ಅರೋಗ್ಯ

ಬಾಯಿ ಹುಣ್ಣಾಗಿ ಏನು ತಿನ್ನೋಕು ಆಗದೆ ಕಷ್ಟ ಪಡುತ್ತಾ ಇರೋರು ಆಯುರ್ವೇದದ ಬಹಳ ಸುಲಭವಾದ ಈ 6 ಮನೆಮದ್ದುಗಳನ್ನು ಬಳಸ್ಕೊಂಡು ವಾಸಿ ಮಾಡ್ಕೊಳ್ಳಿ

ಬಾಯಿ ಹುಣ್ಣಾಗಿ ಏನು ತಿನ್ನೋಕು ಆಗದೆ ಕಷ್ಟ ಪಡುತ್ತಾ ಇರೋರು ಆಯುರ್ವೇದದ ಬಹಳ ಸುಲಭವಾದ ಈ 6 ಮನೆಮದ್ದುಗಳನ್ನು ಬಳಸ್ಕೊಂಡು ವಾಸಿ ಮಾಡ್ಕೊಳ್ಳಿ

 

 

ಜೇಷ್ಠ ಮಧು

 

 

ಹೊಟ್ಟೆ ಅಥವಾ ಬಾಯಿ ಹುಣ್ಣಿನಿಂದ ಬಳಲುತ್ತಿರುವವರು ಜೇಷ್ಠ ಮಧು ಪುಡಿಯನ್ನು (5 ಗ್ರಾಂ ) ಸ್ವಲ್ಪ (10 ಗ್ರಾಂ ) ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು ಇದು ನಿಮ್ಮ ಹೊಟ್ಟೆಯನ್ನು ಶುಚಿಗೊಳಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಹುಣ್ಣುಗಳಿಗೆ ಕಾರಣವಾಗುವ ಜೀವಾಣುಗಳನ್ನು ತೆಗೆದುಹಾಕುತ್ತದೆ.

 

ತ್ರಿಫಲಾ

 

 

ಮೊದಲಿಗೆ ತ್ರಿಫಲಾ ಚೂರ್ಣ ತಯಾರಿಸುವ ವಿಧಾನ
ಆಮ್ಲ ಕಾಯಿ , ಹರೀತಕಿ , ಬಿಭಿತಕಿ ಇವುಗಳ ಸಮ ಪ್ರಮಾಣವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ಅಥವಾ ಆಗಲೇ ತಯಾರಾಗಿರುವ ಪುಡಿ ಇದ್ದರೆ

ತ್ರಿಫಲಾ ಕಷಾಯ ಮಾಡಲು 1 ಕಪ್ ನೀರಿಗೆ ತ್ರಿಫಲಾದ 1/2 ಟೀಚಮಚವನ್ನು ಮಿಶ್ರಮಾಡಿ. ದಿನಕ್ಕೆ ಒಮ್ಮೆ 1 ರಿಂದ 2 ನಿಮಿಷಗಳ ಕಾಲ ಅದನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಮುಕ್ಕಳಿಸಿ ಉಗಿಯಿರಿ.

 

ಕಲ್ಲು ಸಕ್ಕರೆ

 

8 ಗ್ರಾಂ ಕಲ್ಲು ಸಕ್ಕರೆ ಗೆ 1 ಗ್ರಾಂ ಕರ್ಪೂರ ಬೆರೆಸಿ ಬಾಯಿ ಹುಣ್ಣಾದ ಜಾಗಕ್ಕೆ ಹಚ್ಚಿಕೊಳ್ಳಬೇಕು ಹೀಗೆ ದಿನಕ್ಕೆ ಎರಡು ಬಾರಿ ಹಚ್ಚಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ .

 

ಅಲೋವೆರಾ ಅಥವಾ ಲೋಳೆಸರ

 

ಲೋಳೆಸರದ ಒಳಭಾಗವನ್ನು ತೆಗೆದುಕೊಂಡು ಬಾಯಿ ಹುಣ್ಣಾದ ಜಾಗಕ್ಕೆ ಹಚ್ಚಿಕೊಳ್ಳಬೇಕು ಹೀಗೆ ದಿನಕ್ಕೆ ಎರಡು ಬಾರಿ ಹಚ್ಚಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ .

 

ಉಪ್ಪು ನೀರು

 

ಉಪ್ಪು ನೀರನ್ನು ದಿನಕ್ಕೆ ಒಮ್ಮೆ 1 ರಿಂದ 2 ನಿಮಿಷಗಳ ಕಾಲ ಅದನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಮುಕ್ಕಳಿಸಿ ಉಗಿಯಿರಿ.

 

ಪಟಿಕ ಅಥವಾ ಆಲಂ

 

 

ಪಟಿಕ ಅಥವಾ ಆಲಂ ಪುಡಿಯನ್ನು ಚಿಟಿಕೆ ನೀರಿನಲ್ಲಿ ಅದ್ದಿ ಬಾಯಿ ಹುಣ್ಣಾಗಿರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಬಾಯಿ ತೊಳೆದುಕೊಳ್ಳಬೇಕು .

 

ಇನ್ನು ಹೆಚ್ಚಿನ ಬಾಯಿ ಹುಣ್ಣು ವಾಸಿ ಮಾಡುವ ಮನೆ ಮದ್ದುಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top