ಮನೋರಂಜನೆ

ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇಲ್ಲಿದೆ ಒಂದೊಳ್ಳೆ ಸಿಹಿಸುದ್ದಿ!

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇಲ್ಲಿದೆ ಒಂದೊಳ್ಳೆ ಸಿಹಿಸುದ್ದಿ!

 

 

ರಾಜಕುಮಾರ ಚಿತ್ರದ ಭರ್ಜರಿ ಗೆಲುವಿನ ನಂತರ ಅಂಜನಿ ಪುತ್ರ ಚಿತ್ರವೂ ಗೆಲುವು ಕಂಡ ಖುಷಿಯಲ್ಲಿರುವವರು ಪುನೀತ್ ರಾಜ್‌ಕುಮಾರ್. ಈ ಹೊತ್ತಿನಲ್ಲಿಯೇ ಅವರ ಮುಂದಿನ ಚಿತ್ರ ಯಾವುದು ಅಂತ ಅವರ ಅಭಿಮಾನಿಗಳಲ್ಲಿಯೇ ಕುತೂಹಲ ಹುಟ್ಟಿಕೊಂಡಿದೆ. ಈಗ ಹರಿದಾಡುತ್ತಿರೋ ಸುದ್ದಿಗಳ ಪ್ರಕಾರ ಪುನೀತ್ ಮುಂದಿನ ಚಿತ್ರ ಎಲ್ಲರ ಪಾಲಿಗೂ ಪಕ್ಕಾ ಸರ್‌ಪ್ರೈಸ್ ಆಗಿ ಮೂಡಿ ಬರಲಿದೆ. ಇದುವರೆಗೂ ಕಾಣಿಸಿಕೊಂಡಿರದ ಪಾತ್ರ ಮತ್ತು ಕಥಾ ವಸ್ತುವನ್ನು ಹೊಂದಿರೋ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

 

 

ಚಿತ್ರ ಬಿಡುಗಡೆಯಾಗಿ 50 ದಿನಗಳೇ ಕಳೆದರು ಅಪ್ಪು ನೆಕ್ಸ್ಟ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿಸಿದೆ. ಸ್ಯಾಂಡಲ್ ವುಡ್ ಮೂಲದ ಮಾಹಿತಿ ಪ್ರಕಾರ ಪುನೀತ್ 3 ಸಿನಿಮಾ ಮಾಡಲು ಬುಕ್ ಆಗಿದ್ದಾರಂತೆ. ಈ ಸುದ್ದಿ ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ. ಈ ಮೂರೂ ಚಿತ್ರದಲ್ಲಿ ಪ್ರಥಮವಾಗಿ ಶೂಟಿಂಗ್ ಪ್ರಾರಂಭ ಮಾಡುವ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಪವನ್ ಒಡೆಯರ್ ನಿರ್ದೇಶನದ ಮಾರ್ಚ್ ಮೊದಲ ವಾರದಲ್ಲಿ ಸೆಟ್ಟರಲಿದೆಯಂತೆ.

 

 

ರಣವಿಕ್ರಮದಲ್ಲಿ‌ ಅಪ್ಪುಗೆ ಆ್ಯಕ್ಷನ್ ಕಟ್ ಹೇಳಿದ್ದ ಪವನ್ ಮತ್ತೊಮ್ಮೆ ಪುನೀತ್ ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಯಾವ ಥರದ ಚಿತ್ರ ಎಂಬ ಕುತೂಹಲ ಸಹಜವೇ. ಈಗ ಹೊರ ಬಿದ್ದಿರೋ ಮಾಹಿತಿಯ ಪ್ರಕಾರವಾಗಿ ನೋಡ ಹೋದರೆ ಅದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾವಂತೆ . ಚಿತ್ರದಲ್ಲಿ ಇ ಬ್ಬರು ಹೀರೋಯಿನ್ ಗಳಿರಲಿದ್ದು ಇದೀಗ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ವಿಶೇಷವೆಂದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರಂತೆ. ಈಗಾಗಲೇ ಸರೋಜಾದೇವಿಯ ಜೊತೆ ಮಾತುಕತೆ ನಡೆಸಿರುವ ಚಿತ್ರತಂಡ ಅವರು ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top