ಮನೋರಂಜನೆ

ಪಾಕಿಸ್ತಾನದಲ್ಲೇಕೆ ಬಿಡುಗಡೆಯಾಗಿಲ್ಲ ಪ್ಯಾಡ್ ಮ್ಯಾನ್?

ಸ್ಯಾನಿಟರಿ ಪ್ಯಾಡ್‌ಗಳ ಬಗೆಗಿನ ಸಾಮಾಜಿಕ ಕಥಾ ಹಂದರ ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರ ಭಾರತ ಸೇರಿದಂತೆ ವಿಶ್ವಾಧ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿಯಂತೂ ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರ ಕಲೆಕ್ಷನ್ನಿನಲ್ಲಿಯೂ ದಾಖಲೆಯತ್ತ ದಾಪುಗಾಲಿಡುತ್ತಿದೆ. ಆದರೆ ವಿಶ್ವಾಧ್ಯಂತ ಪ್ರಸಿದ್ಧಿ ಪಡೆದಿರೋ ಈ ಚಿತ್ರ ಪಕ್ಕದ ಪಾಕಿಸ್ತಾನದಲ್ಲಿ ಮಾತ್ರ ಬಿಡುಗಡೆಯಾಗಿಲ್ಲ!

 

 

ಪಾಕಿಸ್ತಾನ ಹೇಳಿ ಕೇಳಿ ಮೂಲಭೂತವಾದದ ಮಲದಲ್ಲಿ ಮಲೆತು ನಾರುತ್ತಿರುವ ದೇಶ. ಅಲ್ಲಿ ಭಾರತಕ್ಕಿಂತಲೂ ಅತಿಯಾಗಿ ಅಂಧ ಸಂಪ್ರದಾಯಗಳಿವೆ. ಪ್ರತೀ ಹೆಣ್ಣು ಮಕ್ಕಳ ಸಹಜ ಕ್ರಿಯೆಯಾದ ಮುಟ್ಟಿನ ಸಮಸ್ಯೆಗಳ ಸುತ್ತಲೂ ಆ ದೇಶದಲ್ಲಿ ಕಟ್ಟುಪಾಡುಗಳಿದ್ದಾವೆ. ಆದರೆ ಅಂಥಾ ಗುಪ್ತ ವಿಚಾರವನ್ನೇ ಪ್ರಧಾನವಾಗಿ ಹೊಂದಿರೋ ಈ ಚಿತ್ರದ ಬಿಡುಗಡೆಗೆ ಪಾಕಿಸ್ತಾನದ ಮೂಲಭೂತ ವಾದಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರಂತೆ.

ಈ ಕಾರಣದಿಂದಲೇ ಈ ವರೆಗೂ ಈ ಚಿತ್ರ ಪಾಕಿಸ್ತಾನದ ಸೆನ್ಸಾರ್ ಮಂಡಳಿಯತ್ತಲೂ ಸುಳಿದಿಲ್ಲ. ಪ್ಯಾಡ್ ಮನ್ ಚಿತ್ರ ಈ ದೇಶದಲ್ಲಿ ಬಿಡುಗಡೆಯಾಗದಿರಲು ಇನ್ನೊಂದು ಪ್ರಮುಖವಾದ ಕಾರಣ ಈ ಚಿತ್ರದ ನಾಯಕ ಅಕ್ಷಯ್ ಕುಮಾರ್ ಹೊಂದಿರುವ ಮೋದಿ ಪರವಾದ ನಿಲುಗಳು ಎಂಬ ರೂಮರುಗಳೂ ಎಲ್ಲೆಡೆ ಹರಿದಾಡುತ್ತಿವೆ. ಅಕ್ಷಯ್ ಪದೇ ಪದೆ ಮೋದಿ ಸರ್ಕಾರದ ಪರವಾಗಿ ಮಾತಾಡುತ್ತಿದ್ದಾರೆ. ಈ ಉರಿ ಕೂಡಾ ಪಾಕಿಸ್ತಾನದಲ್ಲಿ ಪ್ಯಾಡ್ ಮನ್ ಬಿಡುಗಡೆ ಆಗದಿರಲು ಪ್ರಮುಖವಾದ ಕಾರಣವಾಗಿದ್ದರೂ ಅಚ್ಚರಿಯೇನಿಲ್ಲ.

 

 

ಈ ಚಿತ್ರ ಪಾಕಿಸ್ತಾನದಲ್ಲಿ ಬಿಡುಗಡೆಯಾಗದೇ ಇದ್ದರೂ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭರ್ಜರಿಯಾಗಿಯೇ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿಯಂತೂ ಬಿಡುಗಡೆಯಾಗಿ ದಿನದೊಪ್ಪತ್ತಿನಲ್ಲಿಯೇ ಕಲೆಕ್ಷನ್ನಿನಲ್ಲಿಯೂ ದಾಖಲೆ ಬರೆದಿದೆ. ಮೊದಲ ದಿನವೇ ಈ ಚಿತ್ರ ಹತ್ತು ಕೋಟಿಗೂ ಹೆಚ್ಚಿನ ಹಣವನ್ನು ಬಾಚಿಕೊಂಡಿದೆ. ಅದಾಗಿ ಮಾರನೇ ದಿನವೇ ಆ ಮೊತ್ತ ಹದಿನಾಲಕ್ಕು ಕೋಟಿಗೆ ಏರಿಕೊಂಡಿದೆ. ಈ ಹೊತ್ತಿಗೆ ಅದಿನ್ನೂ ಹೆಚ್ಚಾಗಿದೆ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top