ಅರೋಗ್ಯ

ಚಿಕ್ಕ ಮಕ್ಕಳಿಗೆ ಏನು ತಿನ್ನಲು ಕೊಡಬಾರದು ಗೊತ್ತೇ.

ಚಿಕ್ಕ ಮಕ್ಕಳಿಗೆ ಏನು ತಿನ್ನಲು ಕೊಡಬಾರದು ಗೊತ್ತೇ.

 

ನಾವು ಚಿಕ್ಕ ಮಕ್ಕಳ ಲಾಲನೆ ಪಾಲನೆ ಮಾಡುವಾಗ ಅನೇಕ ವಿಷ್ಯಗಳನ್ನು ಗಮನದಲ್ಲಿ ಇಟ್ಟಿಕೊಳ್ಳಬೇಕು. 1 ವರ್ಷದ ಮಕ್ಕಳನ್ನು ತೀರಾ ಕಾಳಜಿಯಿಂದ ನೋಡಿಕೊಳ್ಳೇಬೇಕು. ನಾವು ಮಕ್ಕಳಿಗೆ ನೀಡುವ ಆಹಾರ ಮಕ್ಕಳ ಬೆಳವಣಿಗೆಗೆ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಶರೀರದಲ್ಲಿ ಯಾವ ಸಮಸ್ಯೆ ಆಗುತ್ತಿದೆ ಎಂದು ಮಕ್ಕಳಿಗೆ ಹೇಳಲು ಸಾಧ್ಯವಾಗುವುದಿಲ್ಲ. ನಾವು ತಿನ್ನುವ ಎಲ್ಲ ಆಹಾರಗಳು ಮಕ್ಕಳಿಗೆ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

 

 

ಮಕ್ಕಳ ದೇಹವು ಬೆಳವಣಿಗೆ ಆಗುತ್ತಿರುವ ಸಂಧರ್ಭದಲ್ಲಿ ನಾವು ಅವರಿಗೆ ನೀಡುವ ಆಹಾರ ಅವರ ಬೆಳವಣಿಗೆ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಚಿಕ್ಕ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪನ್ನು ನೀಡಬಾರದು ಎಂದು ವೈದ್ಯರು ಸೂಚಿಸುತ್ತಾರೆ. 6 ತಿಂಗಳ ಒಳಗಿನ ಮಕ್ಕಳಿಗೆ ಕೇವಲ ತಾಯಿಯ ಎದೆ ಹಾಲನ್ನು ಮಾತ್ರ ಕುಡಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.

 

 

ಮಕ್ಕಳಿಗೆ 6 ತಿಂಗಳ ನಂತರ ವೈದ್ಯರು ಸೂಚಿಸಿದ ಆಹಾರ ನೀಡಬಹುದು ಇದರ ಜೊತೆಗೆ ತಾಯಿಯ ಹಾಲನ್ನು ಕುಡಿಸಬೇಕು. ಆರು ತಿಂಗಳ ನಂತರ ಸ್ವಲ್ಪ ಹಣ್ಣಿನ ರಸವನ್ನು ಅವರಿಗೆ ಕುಡಿಸಬಹುದು. ಆದರೆ ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪನ್ನು ನೀಡಬೇಡಿ ಇದು ಅವರಿಗೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಿಗೆ ನೀಡುವ ಹಣ್ಣಿನ ರಸದಲ್ಲಿ ದೇಹಕ್ಕೆ ಬೇಕಾದ ಅವಶ್ಯ ಸಕ್ಕರೆ ಪ್ರಮಾಣ ವಿರುತ್ತದೆ ಅದರಿಂದ ನಾವು ಕೃತಕ ಸಕ್ಕರೆ ಹೆಚ್ಚಾಗಿ ತಿನ್ನಿಸುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

 

 

ವೈದ್ಯರ ಸಲಹೆ ಮೇರೆಗೆ ಯಾವ ಯಾವ ಕಾಲಕ್ಕೆ ಯಾವ್ಯಾವ ಆಹಾರವನ್ನು ಮಕ್ಕಳಿಗೆ ತಿನ್ನಿಸಬೇಕು ಎಂದು ತಿಳಿದುಕೊಂಡು ಮಕ್ಕಳಿಗೆ ತಿನ್ನಿಸುವ ರೂಢಿಮಾಡಿಕೊಳ್ಳಿ. ಇದರಿಂದ ಮಕ್ಕಳ ಅರೋಗ್ಯ ಉತ್ತಮವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top