ಹೆಚ್ಚಿನ

ಹೆಣ್ಣುಮಕ್ಕಳಿಗೆ ಶುಭ ಸುದ್ದಿ, ಸುಪ್ರೀಂ ಕೋರ್ಟನಿಂದ ಒಳ್ಳೆಯ ಸುದ್ದಿಯೊಂದು ಬಂದಿದೆ.

ಹೆಣ್ಣುಮಕ್ಕಳಿಗೆ ಶುಭ ಸುದ್ದಿ, ಸುಪ್ರೀಂ ಕೋರ್ಟನಿಂದ ಒಳ್ಳೆಯ ಸುದ್ದಿಯೊಂದು ಬಂದಿದೆ.

“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ” ಈ ಗಾದೆ ಮಾತು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಇನ್ನು ಮುಂದೆ ಯಾರೂ ಮದುವೆಯಾದ ಅಥವಾ ಮದುವೆಯಾಗದ ಹೆಣ್ಣು ಮಕ್ಕಳಿಗೆ ಅಸಡ್ಡೆ ತೋರುವ ಹಾಗಿಲ್ಲ, ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಹ ಸಮಾನವಾದ ಹಕ್ಕಿದೆ ಎಂದು ನಮ್ಮ ಭಾರತ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ.

 

 

ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಇಬ್ಬರೂ ಸಮಾನರು, ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಮಹಿಳಾ ಮಣಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಮೊದಲು 2005 ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ಕಾನೂನು ಇತ್ತು.

 

 

2005 ರ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕೇ ? ಬೇಡವೇ ? ಎಂಬ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ಈಗ ತೆರೆ ಎಳೆದಿದೆ.

ತಂದೆ ತೀರಿಕೊಂಡ ಮೇಲೆ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಸಹೋದರರು ತಮ್ಮ ಸಹೋದರಿಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದರು .2002 ರಿಂದ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು, ಆದರೆ ಈಗ ನ್ಯಾಯಾಲಯಕ್ಕೆ 2005 ಕ್ಕಿಂತಲೂ ಮೊದಲು ಜನಿಸಿದ ಸಹೋದರಿಯರಿಗೂ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಆದೇಶ ಹೊರಡಿಸಿದೆ.
ತಂದೆ ತೀರಿಕೊಂಡ ಮೇಲೆ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಸಹೋದರರು ತಮ್ಮ ಸಹೋದರಿಯರಿಗೆ ಇಬ್ಬರಿಗೂ ಪಿತ್ರಾರ್ಜಿತ ಆಸ್ತಿ ನೀಡಲು ನಿರಾಕರಿಸಿದ್ದರು,

 

 

2002 ರಿಂದ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು. ಆದರೆ ಈಗ ನ್ಯಾಯಾಲಯ 2005 ಕ್ಕಿಂತ ಮೊದಲು ಜನಿಸಿದ ಸಹೋದರಿಯರಿಗೂ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಆದೇಶ ಹೊರಡಿಸಿದೆ.ಈ ಸುದ್ದಿಯಿಂದ ಎಲ್ಲಾ ಹೆಣ್ಣು ಮಕ್ಕಳಿಗೂ ಸಂತೋಷವಾಗಿರಬಹುದು ಹಾಗೆ ನೆಮ್ಮದಿಯೂ ದೊರೆತಿರಬಹುದು ಆಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top