ಸಿನಿಮಾ

ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಬದಲು ವಿನೋದ್ ರಾಜ್ ಅವರನ್ನು ಜಡ್ಜ್ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ.

ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಬದಲು ವಿನೋದ್ ರಾಜ್ ಅವರನ್ನು ಜಡ್ಜ್ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ.

ಬಿಗ್ ಬಾಸ್ ವಿಜೇತರಾಗಿರುವ ಚಂದ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿನಡೆಯುತ್ತಿರುವ ‘ಮಾಸ್ಟರ್ ಡ್ಯಾನ್ಸರ್’ ಶೋ ಗೆ ಚಂದನ್ ಜಡ್ಜ್ ಆದ ಮೇಲಂತೂ ಟ್ರೊಲ್ ಗಳ ಸಂಖ್ಯೆ ಈಗ ಜಾಸ್ತಿ ಆಗಿದೆ. ಗಾಯಕ ಚಂದನ ಅವರನ್ನು ಡಾನ್ಸ್ ಶೋ ನಲ್ಲಿ ಜಡ್ಜ್ ಮಾಡಿರುವುದಕ್ಕೆ ಕೆಲವೆಡೆ ಅಪಸ್ವರ ಕೇಳಿಬರುತ್ತಿವೆ.

 

 

 

ಕನ್ನಡ Rapper, ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ರವರ ಬದಲು ಕನ್ನಡ ಚಿತ್ರರಂಗದ ಡಾನ್ಸ್ ಕಿಂಗ್ ಎಂದು ಹೆಸರು ವಾಸಿಯಾಗಿರುವ ವಿನೋದ್ ರಾಜ್ ಅವರನ್ನು ಈ ಕಾರ್ಯಕ್ರಮಕ್ಕೆ ಜಡ್ಜ್ ಮಾಡಿದ್ದರೆ ಸೂಕ್ತವಾಗುತ್ತಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 

 

Unknown Troller ಎಂಬ ಫೇಸ್ಬುಕ್ ಪುಟವು ಚಂದನ್ ಶೆಟ್ಟಿ ಅವರ ಬದಲಿಗೆ ವಿನೋದ್ ರಾಜ್ ಅವರನ್ನು ಜಡ್ಜ್ ಆಗಿ ಮಾಡಿ. ನಿಮ್ಮ ಸಹಮತವಿದ್ದರೆ ಈ ಪೋಸ್ಟ್ ಶೇರ್ ಮಾಡಿ ಏನು ಹೇಳಿದ್ದಾರೆ. ಕರ್ನಾಟಕದಲ್ಲಿ ಇರುವ ಅದ್ಬುತ ಡ್ಯಾನ್ಸರ್ ಗಳಲ್ಲಿ ವಿನೋದ್ ರಾಕ್ ಕೂಡ ಒಬ್ಬರು ಅವರಿಗೆ ಒಳ್ಳೆಯ ಅವರಕಾಶ್ ಸಿಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ.

 

ಈ ಮೊದಲು ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ‘ರಾಕ್ ಅಂಡ್ ರೋಲ್’ ಶೋ ನಲ್ಲಿ ವಿನೋದ್ ರಾಜ್ ಜಡ್ಜ್ ಆಗಿದ್ದರು. ಈಗ ನಡೆಯುತ್ತಿರುವ ‘ಮಾಸ್ಟರ್ ಡ್ಯಾನ್ಸರ್’ ಶೋ ಗೆ ವಿನೋದ್ ರಾಜ್ ಅವರನ್ನು ಜಡ್ಜ್ ಮಾಡಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top