ಮನೋರಂಜನೆ

ಕಣ್ ಸನ್ನೆಯಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಪ್ರಿಯಾ ಪ್ರಕಾಶ್ ‘ಗೆ FIR ಭೀತಿ.

ಕಣ್ ಸನ್ನೆಯಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಪ್ರಿಯಾ ಪ್ರಕಾಶ್ ‘ಗೆ FIR ಭೀತಿ.

 

 

ಸೋಷಿಯಲ್ ಮೀಡಿಯಾ ಎಂಬುದು ಎಲ್ಲ ಕ್ಷೇತ್ರಗಳನ್ನೂ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಈಗ ಸೋಷಿಯಲ್ ಮೀಡಿಯಾ ಮೂಲಕ ರಾತ್ರೋ ರಾತ್ರಿ ಲಕ್ಷಂತಾರ ಅಭಿಮಾನಿಗಳನ್ನು ಹುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಏಕಾಏಕಿ ಪ್ರಸಿದ್ಧಿಯನ್ನ ಪಡಿಯಬೋದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಮಲೆಯಾಳಂ ಯುವ ನಟ ನಟಿಯರಾದ ಪ್ರಿಯ ವಾರಿಕರ್. ಸದ್ಯ ಇಂಟರ್ನೆಟ್ ಮೂಲೆ ಮೂಲೆಗಳಲ್ಲಿ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಿಯಾ ವಾರಿಯರ್ ಸಾಕಷ್ಟು ಖ್ಯಾತಿಯನ್ನ ಗಳಿಸುತ್ತಿದ್ದಾರೆ.

 

 

ಕಳೆದ ಎರಡು ದಿನಗಳಿಂದ ಇಡೀ ದೇಶದ ಸೋಷಿಯಲ್ ಮೀಡಿಯವನ್ನೇ ಆವರಿಸಿಕೊಂಡಿರುವ ಪ್ರಿಯಾ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾಳೆ. ಒಂದೇ ಒಂದು ಸಣ್ಣ ವೀಡಿಯೊ ಮೂಲಕ ಪಡ್ಡೆ ಹುಡುಗರ ಹೊಸ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಈಕೆ ತೋರಿಸಿದ ಮನಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸನ್ನೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಹಾಡಿನಲ್ಲಿನ ಕೇವಲ ಮೂವತ್ತು ಸೆಕೆಂಡಿನ ವಿಡಿಯೋ ದೇಶದಾದ್ಯಂತ ಹಿಂದೆಂದೂ ಮಾಡಿರಿ ರೀತಿಯಲ್ಲಿ ಜಾದು ಮಾಡಿದ್ದು ಪ್ರೇಮಿಗಳ ದಿನದ ಅಂಗವಾಗಿ ನೆನ್ನೆಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಿದೆ.

 

 

ಈಗ ಬಂದಿರೋ ಹೊಸ ವಿಷಯವೆಂದರೆ ಆಕೆ ನಟಿಸಿದ ಈ ಹಾಡಿನ ಸಾಲಿನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಆರೋಪ ಮಾಡಿ ಹೈದರಾಬಾದ್ ನ ಫಲಕ್ ನಾಮ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಫಾರೂಕ್ ನಗರದ ಮಹಮದ್ ಅಬ್ದಿಕ್ಲ್ ಮುಖೀದ್ ಖಾನ್ ಎಂಬುವವರು ದೂರು ದಾಖಲು ಮಾಡಲಾಗಿದೆ. ಅಲ್ಲದೇ ಈ ಸಂಬಂಧ ಸಿನಿಮಾ ನಿರ್ಮಾಪಕರ ವಿರುದ್ಧವೂ ಕೂಡ ಪ್ರಕರಣ ದಾಖಲು ಮಾಡಲಾಗಿದೆ. ಈ ಹಾಡಿನಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪದ ಬಳಕೆ ಮಾಡಲಾಗಿದೆ ಎಂದು ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ನೀಡಿರುವ ದೂರಿನಲ್ಲಿ ತಿಳಿಸಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top