ಮನೋರಂಜನೆ

ರಾಜಕೀಯ ಪಕ್ಷಗಳಿಂದ ಗಡ್ಡಪ್ಪನಿಗೆ ಬಂತು ಭರ್ಜರಿ ಆಫರ್!

ರಾಜಕೀಯ ಪಕ್ಷಗಳಿಂದ ಗಡ್ಡಪ್ಪನಿಗೆ ಬಂತು ಯದ್ವಾ ತದ್ವ ಆಫರ್!

 

 

ಗಡ್ಡಪ್ಪ! ಈ ಹೆಸರು ರಾಮ್ ನಿರ್ದೇಶನದ ‘ ತಿಥಿ ‘ ಚಿತ್ರ ನೋಡಿಲ್ಲವೆಂದಾದರೆ ಯಾವುದೇ ಅಚ್ಚರಿ ಹುಟ್ಟಿಸಲಾರದು. 72ರ ಪ್ರಾಯದ ಗಡ್ಡಪ್ಪ ಇಡೀ ಚಿತ್ರದ ತುಂಬ ಆವರಿಸಿಕೊಂಡಿದ್ದಾರೆ. ಯಾವುದೇ ನಟನೆಯ ತರಬೇತಿಯಿಲ್ಲದ ಗಡ್ಡಪ್ಪ ಚಿತ್ರದಲ್ಲಿ ನೀಡಿರುವ ಅಭಿನಯ ಎಂಥಾ ಪರಿಪೂರ್ಣ ನಟನಿಗೂ ಕಮ್ಮಿಯಿಲ್ಲ. ತಿಥಿ ಚಿತ್ರದ ಬಳಿಕ ಸಾಕಷ್ಟು ಚಿತ್ರಗಳಲ್ಲೂ ನಟಿಸುತ್ತಾ ಬಂದಿದ್ದಾರೆ. ಇದೇ ವಾರ ಅವರು ನಟಿಸಿರುವ ಕಂತ್ರಿ ಬಾಯ್ಸ್ ಚಿತ್ರ ಕೂಡ ತೆರೆ ಕಾಣುತ್ತಿದೆ.

 

 

ಗಡ್ಡಪ್ಪನವರಿಗೆ ಈಗ ಕೇವಲ ಸಿನಿಮಾಗಳಲ್ಲಿ ಮಾತ್ರ ಬೇಡಿಕೆಯಿಲ್ಲ ರಾಜಕೀಯ ಪಕ್ಷಗಳಿಂದಲೂ ತುಂಬಾ ಬೇಡಿಕೆಯಿದೆ. ಹೇಳಿ ಕೇಳಿ ಇದು ಎಲೆಕ್ಷನ್ ಟೈಮು, ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಪಾದವೇ ಗತಿ ಎಂದು ಮತ ಪಡೆಯಲು ಯಾವೆಲ್ಲಾ ರೀತಿಯ ನಾಟಕವಾಡುತ್ತಾರೆ ಎನ್ನುವುದು ನಿಮಗೆ ಹೇಳಬೇಕಿಲ್ಲ. ಮತದಾರನ ಮನೆ ಬಾಗಿಲಿಗೆ ತೆರಳಿ ರಾಜಕೀಯ ದೊಂಬರಾಟ ನಡೆಸುವುದು, ದೊಡ್ಡ ದೊಡ್ಡ ಮಟ್ಟದಲ್ಲಿ ಸಮೇವೇಶ ಕಾರ್ಯಕ್ರಮಗಳನ್ನ ಕೂಡ ನಡೆಸುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಬೇಕಾಗಿರುವುದು ಜನ ಆದರೆ ಅವರೇ ಬರದಿದ್ದರೆ ಹೇಗೆ?? ಆ ಮೂತಿಗಳನ್ನ ನೋಡೋಕೆ ಯಾರ್ ಬರತಾರೆ ಹೇಳಿ ಹಾಗಾಗಿ ಬಣ್ಣದ ಲೋಕದಲ್ಲಿ ಹೆಸರು ಮಾಡಿರುವ ಕೆಲವರನ್ನು ಕರೆದುಕೊಂಡು ಜನರನ್ನು ತಮ್ಮತ್ತ ಸೆಳೆದು ತಮ್ಮ ರಾಜಕೀಯ ಬೆಳೆಗಳನ್ನ ತೀರಿಸಿಕೊಳ್ಳುತ್ತಾರೆ.

ಗಡ್ಡಪ್ಪನವರ ವಿಷಯದಲ್ಲೂ ಇದೇ ಆಗಿರೋದು, ರಾಜ್ಯದ ಮೂರು ಪಕ್ಷಗಳು ಪ್ರಚಾರ ಗಳಿಸಲು ಸದ್ಯ ಗಡ್ಡಪ್ಪನ ಬೆನ್ನು ಹತ್ತಿದ್ದು, ಹಣಕೊಡುತ್ತೇವೆ ಪ್ರಚಾರಕ್ಕೆ ಬನ್ನಿ ಎಂದು ಬೇಡಾಡುತಿದ್ದರಂತೆ. ಆದರೆ ಯಾವುದೇ ಪಕ್ಷದ ಪರ ವಕಾಲತ್ತು ವಹಿಸಿಕೊಳ್ಳಲು ಮನಸು ಮಾಡದ ಗಡ್ದಪ್ಪ ” ಒಬ್ಬರ ಪಕ್ಷಕ್ಕೆ ಹೋದರೆ, ಇನ್ನೊಬ್ಬರ ಪಕ್ಷಕ್ಕೆ ಬೇಜಾರು. ಹಾಗಾಗಿ ಯಾವ ಪಕ್ಷದ ಕಾರ್ಯಕ್ರಮಕ್ಕೂ ನಾನು ಹೋಗೋದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಹೇಳಿ ಈ ರಾಜಕೀಯ ಪಕ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದೇನೆ” ಎಂದು ಹೇಳುತ್ತಾರೆ ಗಡ್ದಪ್ಪ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top