ಸಿನಿಮಾ

ತಮ್ಮ ಅಭಿಮಾನಿಯ ಕಷ್ಟಕ್ಕೆ ಸಹಾಯ ಮಾಡಿದ ಯಶ್ ನಿಜವಾದ ರಾಕಿಂಗ್ ಸ್ಟಾರ್

ಗಾಂಧಿನಗರದ ಪಾಲಿನ ಲಕ್ಕಿ ಸ್ಟಾರ್ ಯಶ್ . ಅಭಿಮಾನಿಗಳ ಪಾಲಿನ ಪ್ರೀತಿಯ ರಾಕಿಂಗ್ ಸ್ಟಾರ್. ಯಶೋಮಾರ್ಗದ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ಯಶಸ್ಸನ್ನುಗಳಿಸಿಕೊಂಡ ಜನಸೇವಕ.

 

 

2017 ರಲ್ಲಿ ಯಶ್ ಅವ್ರ ಯಾವ ಚಿತ್ರವೂ ಬಂದಿರಲಿಲ್ಲ ಆದ್ದರಿಂದ KGF ಬಗ್ಗೆ ಅಭಿಮಾನಿಗಳು ಬಹಳ ಕಾತುರರಾಗಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ KGF ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಕಳೆದ ವಾರ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆ “ಅಗಡಿ” ಎಂಬ ಊರಿನಲ್ಲಿ ನಡೆಯಲಿದ್ದ ಜಾತ್ರೆಯ ಅಂಗವಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯೊಬ್ಬರು ಜನರನ್ನು ಸ್ವಾಗತ ಕೋರುವ ಕಟೌಟ್ ಅನ್ನು ಹಾಕುವಾಗ ವಿದ್ಯುತ್ ಅವಘಡ ಸಂಭವಿಸಿ ಒಂದು ಕೈಯನ್ನು ಕಳೆದುಕೊಂಡಿದ್ದರು.

 

 

 

ಅವರಿಗೆ ನಮ್ಮ “ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ” ದ ವತಿಯಿಂದ ಒಂದು ಲಕ್ಷ ದ ಚೆಕ್ ಅನ್ನು ನೀಡಿ ಯೋಗ ಕ್ಷೇಮ ವಿಚಾರಿಸಿ ಅವನ ಕುಟುಂಬದವರಿಗೆ ನಿಮ್ಮೊಂದಿಗೆ ಸದಾ ಕಾಲ ನಾವಿದ್ದೇವೆ ಎನ್ನುವ ಭರವಸೆ ನೀಡಲಾಯಿತು.

 

 

 

 

 

ಇನ್ನು ತಮ್ಮ ಅಭಿಮಾನದ ಸಂಘದವರನ್ನು ಈ ಪ್ರಕರಣದ ಬಗ್ಗೆ ತಿಳಿದುಕೊಂಡ ರಾಕಿಂಗ್ ಸ್ಟಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ , ಅಭಿಮಾನಿಗಳು ತಮ್ಮ ಬಗ್ಗೆ ದಯವಿಟ್ಟು ಮೊದಲು ಜಾಗರೂಕತೆ ವಹಿಸಿ ಎಂಬ ಸಂದೇಶವನ್ನು ರವಾನಿಸಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top