ಮನೋರಂಜನೆ

ಧನುಷ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಕಿಚ್ಚ ಸುದೀಪ್!

ಧನುಷ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಕಿಚ್ಚ ಸುದೀಪ್!

 

 

ಸುದೀಪ್! ಈ ತಲೆಮಾರಿನ ನಾಯಕನಟರನ್ನು ಪ್ರತಿನಿಧಿಸುವ ಮುಂಚೂಣಿಯ ನಟ. ತಮ್ಮ ವಿಭಿನ್ನ ಕಂಠ ಮತ್ತು ಅದ್ಭುತ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವವರು ಕಿಚ್ಚಾ ಸುದೀಪ್. ಈಗಂತೂ ಸುದೀಪ್ ದೇಶ ವಿದೇಶಗಳಲ್ಲಿಯೂ ಸಖತ್ ಫೇಮಸ್. ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟ. ಇಂಥ ಸುದೀಪ್’ಗೆ ಮಾರಿ ಹೋಗಿರುವ ತಮಿಳಿನ ಪ್ರತಿಭಾನ್ವಿತ ನಟ ಧನುಷ್, ತಾನು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕನ್ನಡದ ಕಿಚ್ಚನಿಗೆ ನಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 

 

ಕನ್ನಡದಲ್ಲಿ ಅತ್ಯುತ್ತಮ ನಟನೆಂದು ಪರಿಗಣಿಸಲ್ಪಟ್ಟ ಸುದೀಪ್, ದಕ್ಷಿಣ ಭಾರತೀಯ ಚಿತ್ರೋದ್ಯಮದಲ್ಲೆಲ್ಲಾ ಸಮಾನವಾಗಿ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಈಗ ಚಿತ್ರದ ಮೂಲಕ ದಕ್ಷಿಣದ ಭಾಷೆಗಳ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ಸುದೀಪ್ ಅಂದಿನಿಂದಲೂ ಇತರ ಭಾಷೆಗಳ ನಿರ್ಮಾಪಕರ ಗಮನವನ್ನು ಸೆಳೆದಿದ್ದಾರೆ. ಮೊದಲೇ ವರದಿ ಮಾಡಿದಂತೆ, ಈ ವರ್ಷ ಸುದೀಪ್ ಹಾಲಿವುಡ್ ಚಿತ್ರವಾದ ರೈಸನ್ ನಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಅಮಿತಾಬ್ ಬಚ್ಚನ್ ಮತ್ತು ಚಿರಂಜೀವಿಯವರ ಸೈರಾ ರೆಡ್ಡಿ ಚಿತ್ರದಲ್ಲೂ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಹಾಗೊಮ್ಮೆ ಹೀಗೊಮ್ಮೆ ಸುದೀಪ್ ಆ ಚಿತ್ರದಲ್ಲಿ ನಟಿಸುತ್ತಾರಂತೆ, ಈ ಚಿತ್ರದಲ್ಲಿ ನಟಿಸುತ್ತಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ.

 

 

ಈ ಮಧ್ಯೆ ತಮಿಳಿನ ಪ್ರತಿಭಾವಂತ ನಟ ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಳಿಯ ಧನುಷ್ ಅವರು ನಿರ್ದೇಶಿಸುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುವಂತೆ ಸುದೀಪ್ ಅವರನ್ನು ಕೇಳಲಾಗಿದೆಯಂತೆ. ಈಗಾಗಲೇ ಧನುಷ್ ಸುದೀಪ್ ಅವರನ್ನು ಭೇಟಿ ಮಾಡಿ ಕಥೆಯನ್ನ ಹೇಳಿದ್ದು ಕತೆಯನ್ನು ಕೇಳಿ ಸುದೀಪ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸದ್ಯ ದಿ ವಿಲನ್, ಪೈಲ್ವಾನ್, ಕೋಟಿಗೊಬ್ಬ3, ಅಂಬಿ ನಿಂಗ್ ವಯಸ್ಸಾಯ್ತೋ, ಹಾಲಿವುಡ್ ನ ರೈಸನ್, ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಲಿರುವ ಕಿಚ್ಚ ಧನುಷ್ ಅವರ ನಿರ್ದೇಶನದ ಹೊಸ ಚಿತ್ರದಲ್ಲಿ ಯಾವಾಗ ನಟಿಸುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top