ಕ್ರಿಕೆಟ್

25 ವರ್ಷಗಳ ಬಳಿಕ ಆಫ್ರಿಕಾ ನೆಲದಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ!

25 ವರ್ಷಗಳ ಬಳಿಕ ಆಫ್ರಿಕಾ ನೆಲದಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ!

 

 

ದಕ್ಷಿಣ ಆಫ್ರಿಕಾದ ಪೋರ್ಟ್‌ ಎಲಿಜಬೆತ್‌’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಗೆಲುವು ಸಾದಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. 73 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 4-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು. ಸರಣಿಯನ್ನು ಗೆಲ್ಲುವ ಮೂಲಕ 25 ವರ್ಷಗಳ ಬಳಿಕ ಆಫ್ರಿಕಾ ನೆಲದಲ್ಲಿ ವಶಪಡಿಸಿಕೊಂಡ ಕೀರ್ತಿಗೆ ಪಾತ್ರವಾಗಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಭಾರತವನ್ನು ಬ್ಯಾಟಿಂಗ್ ಗೆ ಕಳುಹಿಸಿತು ಇದರಿಂದಾಗಿ ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿಗದಿತ ಐವತ್ತು ಓವರ್ಗಳಲ್ಲಿ 274 ರನ್ ಗಳನ್ನು ಪೇರಿಸಿದ್ದು ಆಫ್ರಿಕಾಗೆ ಗೆಲ್ಲಲು 275 ರನ್ ಗುರಿ ನೀಡಿತ್ತು. 275 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ಕೇವಲ 201 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಶರಣಾಯಿತು.

 


ಸಂಕ್ಷಿಪ್ತ ಸ್ಕೋರ್:

ಭಾರತ ೫೦ ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 275

ರೋಹಿತ್‌ ಶರ್ಮಾ 115,
ವಿರಾಟ್‌ ಕೊಹ್ಲಿ 36,
ಶಿಖರ್‌ ಧವನ್‌ 34,

ಲುಂಗಿಸಾನಿ ಗಿಡಿ 4/51
ಕಗಿಸೊ ರಬಾಡ 1/58 .

ದಕ್ಷಿಣ ಆಫ್ರಿಕಾ 42.2 ಓವರುಗಳಲ್ಲಿ 201 ಆಲೌಟ್.

ಹಾಶೀಂ ಆಮ್ಲಾ 71,
ಕ್ಲಾಸೇನ್ 39
ಡೇವಿಡ್ ಮಿಲ್ಲರ್ 36,
ಮಾರ್ಕ್ರಾಮ್ 32,

ಕುಲದೀಪ್ ಯಾದವ್ 57/4,
ಹಾರ್ದಿಕ್ ಪಾಂಡ್ಯ 30/2
ಯಜುವೇಂದ್ರ ಚಹಾಲ್ 43/2

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top