ಹೆಚ್ಚಿನ

ಸೀರೆಯುಟ್ಟು ಸ್ಕೈಡೈವಿಂಗ್ ಮಾಡಿದ ಭಾರತದ ಹೆಮ್ಮೆಯ ಪುತ್ರಿಗೆ ಅಭಿನಂದನೆಯ ಮಹಾಪೂರ

ಸೀರೆಯುಟ್ಟು ಸ್ಕೈಡೈವಿಂಗ್ ಮಾಡಿದ ಭಾರತದ ಹೆಮ್ಮೆಯ ಪುತ್ರಿಗೆ ಅಭಿನಂದನೆಯ ಮಹಾಪೂರ

 

ಭಾರತೀಯ ಸ್ಕೈಡೈವಿಂಗ್ ಪಟುವಾಗಿರುವ ಶೀತಲ್ ಮಹಾಜನ್ ರವರು ಸೀರೆಯನ್ನುಟ್ಟು ಸ್ಕೈಡೈವಿಂಗ್ ಮಾಡಿ ಹೊಸ ಇತಿಹಾಸವೊಂದನ್ನು ಸೃಷ್ಟಿ ಮಾಡಿದ್ದಾರೆ. ಸಾಹಸಮಯವಾಗಿರುವ ಸ್ಕೈಡೈವಿಂಗ್ ನಲ್ಲಿ ಅನೇಕ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಆದರೆ ಸೀರೆ ಉಟ್ಟುಕೊಂಡು ಗಗನದಿಂದ ಸ್ಕೈಡೈವಿಂಗ್ ಮಾಡಿ ಈ ಮಹಿಳೆ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.

 

 

ಶೀತಲ್ ಅವರು ಸ್ಕೈ ಡೈವಿಂಗ್ ಮಾಡುವಾಗ ಅಪ್ಪಟ ಭಾರತೀಯ ಉಡುಗೆಯಾದ ಸೀರೆಯನ್ನು ಧರಿಸಿದ್ದು ಒಂದು ವಿಶೇಷವಾದರೆ, 8.25 ಮೀಟರ್ ಉದ್ದದ ನವ್ ಸಾರಿ ಸೀರೆ ಧರಿಸಿ ಈ ಸಾಧನೆ ಮಾಡಿದ್ದೂ ಇನ್ನೊಂದು ಮಹತ್ವದ ಸಾಧನೆಯಾಗಿದೆ. ಈ ವರ್ಷದ ಮಹಿಳಾ ದಿನಕ್ಕೆ ತನ್ನ ದಾಖಲೆಯನ್ನು ಶೀತಲ್ ರವರು ಸಮರ್ಪಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯವರಾಗಿರುವ ಶೀತಲ್ ಮಹಾಜನ್ ಗೌರವಾನ್ವಿತ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ ವಿಶ್ವದ ನಾನಾ ಭಾಗಗಳಲ್ಲಿ ಸ್ಕೈ ಡೈವಿಂಗ್ ಮಾಡಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಇವರು 17 ರಾಷ್ಟ್ರಿಯ ದಾಖಲೆ ಹಾಗು 6 ವಿಶ್ವಮಟ್ಟದ ದಾಖಲೆಗಳನ್ನು ಹೊಂದಿದ್ದಾರೆ. ಇವರು ಆಸಕ್ತಿಯಿಂದ 2007 ರಲ್ಲಿ ಭಾರತೀಯ ವಾಯು ಸೇನೆಯಲ್ಲಿ ಸ್ಕೈ ಡೈವಿಂಗ್‌ನ ಮಾಡಲು ಸೇರಿದರು. ಆಮೇಲೆ ಇವರು ದಾಖಲೆಗಳ ಮೇಲೆ ಮಾಡಿ ದೇಶಕ್ಕೆ ಹೆಸರು ತಂದುಕೊಟ್ಟರು.

 

 

ರೋಮಾಂಚಕ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top