ಸಮಾಚಾರ

“ಕರ್ನಾಟಕದ ಆರು ಕೋಟಿ ಜನತೆಯೇ ನನ್ನ ಆಸ್ತಿ” ಸಿಎಂ ಸಿದ್ದು.

“ಕರ್ನಾಟಕದ ಆರು ಕೋಟಿ ಜನತೆಯೇ ನನ್ನ ಆಸ್ತಿ” ಸಿಎಂ ಸಿದ್ದು.

 

 

ಖಾಸಗಿ ಸಂಸ್ಥೆಯೊಂದರ(ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್) ವರದಿಯ ಪ್ರಕಾರ ದೇಶದ ಶ್ರೀಮಂತ ಮುಖ್ಯಮತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 6ನೇ ಸ್ಥಾನ ಪಡೆದಿದ್ದಾರೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ. ವಿರೋಧ ಪಕ್ಷಗಳು ಟೀಕೆಗಳ ಪ್ರಹಾರವನ್ನೇ ಸಿದ್ದರಾಮಯ್ಯ ನವರ ಮೇಲೆ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಇದೀಗ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನಿಜವಾದ ಆಸ್ತಿ ಯಾವುದು ಎಂಬುದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ. “ಖಾಸಗಿ ಸಂಸ್ಥೆಯೊಂದು ನನ್ನ ಆಸ್ತಿ ವಿವರವನ್ನು ನೀಡಿದೆ. ಆದರೆ ಅದು ನನ್ನೊಬ್ಬನ ಆಸ್ತಿಯಲ್ಲ. ಕಳೆದ (2013) ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ನಮ್ಮ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ ವಿವರ. ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದವೇ ನನ್ನ ನಿಜವಾದ ಆಸ್ತಿ” ಎಂದು ಟ್ವೀಟ್ ಮಾಡುವ ಮೂಲಕ ತಾವು ಜನರ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

 

 

ಈ ಕುರಿತು ಮಾಧ್ಯಮದವರಿಗೆ ಪ್ರತಿಕಿಯೆ ನೀಡಿರುವ ಸಿಎಂ ಸಿದ್ದು 13 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ನಾನು ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನನ್ನೊಬ್ಬನ ಆಸ್ತಿಯಲ್ಲ ನಮ್ಮ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯ ಲೆಕ್ಕವಾಗಿದೆ. 2013ರ ವಿಧಾನಸಭಾ ಚುನಾವಣೆಯ ವೇಳೆ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಆಸ್ತಿಗಳ ವಿವರಗಳನ್ನೂ ಆಯೋಗಕ್ಕೆ ನೀಡಿದ್ದೆ ಎಂದು ಹೇಳಿದ್ದಾರೆ. ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾದೆ ಆದರೀಗ ಈಗ ಕುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ. ” ಎಂದು ಹೇಳಿದ್ದಾರೆ.

ಇದೇ ಸಂಸ್ಥೆ ಇಡೀ ದೇಶದ 31 ರಾಜ್ಯಗಳಲ್ಲಿ ಯಾವುದೇ ಅಪರಾಧದ ಆರೋಪ ಎದುರಿಸದ ಕಳಂಕರಹಿತ ಮತ್ತು ಅಪರಾಧ ರಹಿತ ಮುಖ್ಯಮಂತ್ರಿ ಎಂದೂ ಕೂಡ ವರದಿ ನೀಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top