ಕ್ರೈಂ ಸ್ಟೋರಿ

7 ವರ್ಷದ ಬಾಲಕನನ್ನು ಕೊಂದು 1 ತಿಂಗಳ ಕಾಲ ಸೂಟ್ ಕೇಸ್ ನಲ್ಲಿ ಬಚ್ಚಿಟ್ಟ ಕ್ರೂರಿ.

7 ವರ್ಷದ ಬಾಲಕನನ್ನು ಕೊಂದು 1 ತಿಂಗಳ ಕಾಲ ಸೂಟ್ ಕೇಸ್ ನಲ್ಲಿ ಬಚ್ಚಿಟ್ಟ ಕ್ರೂರಿ.

 

ಐಎಎಸ್ ಆಕಾಂಕ್ಷಿಯೊಬ್ಬ 7 ವರ್ಷದ ಮುದ್ಗ ಬಾಲಕನನ್ನು ಕೊಂದು 1 ತಿಂಗಳ ಕಾಲ ಸೂಟ್ ಕೇಸ್ ನಲ್ಲಿ ಶವವನ್ನು ಬಚ್ಚಿಟ ಅಮಾನವೀಯ ಘಟನೆ ರಾಜ್ಯದ ರಾಜ್ಯಧಾನಿ ನವದೆಹಲಿಯಲ್ಲಿ ನಡೆದಿದೆ.

 

 

ಬಾಲಕನ ಆಶೀಶ್‌ ತಂದೆಯಾಗಿರುವ ಕರಣ್ ಸಿಂಗ್‌ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಸ್ವರೂಪ್ ನಗರ ಪೊಲೀಸ್ ಠಾಣೆಯಲ್ಲಿ ಜನವರಿ 6ರಂದು ದೂರು ದಾಖಲು ಮಾಡಿದ್ದರು. ಅದರ ಅನುಸಾರ ತನಿಖೆ ಆರಂಭಿಸಿದ್ದ ಪೊಲೀಸರು, ಐಎಎಸ್ ಆಕಾಂಕ್ಷಿ ಅವದೇಶ್‌ ಮನೆಯಲ್ಲಿ ತಪಾಸಣೆ ಮಾಡಿದ ಶವ ಇರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

 

 

ಜನವರಿ 6 ರಂದು ಬಾಲಕ ಆಶೀಷ್ ಗೆ ಏನೋ ಸುಳ್ಳು ಆಸೆ ತೋರಿಸಿ ಅವದೇಶ ಎಂಬುವವನು ಅವನನ್ನು ನಂಬಿಸಿ ಅಪಹರಣ ಮಾಡಿದ್ದನು. ಬಾಲಕನ ಬಳಿ ಅವದೇಶ ನು ಬಾಲಕನ ಬಳಿ ನಿನ್ನ ತಂದೆ ಜೊತೆ ಜಗಳವಾಡುವ ವಿಷಯ ಹೇಳಿಕೊಂಡನು. ಆಗ ಬಾಲಕ ನನ್ನ ತಂದೆ ನಿಮ್ಮ ಜೊತೆ ಮಾತನಾಡಬಾರದು ಎಂದು ಹೇಳಿದ್ದಾರೆ ಎಂದಾಗ. ಸಿಟ್ಟಿಗ್ಗೆದ್ದ ಅವದೇಶ ಬಾಲಕನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

 

ಅವದೇಶ್ ಸಕ್ಯ ಬಾಲಕನ ಮೃತದೇಹವನ್ನು ಒಂದು ಸೂಟ್ ಕೇಸ್ ನಲ್ಲಿ ತುಂಬಿ ತನ್ನ ಕೊಠಡಿಯಲ್ಲಿ ಇಟ್ಟಿದ್ದನು ಎಂದು ತಿಳಿದು ಬಂದಿದೆ. ಆ ಪೆಟ್ಟಿಗೆಯಲ್ಲಿದ್ದ ಶವವನ್ನು ಹೊರಕ್ಕೆ ಎಸೆಯಲು ಆತನವು ಕಾಯುತ್ತಿದ್ದ ಆದರೆ ಆತನಿಗೆ ಅವಕಾಶ ಸಿಗದೇ ಸಾಧ್ಯವಾಗಿರಲಿಲ್ಲ . ಎಂದು ತಿಳಿದು ಬಂದಿದೆ. ಆರೋಪಿ ಅವದೇಶ್ ಸಖ್ಯ ನನ್ನ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top