ್ತಾರೆ.

 

 

ಶನಿದೇವರಿಗೆ ಪ್ರಿಯವಾದ ಎಳ್ಳು ಎಣ್ಣೆ ಹಿಡಿರುವ ರಹಸ್ಯ ಏನೆಂಬುದನ್ನು ಇಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಶನಿಯ ಪ್ರಭಾವ ಸಾಡೇ ಸಾತಿ, ಅಷ್ಟಮ ಶನಿ, ಪಂಚಮ ಶನಿ ಹೀಗೆ ಶನಿಯ ಪ್ರಭಾವಗಳನ್ನು ಅವರ ಜೀವಿತಾವಧಿಯಲ್ಲಿ ಅನುಭವಿಸಬೇಕಾಗುತ್ತದೆ.

 

ಸಾಡೇ ಸಾತಿಯು ಏಳು ವರ್ಷಗಳ ಕಾಲ ಶನಿ ದೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ 7 ವರ್ಷಗಳ ಅವಧಿಯಲ್ಲಿ ಯಾವ ಕೆಲಸವೂ ಯಶಸ್ವೀ ಯಾಗುವುದಿಲ್ಲ. ಈ ಅವಧಿಯಲ್ಲಿ ಒತ್ತಡ, ಸೋಮಾರಿತನ, ಆರೋಗ್ಯಕ್ಕೆ ಸಂಭದಿಸಿದ ಖಾಯಿಲೆಗಳು,ವೃತ್ತಿ ಜೀವನದಲ್ಲಿ ಅನೇಕ ತೊಂದರೆಗಳು ದುಃಖ, ಮನಸ್ಸಿಗೆ ನೋವು ಉಂಟಾಗುತ್ತವೆ.ಇವುಗಳಿಂದ ಮುಕ್ತಿ ಪಡೆದುಕೊಳ್ಳಲು ಜ್ಯೋತಿಷ್ಯಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಹೇಳಿದ್ದಾರೆ. ಇದರಲ್ಲಿ ಪ್ರಮುಖವಾದುದು ಶನಿದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುವುದು.ಶನಿ ದೇವರಿಗೆ ಎಳ್ಳೆಣ್ಣೆಯ ಸ್ನಾನ ಹಾಗೂ ಅಭ್ಯಂಜನವನ್ನು ಮಾಡಿಸುವುದು ಪ್ರಮುಖವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top